ಭಾರತ ತೆರಿಗೆದಾರರ ಸ್ವರ್ಗವಲ್ಲ, ಬಾಕಿ ಪಾವತಿಸಿ
`ನ್ಯಾಯಬದ್ಧವಾದ ತೆರಿಗೆ ಬೇಡಿಕೆಯನ್ನು `ತೆರಿಗೆ ಭಯೋತ್ಪಾದನೆ' ಎಂದು ಪರಿಗಣಿಸಲಾಗದು. ಏಕೆಂ ದರೆ ಭಾರತವೇನೂ ತೆರಿಗೆದಾರರ...

ನವದೆಹಲಿ: `ನ್ಯಾಯಬದ್ಧವಾದ ತೆರಿಗೆ ಬೇಡಿಕೆಯನ್ನು `ತೆರಿಗೆ ಭಯೋತ್ಪಾದನೆ' ಎಂದು ಪರಿಗಣಿಸಲಾಗದು. ಏಕೆಂ ದರೆ ಭಾರತವೇನೂ ತೆರಿಗೆದಾರರ ಸ್ವರ್ಗವಲ್ಲ.' ಸುಮಾರು 100 ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್ ಐಐ)ದಾರರಿಗೆ ತೆರಿಗೆ ನೋಟಿಸ್ ಕಳುಹಿಸಿದ ಸರ್ಕಾರದ ನಿರ್ಧಾರವನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಈ ರೀತಿ ಸಮರ್ಥಿಸಿಕೊಂಡಿದ್ದಾರೆ.
ಭಾರತ ದುರ್ಬಲ ರಾಷ್ಟ್ರವಲ್ಲ: ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಜೇಟ್ಲಿ, ತೆರಿಗೆ ಪಾವತಿಸದ ಎಫ್ಐಐಗಳ ವಿರುದ್ಧ ಸ್ವಲ್ಪ ಖಡಕ್ ಎಂಬಂತೆಯೇ ಪ್ರತಿಕ್ರಿಯಿಸಿ ದ್ದಾರೆ. ನ್ಯಾಯಬದ್ಧವಾಗಿ ಕೇಳುವ ತೆರಿಗೆಯನ್ನೂ `ತೆರಿಗೆ ಭಯೋ ತ್ಪಾದನೆ' ಎಂದು ಹೇಳಲು ಭಾರತವೇನೂ ದುರ್ಬಲ ರಾಷ್ಟ್ರವಲ್ಲ. ನಾವು ತೆರಿಗೆಗಳ್ಳರಿಗೆ ಆಶ್ರಯ ನೀಡುವವರೂ ಅಲ್ಲ, ಹಾಗಾಗಲು ಬಯಸುವುದೂ ಇಲ್ಲ. ಯಾವ ತೆರಿಗೆಯನ್ನುಪಾವತಿಸಬೇಕೋ ಅದನ್ನು ಪಾವತಿಸಲೇ ಬೇಕು ಎಂದಿದ್ದಾರೆ ಜೇಟ್ಲಿ. ಭಾನುವಾರವಷ್ಟೇ ಆದಾಯ ತೆರಿಗೆ ಇಲಾಖೆಯು ರು. 300-400 ಕೋಟಿ ತೆರಿಗೆ ಬಾಕಿ ಉಳಿಸಿದ ಎಫ್ ಐಐಗಳಿಗೆ ನೋಟಿಸ್ ಜಾರಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


