ಕ್ಲೈಮ್ ಗ್ಯಾರಂಟಿ

ಬೆಂಗಳೂರು: ರಿಲಯನ್ಸ್ ಲೈಫ್ ಇನ್ಷೂರೆನ್ಸ್ ವಿಶಿಷ್ಟ ಗ್ರಾಹಕ ಕೇಂದ್ರಿತ ಸೇವಾ ಆಂದೋಲನ 'ಕ್ಲೈಮ್ ಗ್ಯಾರಂಟಿ'ಯನ್ನು ಆರಂಭಿಸಿದೆ. ಕಂಪನಿಯು ಅತ್ಯಂತ ಅಲ್ಪಾವಧಿಯಲ್ಲಿ ಮರಣ ಹಕ್ಕುಬಾಧ್ಯತೆಯನ್ನು ನಿರ್ಧರಿಸಲು ಕ್ಲೈಮ್ ಗ್ಯಾರಂಟಿಯನ್ನು ಪ್ರಾರಂಭಿಸಿದ್ದು ಕೇವಲ ಎರಡು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಎಲ್ಲಾ ಹಕ್ಕುಬಾಧ್ಯತೆಗಳನ್ನು ನಿರ್ಧರಿಸುತ್ತದೆ. ಇಲ್ಲವಾದಲ್ಲಿ ಯಾವುದೇ ವಿಳಂಬಕ್ಕಾಗಿ ಬಡ್ಡಿ ಪಾವತಿಸುವ ಭರವಸೆ ನೀಡಿದೆ. ಕಂಪನಿಯು ನಾಮಿನಿಯಿಂದ ಹಕ್ಕುದಾರನಿಗೆ ಎಲ್ಲಾ ಅಗತ್ಯ ಮರಣ ಹಕ್ಕುಬಾಧ್ಯತೆ ದಾಖಲೆಗಳ ರಸೀದಿ ಸಲ್ಲಿಸಿದ 12 ಕೆಲಸದ ದಿನದೊಳಗೆ ಹಕ್ಕುಬಾಧ್ಯತೆ ನೀಡುವ ಭರವಸೆ ನೀಡಿದೆ. ಇದು ಪಾಲಿಸಿದಾರನ ಕನಿಷ್ಠ ಮೂರು ಪಾಲಿಸಿ ವರ್ಷಗಳನ್ನು ಪೂರೈಸಿ ಪೂರ್ಣ ಪ್ರೀಮಿಯಂ ಪಾವತಿ ಮಾಡಿದ್ದಲ್ಲಿ ಮತ್ತು ಹಕ್ಕುಬಾಧ್ಯತೆಗೆ ಸಂಬಂಧಿಸಿದ ಅರ್ಜಿದಾಖಲೆಗಳನ್ನು ಸಲ್ಲಿಸಿದಲ್ಲಿ ನೀಡಲಾಗುತ್ತದೆ. ವಿಶಿಷ್ಟ ಹಕ್ಕುಬಾಧ್ಯತಾ ಭರವಸೆ ಅನುಪಾತವೆಂದರೆ, ನಿರ್ಧಾರ ತಿರಸ್ಕೃತವಾದಲ್ಲಿ ಮತ್ತು 12ದಿನಗಳ ಸಮಯದ ಅವಧಿಯನ್ನು ಮೀರಿದಲ್ಲಿ ಕಂಪನಿಯ ಗ್ರಾಹಕರಿಗೆ ವಾರ್ಷಿಕ 6.5ಪ್ರತಿಶತ ಬಡ್ಡಿ ಪಾವತಿಸುತ್ತದೆ.
ಆಹಾರ ಪೋರ್ಟ್ಫೋಲಿಯೋ ವಿಸ್ತರಣೆ
ಅದಾನಿ ವಿಲ್ಮರ್ 'ಫಾರ್ಚೂನ್ ಸೋಯಾ ಬಡೀ' ವಂಡರ್ ನಗೆಟ್ಸ್ಗಳನ್ನು ಪ್ರಾರಂಭಿಸುವ ಮೂಲಕ ಬ್ರ್ಯಾಂಡೆಡ್ ಆಹಾರದ ಪೋರ್ಟ್ಫೋಲಿಯೋ ವಿಸ್ತರಿಸಿದೆ. ಕಡಿಮೆ ಕೊಬ್ಬಿನ ಅಂಶ ಹೊಂದಿರುವ ಪ್ರೀಮಿಯಂ ಆರೋಗ್ಯ ಆಹಾರ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ದೇಹದ ಉತ್ತಮ ಆರೋಗ್ಯ, ಬೆಳವಣಿಗೆಗೆ ಅಗತ್ಯವಿರುವ 9 ಅಗತ್ಯ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ. ಉತ್ಪನ್ನಗಳು ಸಂಪೂರ್ಣ ಪೌಷ್ಠಿಕಾಂಶ ಮತ್ತು ಸಸ್ಯಾಹಾರಿಯಾಗಿದೆ. ಉತ್ತಮ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಿರುವ ಒಂಬತ್ತು ಅಗತ್ಯ ಅವೈನೋ ಆಮ್ಲಗಳ ಸಂಯೋಜನೆಯ ಪ್ರೋಟಿ 9 ಶಕ್ತಿಗಳನ್ನೊಳಗೊಂಡಿದೆ.
ಅಸೆಟ್ಜ್ ಪ್ರಾಪರ್ಟಿ ಗ್ರೂಪ್ನಿಂದ ಜಾಗೃತಿ
ಅಸೆಟ್ಜ್ ಪ್ರಾಪರ್ಟಿ ಗ್ರೂಪ್ನಿಂದ ವಿಭಿನ್ನವಾದ ಕಬ್ಬನ್ಪಾರ್ಕ್ ಶುಚಿತ್ವ ಕಾಪಾಡುವ ಅಭಿಯಾನವನ್ನು ಜು.8ರಂದು ಹಮ್ಮಿಕೊಂಡಿತ್ತು. ನಗರವನ್ನು ಹಸಿರಾಗಿರಿಸುವ ಉದ್ದೇಶದಿಂದ ಅಸೆಟ್ಜ್ ಪ್ರಾಪರ್ಟಿ ಗ್ರೂಪ್, ಪಾಲಿನೇಟ್ ಎನರ್ಜಿ ಮತ್ತು ಎನರ್ಜಾನ್ ಪವರ್ ರಿಸೋರ್ಸ್ ನಗರದ ಕಬ್ಬನ್ಪಾರ್ಕ್ನಲ್ಲಿ ಅಸೆಟ್ಜ್ ವರ್ಲ್ಡ್ ಕಪ್ ಆಫ್ ಕ್ಲೀನ್ಅಪ್ಸ್ ಜಾಗೃತಿ ಕಾರ್ಯಕ್ರಮವನ್ನು ನಡೆಯಲಾಯಿತು. ಸುಮಾರು 10ಮಂದಿಯ ಒಂದೊಂದು ಗುಂಪನ್ನು ಮಾಡಿಕೊಂಡು ಪ್ರತಿಯೊಂದು ಗುಂಪು ಸಹ ಅತಿ ಹೆಚ್ಚಿನ ಕಸವನ್ನು ಎತ್ತಿ ಆ ಮುಖೇನ ಆತಂಡ ಮತ್ತೊಂದು ಹೆಚ್ಚಿನ ಜವಾಬ್ದಾರಿಯನ್ನು ಪಡೆದು ವಿಜೇತರನ್ನು ಘೋಷಣೆ ಮಾಡಿತು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿ ನಗರದ ಇಂದಿರಾಗಾಂಧಿ ಮ್ಯೂಸಿಕಲ್ ಕಾರಂಜಿ ಬಳಿ ಸಸಿಗಳನ್ನು ನೆಟ್ಟು ತದನಂತರ ಕಬ್ಬನ್ ಪಾರ್ಕ್ ಶುಚಿತ್ವದಲ್ಲಿ ಪಾಲ್ಗೊಂಡರು. ಒಚ್ಚಾರೆ ಸುಮಾರು 350ಕ್ಕೂ ಹೆಚ್ಚು ಕಿಲೋ ಭಾರದ ಕಸವನ್ನು ಶುಚಿ ಮಾಡಿ ಆಂದೋಲನವನ್ನು ಯಶಸ್ವಿಯಾಗಿ ಪೂರೈಸಿದರು.
