ವಾಣಿಜ್ಯ

ಹೊರೆಯಿಲ್ಲದ ತೆರಿಗೆ ನೀತಿ

ಭಾರತವನ್ನು ಕಡಿಮೆ ವೆಚ್ಚದ ಉತ್ಪಾದನಾ ಹಬ್ ಅನ್ನಾಗಿ ಪರಿವರ್ತಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ...

ಹೊರೆಯಿಲ್ಲದ ತೆರಿಗೆ ನೀತಿ
ಅರುಣ್ ಜೇಟ್ಲಿ
Published On :

ನವದೆಹಲಿ: ಭಾರತವನ್ನು ಕಡಿಮೆ ವೆಚ್ಚದ ಉತ್ಪಾದನಾ ಹಬ್ ಅನ್ನಾಗಿ ಪರಿವರ್ತಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ. ತೆರಿಗೆದಾರರಿಗೆ ಯಾವುದೇ ರೀತಿಯ ಹೆಚ್ಚುವರಿ ಹೊರೆ ಉಂಟು ಮಾಡದಂತೆ, ಕಠಿಣವಲ್ಲದ ತೆರಿಗೆ ನೀತಿ ಜಾರಿ ಮಾಡುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜತೆಗೆ, ಪ್ರತಿಪಕ್ಷಗಳು ಬೆಂಬಲ ನೀಡದಿದ್ದರೂ ಸರ್ಕಾರವು ಕಠಿಣ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತರಲಿದೆ ಎಂದೂ ಅವರು ಘೋಷಿಸಿದ್ದಾರೆ.


ತೆರಿಗೆದಾರರಿಗೆ ಹೊರೆಯಾಗದು
: ಭಾರತದ ಆರ್ಥಿಕತೆಯು ಭಾರಿ ಸವಾಲನ್ನು ಎದುರಿಸುತ್ತಿದೆ . ಹಾಗಾಗಿ ಸಮರ್ಥನೀಯ ಹಾಗೂ ನ್ಯಾಯ ಸಮ್ಮತ ತೆರಿಗೆ ನೀತಿಯ ಅಗತ್ಯವಿದೆ. ತೆರಿಗೆದಾರರಿಗೆ .ಯಾವುದೇ ಕಿರಿಕಿರಿ ಉಂಟು ಮಾಡದಂತೆ, ಅವರಿಗೆ ಹೊರೆಯಾಗದಂತೆ ತೆರಿಗೆ ನೀತಿ ಜಾರಿಗೆ ತರುತ್ತೇವೆ ಎಂದಿದ್ದಾರೆ ಜೇಟ್ಲಿ. ಇದೇ ವೇಳೆ, ದೇಶದಲ್ಲಿ ಉತ್ಪಾದನಾ ಕ್ಷೇತ್ರವು ತುಂಬಾ ಹಿಂದುಳಿದಿದೆ. ನಾವು ಕಡಿಮೆ ವೆಚ್ಚದ ಉತ್ಪಾದನಾ ಹಬ್ ಅನ್ನಾಗಿ ಭಾರತವನ್ನು ಪರಿವರ್ತಿಸಬೇಕಿದೆ ಎಂದೂ ಹೇಳಿದ್ದಾರೆ. ಭೂಸ್ವಾಧೀನ ಕಾಯ್ದೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಲೇಬೇಕಾಗಿದೆ. ಈ ವಿಚಾರದಲ್ಲಿ ಮೊದಲು ನಾವು ಪ್ರತಿಪಕ್ಷಗಳೊಂದಿಗೆ ಒಮ್ಮತ ಮೂಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎನ್ನುವ ಮೂಲಕ ಜೇಟ್ಲಿ ಅವರು ಕಾಯ್ದೆಯ ತಿದ್ದುಪಡಿ ಖಚಿತ ಎಂಬ ಸುಳಿವನ್ನು ನೀಡಿದ್ದಾರೆ. ದೇಶದಲ್ಲಿ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ ಪಡಿಸಬೇಕೆಂದರೆ ಮೊದಲು ಭೂಕಾಯ್ದೆಯಲ್ಲಿನ ಅಡೆತಡೆಗಳನ್ನು ನಿವಾರಿಸುವುದು ಅತ್ಯಗತ್ಯ ಎಂದೂ ಜೇಟ್ಲಿ ಹೇಳಿದ್ದಾರೆ.

ಮುಂದಿನ ಅಧಿವೇಶನದಲ್ಲಿ ಮಂಡನೆ: ವಿಮಾ ಕ್ಷೇತ್ರದಲ್ಲಿ ಶೇ. 26ರ ಬದಲಾಗಿ ಶೇ. 49ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡುವ ವಿಮಾ ಮಸೂದೆಯನ್ನು ಮುಂದಿನ ಚಳಿಗಾಲದ  ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿ ಸಚಿವ ಜೇಟ್ಲಿ ತಿಳಿಸಿದ್ದಾರೆ. ಒಂದು ತಿಂಗಳ ಕಾಲ ನಡೆಯಲಿರುವ ಅಧಿವೇಶನ ನ. 24 ರಿಂದ ಆರಂಭವಾಗಲಿದೆ.
ಅಂತಿಮ ಹಂತದಲ್ಲಿ ಜಿಎಸ್‌ಟಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ತಿದ್ದುಪಡಿಯನ್ನು ಅಧಿವೇಶನದಲ್ಲಿ ಮುಂಡಿಸುವ ಸುಳಿಯನ್ನೂ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.