ವಾಣಿಜ್ಯ

ಐಫೋನ್ 6 ಪ್ಲಸ್‌ಗೆ ಬಾಗುವಿಕೆಯ ದೂರು

ಐಫೋನ್ 6 ಪ್ಲಸ್ ಖರೀದಿಸಿದವರಿಗೆಲ್ಲ ಹೊಸ ಸಮಸ್ಯೆ ಕಾಡಲಾರಂಭಿಸಿದೆ. ಅದೇನು ಗೊತ್ತೇ?.

ಐಫೋನ್ 6 ಪ್ಲಸ್‌ಗೆ ಬಾಗುವಿಕೆಯ ದೂರು
ಚಿತ್ರಕೃಪೆ: ಅನ್‌ಬಾಕ್ಸ್ ಥೆರಪಿ (ಯೂಟ್ಯೂಬ್)
Published On :

ನವದೆಹಲಿ: ಐಫೋನ್ 6 ಪ್ಲಸ್ ಖರೀದಿಸಿದವರಿಗೆಲ್ಲ ಹೊಸ ಸಮಸ್ಯೆ ಕಾಡಲಾರಂಭಿಸಿದೆ. ಅದೇನು ಗೊತ್ತೇ?. ಅದನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡಿದ ಕೂಡಲೇ ಅದು ಕೊಂಚ ಬಾಗಿದಂತಾಗುತ್ತದಂತೆ. ಅದಕ್ಕೆ ಪೂರಕವಾಗಿ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡಾ ಐಫೋನ್ 6 ಖರೀದಿ ಮಾಡಿದವರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆಯಂತೆ. ಏಕಾಏಕಿ ಇಂಥ ಒಂದು ಬೆಳವಣಿಗೆಯಾಗಿರುವುದು ಐಫೋನ್ ಪ್ರಿಯರಿಗೆ ಬರಸಿಡಿಲು ಬಂದಂತಾಗಿದೆ. ಕೆಲವರ ಅನುಭವ ಹೇಗಿದೆಯೆಂದರೆ ಬಾಗಿದ ಫೋನ್  ಅನ್ನು ಮತ್ತೆ ದುರಸ್ತಿ ಮಾಡಲು ಸಾಧ್ಯವಾಗದಂಛ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಕೂಡ ಇದೇ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ವೆಬ್‌ಸೈಟ್ ಒಂದರಲ್ಲಿ ಹಾಕಲಾಗಿರುವ ಪೋಸ್ಟ್ ಪ್ರಕಾರ ಗ್ರಾಹಕರೊಬ್ಬರು ಖರೀದಿಸಿದ ಐಫೋನ್  6 ಪ್ಲಸ್ ಎರಡು ದಿನಗಳ ಬಳಿಕ ಕೊಂಚ ಬಾಗಿದ್ದು ಕಂಡುಬಂತು ಎಂದು ಹೇಳಿದ್ದಾರೆ. ಐಫೋನ್‌ನ ಚೇಸಿಸ್ ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ. ಅದನ್ನು ಹೇಗೆ ತಯಾರಿಸಲಾಗಿದೆ ಎಂಬುದು ಅತ್ಯಂತ ರಹಸ್ಯವಾಗಿಡಲಾಗಿದೆ. ಫೋನ್‌ಗಳ ಬಾಗುವಿಕೆಯ ದೂರು ಸೋನಿ ಎಕ್ಸ್‌ಪಿರಿಯಾ ಜೆಡ್ 1 ಫೋನ್‌ನಲ್ಲಿಯೂ ಕಂಡುಬಂದಿದೆಯಂತೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.