ಪೀಟರ್ ಇಂಗ್ಲೆಂಡ್ ಆಫರ್
ಪೀಟರ್ ಇಂಗ್ಲೆಂಡ್ ಇಒಎಸ್ಎಸ್ ಭರ್ಜರಿ ಕೊಡುಗೆ ಈಗ ಬೆಂಗಳೂರಿಗೆ ಮತ್ತೆ ಬಂದಿದೆ. ಪೀಟರ್ ಇಂಗ್ಲೆಂಡ್ನ ಬಟ್ಟೆ 3ಕೊಂಡರೆ 2ಉಚಿತ ಪಡೆಯಿರಿ ಆಫರ್ಗಳು ಲಭ್ಯವಿದೆ. ದೇಶಾದ್ಯಂತ ಇರುವ ಪೀಟರ್ ಇಂಗ್ಲೆಂಡ್ನ ಮಳಿಗೆಗಳಲ್ಲಿ ಉಡುಪು ಖರೀದಿಸಬಹುದು. ಆಫರ್ಗಳು 4ರಿಂದ ಪ್ರಾರಂಭವಾಗಿದ್ದು ಆಗಸ್ಟ್ 3ರವರೆಗೆ ಇರಲಿದೆ.
ವಿಕಾಸ ಗ್ರಾಮೀಣ ಬ್ಯಾಂಕ್ ವಿಮೆ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಜೀವ ವಿಮಾ ಕಂಪನಿ ಇಂಡಿಯಾ ಫರ್ಸ್ಟ್ ಲೈಫ್ ಇನ್ಷೂರೆನ್ಸ್ ಮೂಲಕ ತನ್ನ ಗ್ರಾಹಕರಿಗೆ ವಿಮೆ ಒದಗಿಸುತ್ತಿದೆ. ಇದರಿಂದ ಗ್ರಾಮೀಣ ಗ್ರಾಹಕರಿಗೆ ಹಣಕಾಸು ಉತ್ಪನ್ನಗಳನ್ನು ಸಂಪೂರ್ಣ ಪಡೆಯಲು ಅನುಕೂಲವಾಗುತ್ತದೆ. ಬ್ಯಾಂಕ್ನ 545 ಶಾಖೆಗಳಿವೆ ಮತ್ತು 2ಮಿಲಿಯನ್ ಗ್ರಾಹಕರಿದ್ದು 11ಸಾವಿರ ರಿಕರಿಂಗ್ ಡಿಪಾಸಿಟ್ ಖಾತೆದಾರರಿದ್ದಾರೆ. ಇಂಡಿಯಾಫರ್ಸ್ಟ್ ಕರ್ನಾಟಕದಲ್ಲಿ 189 ಟಚ್ ಪಾಯಿಂಚ್ಗಳನ್ನು ಹೊಂದಿದೆ.
