ಇಲ್ಲಿ ಮೊಬೈಲ್ ತುಟ್ಟಿ
'ಹೊಟ್ಟಿಗೆ ಹಿಟ್ಟಿಲ್ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವ ಕಾಲ ಹಳತಾಯ್ತು. ಈಗ ಹೊಟ್ಟೆಗೆ...

'ಹೊಟ್ಟಿಗೆ ಹಿಟ್ಟಿಲ್ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವ ಕಾಲ ಹಳತಾಯ್ತು. ಈಗ ಹೊಟ್ಟೆಗೆ ರೊಟ್ಟಿ ಇಲ್ದಿದ್ರೂ ಕೈಲೊಂದು ಮೊಬೈಲು ಅನ್ನುವ ಕಾಲ.
ಹೊಸ ಸರ್ವೇ ಪ್ರಕಾರ, ಭಾರತೀಯರು ಅಮೆರಿಕನ್ನರಿಗಿಂತ ತಲಾ ಹೆಚ್ಚು ಹಣವನ್ನು ಮೊಬೈಲ್‌ಗಾಗಿ ವ್ಯಯಿಸುತ್ತಿದ್ದಾರೆ. ಮೊಬೈಲ್‌ಗಾಗಿ ಹೆಚ್ಚು ತಲಾದಾಯ ವೆಚ್ಚ ಮಾಡುವ ರಾಷ್ಟ್ರಗಳಲ್ಲಿ ಭಾರತ 83ನೇ ಸ್ಥಾನದಲ್ಲಿದೆ. ಅಂದ್ರೆ, ಭಾರತಕ್ಕೂ ಮೊದಲಿನ 82 ಸ್ಥಾನಗಳಲ್ಲಿರುವ ದೇಶಗಳಲ್ಲಿ ಸೆಲ್‌ಫೋನ್ ಬಳಕೆಗಾಗಿ ವ್ಯಯವಾಗುವ ಹಣ ಇಲ್ಲಿಗಿಂತ ಕಡಿಮೆ. ಈ ಮೊದಲಿನ ದೇಶಗಳಲ್ಲಿ ಅಮೆರಿಕ, ಹಾಂಗಾಂಗ್, ಚೀನಾ, ಸಿಂಗಾಪುರ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮುಂತಾದವು ಇವೆ.
ಇದು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಸಿದ್ಧಪಡಿಸಿದ ವರದಿಯಲ್ಲಿ ಗೊತ್ತಾದ ಅಂಶ. ಭಾರತೀಯರು ತಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 2.23ನ್ನು ಮೊಬೈಲ್‌ಗಾಗಿ ಕಳೆಯುತ್ತಿದ್ದಾರೆ. ಇದು, ಭಾರತೀಯರ ಮೊಬೈಲ್ ಬಳಕೆ ಹೆಚ್ಚು ಎಂಬುದನ್ನೇನೂ ಸೂಚಿಸುತ್ತಿಲ್ಲ. ಬದಲಾಗಿ, ಆ ಇತರೆ ದೇಶಗಳಿಗಿಂತ ಇಲ್ಲಿ ಮೊಬೈಲ್ ದರಗಳು ತುಟ್ಟಿ ಎಂಬುದನ್ನೇ ಸೂಚಿಸುತ್ತಿವೆ. ಚೀನಾ ಕೂಡಾ ಶೇ. 0.78 ಉತ್ಪನ್ನ ವೆಚ್ಚ ಮಾಡುತ್ತ 28ನೇ ಸ್ಥಾನದಲ್ಲಿದೆ.
ಬ್ರಾಡ್ ಬ್ಯಾಂಡ್ ಸೇವೆಗಳಲ್ಲಿ ಕೂಡಾ ಭಾರತ ತುಟ್ಟಿ. ಅದು 81ನೇ ಸ್ಥಾನದಲ್ಲಿದೆ. ಪ್ರಿಪೇಯ್ಡ್ ಮೊಬೈಲ್ ಸೇವೆಯಲ್ಲಿ ಜಗತ್ತಿನ ಸರಾಸರಿ 4 ಶೇಕಡದಷ್ಟಿದ್ದರೆ, ಭಾರತದ್ದು ಶೇ. 6.2ರ ಆಸುಪಾಸಿನಲ್ಲಿದೆ. ಇನ್ನು ಪೋಸ್ಟ್ ಪೇಯ್ಡ್ ಸೇವೆಯಲ್ಲಂತೂ ನಮ್ಮ ಸ್ಥಾನ 92. ಚೀನಾ ನಮಗಿಂತ ಮೇಲೆ, 63ರಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


