ವಾಣಿಜ್ಯ

ಮೋದಿ ಕನಸಿನ ಕೂಸು "ಐಕ್ಯತೆಯ ಪುತ್ತಳಿ" ನಿರ್ಮಿಸಲಿರುವ ಎಲ್&ಟಿ

ಭಾರತದ ಮೊದಲ ಗೃಹ ಮಂತ್ರಿ, ಸ್ವಾತಂತ್ರ ಹೋರಾಟಗಾರ ಸರದಾರ್ ವಲ್ಲಭಾಯ್ ಪಟೇಲ್ ಅವರ ಪ್ರತಿಮೆ - ನರೇಂದ್ರ ಮೋದಿಯವರ ಕನಸಿನ ಕೂಸು...

ಮೋದಿ ಕನಸಿನ ಕೂಸು "ಐಕ್ಯತೆಯ ಪುತ್ತಳಿ" ನಿರ್ಮಿಸಲಿರುವ ಎಲ್&ಟಿ
Published On :

ಗಾಂಧಿನಗರ: ಭಾರತದ ಮೊದಲ ಗೃಹ ಮಂತ್ರಿ, ಸ್ವಾತಂತ್ರ ಹೋರಾಟಗಾರ ಸರದಾರ್ ವಲ್ಲಭಾಯ್ ಪಟೇಲ್ ಅವರ ಪ್ರತಿಮೆ - ನರೇಂದ್ರ ಮೋದಿಯವರ ಕನಸಿನ ಕೂಸು ಎಂದೇ ಬಣ್ಣಿಸಲಾಗುವ  ವಿಶ್ವದ ಅತಿ ದೊಡ್ಡ "ಐಕ್ಯತೆಯ ಪುತ್ತಳಿ"ಯ ಕಾರ್ಯಯೋಜನೆಯನ್ನು ಲಾರ್ಸೆನ್ ಅಂಡ್ ಟೂಬ್ರೊ (ಎಲ್&ಟಿ) ಸಂಸ್ಥೆ ಗುಜರಾತ್ ರಾಜ್ಯ ಸರ್ಕಾರದಿಂದ ಟೆಂಡರ್ ನಲ್ಲಿ ಪಡೆದುಕೊಂಡಿದೆ.

೧೮೨ ಮೀಟರ್ ಉದ್ದದ ಸರದಾರ್ ಪಟೇಲ್ ಅವರ ಈ ಪ್ರತಿಮೆಯನ್ನು ೨೯೭೯ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಗುಜರಾತ್ ನ ಮುಖ್ಯಮಂತ್ರಿ ಆನಂದಿ ಪಟೇಲ್ ತಿಳಿಸಿದ್ದಾರೆ.

"ಈ ಬೃಹತ್ ಪ್ರತಿಮೆಯನ್ನು ನಾಲ್ಕು ವರ್ಷಗಳಲ್ಲಿ ೨೯೭೯ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತೇವೆ. ಇದರ ಗುತ್ತಿಗೆಯನ್ನು ದೇಶದ ಪ್ರಮುಖ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಎಲ್&ಟಿ ಗೆ ನೀಡಲಾಗಿದೆ" ಎಂದು ಪಟೇಲ್ ತಿಳಿಸಿದ್ದಾರೆ.

ಈ ೧೮೨ ಮೀಟರ್ ಉದ್ದದ "ಐಕ್ಯತಾ ಪುತ್ತಳಿ" ನ್ಯೂಯಾರ್ಕಿನ "ಸ್ಟಾಚ್ಯೂ ಆಫ್ ಲಿಬರ್ಟಿ" ಗಿಂತ  ದುಪ್ಪಟ್ಟು ದೊಡ್ಡದಾಗಿರುತ್ತದೆ ಎಂದು ಪಟೇಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.