ಮಿಸ್ಡ್ಕಾಲ್ಗೆ ಉದ್ಯೋಗ
ಬಾಬಾಜಾಬ್ ಡಾಟ್ಕಾಂ ಉದ್ಯೋಗಾಕಾಂಕ್ಷಿಗಳಿಗೆ ಸುಲಭ ಮಾರ್ಗ ಕಂಡುಹಿಡಿದಿದೆ. ಬಾಬಾಜಾಬ್ ಡಾಟ್ಕಾಂನೊಂದಿಗೆ ಉದ್ಯೋಗಕ್ಕಾಗಿ ಅಭ್ಯರ್ಥಿಗಳು 08880004444 ಸಂಖ್ಯೆಗೆ ಒಂದು ಮಿಸ್ಡ್ ಕಾಲ್ ಕೊಡುವ ಮೂಲಕ ನೋಂದಾಯಿಸಬಹುದು. ರಿಸೆಪ್ಷನಿಸ್ಟ್ ಉದ್ಯೋಗಗಳು, ಬಿಪಿಒ, ಕಾಲ್ಸೆಂಟರ್, ಚಾಲಕ, ರೀಟೈಲ್, ಮಾರ್ಕೆಟಿಂಗ್ ಉದ್ಯೋಗಗಳನ್ನು ಬಾಬಾಜಾಬ್ ಹೊಂದಿದೆ. ನರ್ಸ್, ಬ್ಯೂಟೀಶಿಯನ್ಗಳಿಗೂ ಅವಕಾಶವಿದೆ. ಮಿಸ್ಡ್ಕಾಲ್ ನೀಡಿದರೆ ಅವರಿಗೆ ಹಿಂತಿರುಗಿ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತದೆ. ನಂತರ ಅಭ್ಯರ್ಥಿಗಳು ಒಂದು ಎಸ್ಸ್ಸೆಮ್ಮೆಸ್ ಪಡೆಯುತ್ತಾರೆ. ಬೇರೆ ಉದ್ಯೋಗದ ಮಾಹಿತಿ ಪಡೆಯಲು ಅದೇ ಸಂಖ್ಯೆಗೆ ಮತ್ತೊಮ್ಮೆ ಮಿಸ್ಡ್ಕಾಲ್ ನೀಡಬೇಕು.
ಲೂಯಿ ಫಿಲಿಪ್ ಆಫರ್
ಲೂಯಿ ಫಿಲಿಪ್ ಇಒಎಸ್ಎಸ್ ಆಧುನಿಕ ಉಡುಪುಗಳ ಸಂಗ್ರಹವನ್ನು ಹಾಗೂ ಹಾಗೂ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಲೂಯಿ ಫಿಲಿಪ್ನ ಮಳಿಗೆಗಳಲ್ಲಿ ಎರಡು ಕೊಳ್ಳಿರಿ ಒಂದು ಉಚಿತ ಪಡೆಯಿರಿ ಸೇರಿದಂತೆ ವಿಶೇಷ ದರಗಳಲ್ಲಿ ಅದ್ಭುತ ಕೊಡುಗೆಗಳನ್ನು ಒದಗಿಸುತ್ತಿದೆ. ಈ ಕೊಡುಗೆ ಷರ್ಟ್ಗಳು, ಪ್ಯಾಂಟ್ಗಳು, ಟಿ-ಷರ್ಟ್ಗಳು, ಇತ್ಯಾದಿ ಸೇರಿದಂತೆ ವಿಸ್ತಾರವಾದ ತೊಡುಗೆಗಳ ಮೇಲೆ ಲಭ್ಯವಿದೆ. ಕೊಡುಗೆ ಲೂಯಿ ಫಿಲಿಪ್ ಮಳಿಗೆಗಳಲ್ಲಿ ಮಾತ್ರ ಹಾಗೂ ಜು. 5ರಿಂದ ಪ್ರಾರಂಭವಾಗಿದೆ.
ಚಿಕ್ ಜತೆ ಸ್ಪಿನ್ಝ್ ಟಾಕ್ ಉಚಿತ
ಚಿಕ್ ಅಡ್ವಾನ್ಸ್ಡ್ ಶಾಂಪೂವಿನೊಂದಿಗೆ ಸ್ಪಿನ್ಝ್ ಟಾಕ್ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಹಕರು ಈಗ ಕೇಶ ಉದುರುವಿಕೆಯನ್ನು ತಡೆಗಟ್ಟುವ ಚಿಕ್ ಅಡ್ವಾನ್ಸ್ಡ್ ಶಾಂಪೂ ಕೊಂಡರೆ ಸ್ಪಿನ್ಝ್ ಟಾಕ್ನ್ನು ಉಚಿತವಾಗಿ ಪಡೆಯಬಹುದು. 180 ಮಿ.ಲೀ. ಶಾಂಪೂವಿನೊಂದಿಗೆ 28ರ ಮೌಲ್ಯದ 50ಗ್ರಾಂನ ಸ್ಪಿನ್ಝ್ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


