ಬಡ್ಡಿ ದರ ಯಥಾಸ್ಥಿತಿ
ಗೃಹ, ವಾಹನ ಸಾಲ ಪಡೆದವರಿಗೆ ಈ ಬಾರಿ ನಿರಾಶೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಸಾಲದ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ...

ಮುಂಬೈ: ಗೃಹ, ವಾಹನ ಸಾಲ ಪಡೆದವರಿಗೆ ಈ ಬಾರಿ ನಿರಾಶೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಸಾಲದ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಮಂಗಳವಾರ ಪ್ರಕಟವಾದ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‍ಬಿಐ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ .
ಆದರೆ, ಕಳೆದ ಬಾರಿಯ ಬಡ್ಡಿ ದರ ಇಳಿಕೆಯ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಬ್ಯಾಂಕುಗಳ ನಿಲುವಿಗೆ ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಕೆಂಡಕಾರಿದ್ದಾರೆ. ಸಾಲದ ಮೇಲಿನ ವೆಚ್ಚ ಹೆಚ್ಚಾಗಿರುವ ಕಾರಣ ಬಡ್ಡಿ ದರ ಇಳಿಕೆ ಮಾಡಿಲ್ಲ ಎಂಬ ಬ್ಯಾಂಕ್ಗಳ ವಾದವನ್ನು `ಮೂರ್ಖತನ ಎಂದು ಹೇಳಿದ್ದಾರೆ . ಆರ್‍ಬಿಐ ಒತ್ತಡಕ್ಕೆ ಕೊನೆಗೂ ಮಣಿದ ಎಸ್‍ಬಿಐ ಹಾಗೂ ಎಚ್‍ಡಿಎಫ್ ಸಿ ಬ್ಯಾಂಕುಗಳುಸಾಲದ ಮೇಲಿನ ಬಡ್ಡಿ ದರವನ್ನು ಶೇ.0.15 ಇಳಿಕೆ ಮಾಡಿವೆ. ಹೀಗಾಗಿ ಈ ಬ್ಯಾಂಕ್ ಗಳ ಬಡ್ಡಿ ದರ ಶೇ.10ರಿಂದ ಶೇ.9.85ಕ್ಕಿಳಿದಿದೆ. ಬಡ್ಡಿ ದರ ಏರಿಕೆಯಿಲ್ಲ: ದೇಶದ ಹಲವೆಡೆ ಸುರಿದ ಅಕಾಲಿಕ ಮಳೆಯು ಆಹಾರ ವಸ್ತುಗಳ ದರವನ್ನು ಗಗನಕ್ಕೇರಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಆರ್‍ಬಿಐ ಬಡ್ಡಿ ದರದಲ್ಲಿ ಇಳಿಕೆ ಮಾಡಲಿಲ್ಲ. ಹಾಗಾಗಿ ರೆಪೋ ದರ ಶೇ.7.5 ಹಾಗೂ ನಗದು ಮೀಸಲು ಅನುಪಾತ ಶೇ.4 ಆಗಿಯೇ ಮುಂದುವರಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


