ಐಐಟಿ-ಕರಗ್ ಪುರ ವಿದ್ಯಾರ್ಥಿಯ ವಾರ್ಷಿಕ ವೇತನ ೯೧ ಲಕ್ಷ!
ಬಹುರಾಷ್ಟ್ರೀಯ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕಾಲೇಜ್ ಕ್ಯಾಂಪಸ್ಸಿನಿಂದಲೇ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ..

ಕೊಲ್ಕತ್ತಾ: ಬಹುರಾಷ್ಟ್ರೀಯ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕಾಲೇಜ್ ಕ್ಯಾಂಪಸ್ಸಿನಿಂದಲೇ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಇನ್ನೂ ಒಂದು ತಿಂಗಳು ಬಾಕಿಯಿದ್ದು, ಐಐಟಿ ಕರಗ್ ಪುರ ವಿದ್ಯಾರ್ಥಿಗಳಿಗೆ ಆಗಲೇ ಉದ್ಯೋಗಾವಕಾಶಗಳ ದಂಡೇ ಒದಗಿದೆ.
ಐಐಟಿ ಅಧಿಕಾರಿಗಳ ಪ್ರಕಾರ ಆಗಲೇ ೧೨೫ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿದ್ದು, ಹಿಂದಿನ ವರ್ಷಕ್ಕಿಂತ ಈ ವರ್ಷ ಅವರ ವಾರ್ಷಿಕ ವೇತನದಲ್ಲಿ ೨೦% ಹೆಚ್ಚಳ ಕಂಡಿದೆ ಎಂದಿದ್ದಾರೆ.
ಇಲ್ಲಿಯವರೆಗೂ ಅತಿ ಹೆಚ್ಚಿನ ಅಂದರೆ ೯೧ ಲಕ್ಷ ವಾರ್ಷಿಕ ವೇತನವನ್ನು ಒಬ್ಬ ವಿದ್ಯಾರ್ಥಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗೂಗಲ್ ಮೌಂಟೈನ್ ವ್ಯೂ, ಫೇಸ್ ಬುಕ್ ಮುಂತಾದ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಉದ್ಯೋಗಗಳ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದ್ದು, ಡಿಸೆಂಬರ್ ೧ ರ ನಂತರ ಇದು ಹೆಚ್ಚಲಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


