ಸ್ಥಿರದಿಂದ ಧನಕ್ಕೆ
ಭಾರತದ ಕ್ರೆಡಿಟ್ ರೇಟಿಂಗ್ ನ ಭವಿಷ್ಯವನ್ನು `ಧನಾತ್ಮಕ' ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಘೋಷಿಸಿದೆ. ರೇಟಿಂಗ್ `ಸ್ಥಿರ'ದಿಂದ `ಧನಾತ್ಮಕ'ವಾಗಿ ...

ನವದೆಹಲಿ: ಭಾರತದ ಕ್ರೆಡಿಟ್ ರೇಟಿಂಗ್ ನ ಭವಿಷ್ಯವನ್ನು `ಧನಾತ್ಮಕ' ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಘೋಷಿಸಿದೆ. ರೇಟಿಂಗ್ `ಸ್ಥಿರ'ದಿಂದ `ಧನಾತ್ಮಕ'ವಾಗಿ ಬದಲಾಗಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಜನರಿಗೆ ಮತ್ತಷ್ಟು ಭರವಸೆ ಮೂಡುವಂತೆ ಮಾಡಿದೆ. ಜತೆಗೆ, ಅಚ್ಛೇ ದಿನ್ ಸಮೀಪಿಸುತ್ತಿದೆ ಎಂಬ
ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಗುರುವಾರ ರೇಟಿಂಗ್‍ನ ಭವಿಷ್ಯವನ್ನು ಘೋಷಿಸಿದ ಮೂಡೀಸ್, ಭಾರತವು ಕಳೆದ ದಶಕದಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ. ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳು ದೇಶದ ಆರ್ಥಿಕ ಬಲಿಷ್ಠತೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಿದೆ. ಜತೆಗೆ, ಮುಂದಿನ 12-18 ತಿಂಗಳಲ್ಲಿ
ದೇಶವು ರೇಟಿಂಗ್‍ನಲ್ಲಿ ಇನ್ನಷ್ಟು ಶ್ರೇಷ್ಠ ಸ್ಥಾನ ಪಡೆಯಲಿದೆ ಎಂದೂ ಮೂಡೀಸ್ ಅಭಿಪ್ರಾಯಪಟ್ಟಿದೆ. ಈ ಹಿಂದೆ ಮೂಡೀಸ್ ಭಾರತಕ್ಕೆ `ಬಿಎಎ3'
(ಕಳಪೆಗಿಂತ ಒಂದು ಹೆಜ್ಜೆ ಮೇಲೆ) ರೇಟಿಂಗ್ ನೀಡಿತ್ತು. ಮೂಡೀಸ್ ರೇಟಿಂಗ್ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತದ ರೇಟಿಂಗ್
ಭವಿಷ್ಯ ಮೇಲ್ದರ್ಜೆ ಗೇರಿರುವುದು ಸಂತಸದ ವಿಚಾರ. ಆದರೆ ಸರ್ಕಾರವು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ ಎಂದಿದ್ದಾರೆ.
ಸೆನ್ಸೆಕ್ಸ್ 177 ಅಂಕ ಏರಿಕೆ
ಸತತ 5ನೇ ದಿನವೂ ಮುಂಬೈ ಷೇರುಪೇಟೆಯಲ್ಲಿ ಏರಿಕೆಯ ಹಬ್ಬ. ಅದರಲ್ಲೂ ದೇಶದ ಕ್ರೆಡಿಟ್ ರೇಟಿಂಗ್ ಅನ್ನು ಧನಾತ್ಮಕ ಎಂದು ಮೂಡೀಸ್ ಕರೆದಿರುವುದು ಹೂಡಿಕೆದಾರರಲ್ಲಿ ಇನ್ನಿಲ್ಲದ ಖುಷಿ ಮೂಡಿಸಿದೆ. ಗುರುವಾರ ಎಲ್ಲರೂ ಷೇರು ಖರೀದಿಯಲ್ಲಿ ಭಾರಿ ಆಸಕ್ತಿ ವಹಿಸಿದ ಕಾರಣ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ
177 ಅಂಕ ಏರಿಕೆಯÁಗಿ, 28,885ರಲ್ಲಿ ಕೊನೆಗೊಂಡಿತು. ನಿಫ್ಟಿ 63 ಅಂಕ ಏರಿಕೆಯಾ ಗಿ, 8,778ರಲ್ಲಿ ವಹಿವಾಟು ಅಂತ್ಯಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


