ಟರ್ಕಿಯಲ್ಲಿ ೧೬.೯೬ ಮಿಲಿಯನ್ ಯೂರೋ ಗುತ್ತಿಗೆ ಬಾಚಿದ ಬಿ ಎಚ್ ಇ ಎಲ್

ನವದೆಹಲಿ: ಕೇಂದ್ರ ಸರ್ಕಾರ ಒಡೆತನದ ಬಿ ಎಚ್ ಇ ಎಲ್, ಟರ್ಕಿಯಲ್ಲಿ ಶಾಖೋತ್ಪನ್ನ ವಿದ್ಯುತ್‌ಜನಕ ಕೇಂದ್ರ ಸ್ಥಾಪಿಸಲು ೧೬.೯೬ ಮಿಲಿಯನ್ ಯೂರೋಗಳ ಗುತ್ತಿಗೆಯನ್ನು ಪಡೆದಿದೆ.
೧೬.೯೬ ಮಿಲಿಯನ್ ಯುರೋ(ಸುಮಾರು ೧೩೦.೮ ಕೋಟಿ) ಆಗಬಹುದು ಎಂದು ಅಂದಾಜಿಸಿರುವ ಈ ಯೋಜನೆಯಲ್ಲಿ, ವಿದ್ಯುತ್ ಜನಕ ಕೇಂದ್ರದ ಸ್ಥಾಪನೆಯ ಹಲವಾರು ಘಟ್ಟಗಳ ಕೆಲಸಗಳನ್ನು ಬಿ ಎಚ್ ಇ ಲ್ ಸಂಸ್ಥೆ ನಿರ್ವಹಿಸಲಿದೆ.
ಟರ್ಕಿಯ ಅತಿ ದೊಡ್ಡ ವಿದ್ಯುಚ್ಚಕ್ತಿ ಸಂಸ್ಥೆಯಾದ 'ಎಲೆಕ್ಟ್ರಿಕ್ ಜನರೇಶನ್ ಕಂಪನಿ', ಬಿ ಎಚ್ ಇ ಎಲ್ ಗೆ ಈ ಗುತ್ತಿಗೆಯನ್ನು ನೀಡಿದೆ. ದೇಶಾದಾದ್ಯಂತ ವಿದ್ಯುಚ್ಛಕ್ತಿ ಪೂರೈಸುವ ಈ ಸಂಸ್ಥೆ ಟರ್ಕಿ ಸರ್ಕಾರದ ಒಡೆತನದಲ್ಲಿದೆ.
ಈ ಗುತ್ತಿಗೆಗೆ ಬೇಕಾದ ಪರಿಕರಗಳನ್ನು ಬಿ ಎಚ್ ಇ ಲ್ ನ ರಾಣಿಪೇಟ್, ಭೋಪಾಲ್ ಮತ್ತು ಬೆಂಗಳೂರು ಕೇಂದ್ರಗಳು ಒದಗಿಸಲಿವೆ ಎಂದು ಸಂಸ್ಥೆ ತಿಳಿಸಿದೆ.
ಬಾಂಬೆ ಶೇರು ಪೇಟೆಯಲ್ಲಿ ಬಿ ಎಚ್ ಇ ಎಲ್ ಷೇರುಗಳು ೨.೫೭% ಏರಿಕೆ ಕಂಡಿದ್ದು, ೨೬೫.೫೦ ರೂ ನಲ್ಲಿ ವಹಿವಾಟು ನಡೆಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


