ವೋಲ್ಕ್ಸ್ ಉತ್ಸವ- 2013

ಜನಪ್ರಿಯ ಕಾರು ತಯಾರಿಕಾ ಕಂಪನಿ ವೋಲ್ಕ್ಸ್ ವ್ಯಾಗನ್ ಅ.31ರ ವರೆಗೆ 'ವೋಲ್ಕ್ಸ್ ಉತ್ಸವ 2013' ಆರಂಭಿಸಿದೆ. ಈ ಸಂದರ್ಭದಲ್ಲಿ ಗ್ರಾಹಕರು ಕಾರು ಕೊಳ್ಳಲು ಬೇಕಾದ ಹಣಕಾಸು, ವಾರ್ಷಿಕ ನಿರ್ವಹಣಾ ಒಪ್ಪಂದಗಳು, ವಿಮೆ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗಲಿವೆ. ದೇಶಾದ್ಯಂತ ಇರುವ ಕಂಪನಿಯ ಕಾರು ಶೋರೂಮ್ಗಳಲ್ಲಿ ಈ ಉತ್ಸವ ನಡೆಯಲಿದೆ.
ಮೆಕ್ಡೊನಾಲ್ಡ್ನಿಂದ ಮೆಕ್ಕೆಫೆ
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೆಕ್ಡೊನಾಲ್ಡ್ ಮೆಕ್ಕೆಫೆಯನ್ನು ಆರಂಭವಾಗಿದೆ. ಮೆಕ್ಡೊನಾಲ್ಡ್ನ ಪಶ್ಚಿಮ ಮತ್ತು ದಕ್ಷಿಣ ವಿಭಾಗದ ವ್ಯವಹಾರ ನೋಡಿಕೊಳ್ಳುತ್ತಿರುವ ಹಾರ್ಡ್ಕ್ಯಾಸಲ್ ರೆಸ್ಟೋರೆಂಟ್ ಇದರ ಉಸ್ತುವಾರಿ ವಹಿಸಿಕೊಳ್ಳುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 1,500 ಮೆಕ್ಕೆಫೆ ರೆಸ್ಟೋರೆಂಟ್ಗಳನ್ನು ಆರಂಭಿಸಲು ನಿರ್ಧರಿಸಿದೆ. ಪ್ರತಿ ಕೆಫೆಗೆ ಅದು ರು. 30- 35 ಲಕ್ಷ ಬಂಡವಾಳ ಹೂಡಿಕೆ ಅಗತ್ಯವಾಗಿದೆ.
ಕಾರ್ಮಿಕರಿಗೆ ಕಲ್ಯಾಣ ಚೀಟಿ
ಆಸ್ಟ್ರಿಯಾದ ಇಟ್ಟಿಗೆ ನಿರ್ಮಾಣ ಕಂಪನಿ ವಿನೆರ್ಬರ್ಜರ್ ಇಂಡಿಯಾ ಬೆಂಗಳೂರಿನಲ್ಲಿ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಚೀಟಿ ವಿತರಿಸಿತು. ಒಟ್ಟು 60 ಮಂದಿಗೆ ಈ ಚೀಟಿ ಲಭ್ಯವಾಗಿದೆ. ಇದು ರಾಜ್ಯ ಸರ್ಕಾರದ ಕಾರ್ಮಿಕ ಸಚಿವಾಲಯದ ಪರಿಕಲ್ಪನೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ನಿರತರಾಗಿರುವ ಕಾರ್ಮಿಕರನ್ನು ಲಕ್ಷ್ಯದಲ್ಲಿರಿಸಿಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಬಹಳಷ್ಟು ಸೌಲಭ್ಯಗಳನ್ನು ನೀಡಲು ಯೋಜಿಸಲಾಗಿದೆ.
ಸ್ಮಾರ್ಟ್ ಪವರ್ ವಿಮೆ ಶುರು
ಎಸ್ಬಿಐ ಲೈಫ್ ಇನ್ಷೂರೆನ್ಸ್ ಹೊಸತಾಗಿ ವಿಮಾ ಯೋಜನೆ ಆರಂಭ ಮಾಡಿದೆ. 'ಸಾರ್ಟ್ ಪವರ್ ವಿಮೆ' ಎಂಬ ಹೆಸರಿನ ಈ ಯೋಜನೆ ಬಂಡವಾಳ ಮತ್ತು ವಿಮೆ ಎಂಬ ಎರಡು ವಿಧದಲ್ಲಿ ಇದೆ. ಇದು ಸುಲಭ ಮತ್ತು ಸರಳವಾದ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ. ಇದು ಟ್ರಿಗರ್ಫಂಡ್ ಮತ್ತು ಆಕ್ಸಲರೇಟೆಡ್ ಟೋಟಲ್ ಮತ್ತು ಪರ್ಮನೆಂಟ್ ಡಿಸ್ಎಬಿಲಿಟಿ ಬೆನಿಫಿಟ್ ಅನ್ನೂ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


