ಅಕ್ಟೋಬರ್‍ವರೆಗೂ ಈರುಳ್ಳಿ ದರ ಗಗನಮುಖಿ
ಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್‍ವರೆಗೂ ದರ ಏರಿಕೆ ಮುಂದುವರಿಯಲಿದೆ...

ನವದೆಹಲಿ: ಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್‍ವರೆಗೂ ದರ ಏರಿಕೆ ಮುಂದುವರಿಯಲಿದೆ.
2014-15ರ ವಿತ್ತೀಯ ವರ್ಷದಲ್ಲಿ 2 ಕೋಟಿ ಟನ್ ಈರುಳ್ಳಿ ಉತ್ಪಾದನೆಯಾಗಿದೆ. ಈ ಪೈಕಿ ಶೇ.30-35ರಷ್ಟು ಫೆಬ್ರವರಿಯಿಂದ ಏಪ್ರಿಲ್‍ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಾಶವಾಗಿ ಹೋಗಿದೆ ಎಂದು ಮುಂಬೈನ ಸಗಟು ಈರುಳ್ಳಿ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.
``ಪೂರೈಕೆ ಕೊರತೆ ಉಂಟಾಗದಂತೆ ಈರುಳ್ಳಿಯನ್ನು ದಾಸ್ತಾನು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜತೆಗೆ, ರಫ್ತಿಗೆ ಮಿತಿ ಹೇರುವಲ್ಲೂ ವಿಳಂಬ ಮಾಡಿದ್ದಾರೆ. ಪ್ರತಿ ವರ್ಷ ಈರುಳ್ಳಿ ದರ ಏರಿಕೆಯಾಗಲು ಇದೇ ಪ್ರಮುಖ ಕಾರಣ'' ಎಂದು ಬೆಂಗಳೂರು ಕೃಷಿ ಮಾರುಕಟ್ಟೆಯ ಸಗಟು ವ್ಯಾಪಾರಸ್ಥ ಶ್ರೀನಿವಾಸ ಗೌಡ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


