ವಾಣಿಜ್ಯ

ಕಾಸು ಸೆಂಟರ್

ಹದಿಮೂರು ವರ್ಷಗಳ ಹಿಂದಿನ ಮಾತು. ದೇಶದಲ್ಲಿ ಕಾಲ್‌ಸೆಂಟರ್‌ಗಳು ಆರಂಭವಾದ ದಿನಮಾನಗಳು. ..

ಕಾಸು ಸೆಂಟರ್
Published On :

ಹದಿಮೂರು ವರ್ಷಗಳ ಹಿಂದಿನ ಮಾತು. ದೇಶದಲ್ಲಿ ಕಾಲ್‌ಸೆಂಟರ್‌ಗಳು ಆರಂಭವಾದ ದಿನಮಾನಗಳು. ಕೊಂಚ ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಇದ್ದಿದ್ದರೆ ಸಾಕಿತ್ತು, ಸುಲಭವಾಗಿ ಕೆಲಸ ಸಿಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಾಲ್‌ಸೆಂಟರ್‌ಗಳು ಹಿಂದಿನ ರೀತಿಯಲ್ಲಿಲ್ಲ. ಹಣಕಾಸು ಕ್ಷೇತ್ರದ ಏರಿಳಿತಗಳು ಅವುಗಳಿಗೂ ಹೊಡೆತ ನೀಡಿವೆ.
ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡವು ಉಳಿದುಕೊಂಡವು. ಬಾಕಿ ಬಾಗಿಲೆಳೆದುಕೊಂಡವು. ವ್ಯಾಪಾರ ವಹಿವಾಟು ಹೊರಗುತ್ತಿಗೆಗಳು (ಬಿಪಿಒ) ಇಂದು ವ್ಯಾಪಾರ ವಹಿವಾಟು ನಿರ್ವಹಣೆ (ಬಿಪಿಎಂ) ಗಳಾಗಿ ಮಾರ್ಪಡುತ್ತಿವೆ. ಕೈಗಾರಿಕೆಗಳು ಕೇವಲ ಕೆಲಸಗಾರರನ್ನು ನಂಬಿ ಕೂತಿಲ್ಲ. ಅದರ ಬದಲು ವಕೀಲರು, ವೈದ್ಯರು, ಸಂಖ್ಯಾಶಾಸ್ತ್ರಜ್ಞರು, ಸಂಶೋಧಕರು, ಲೆಕ್ಕಾಧಿಕಾರಿಗಳಿಗಳಿಗೆ ಅವಕಾಶ ನೀಡುತ್ತಿವೆ.

10 ಲಕ್ಷ ಮಂದಿ
ಇಂದು ಬಿಪಿಎಂ ವಲಯದಲ್ಲಿ 10 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಭೂ ತಜ್ಞರು, ಕಾನೂನು ವಿಶ್ಲೇಷಣಾಕಾರರಂತೆ ವೈದ್ಯರು, ವಕೀಲರಂತೆ ಪ್ರವೃತ್ತಿಯಾಗಿಸಿಕೊಂಡಿರುವವರೇ ಶೇ.34ರಷ್ಟು ಇದ್ದಾರೆ.  ಅಲ್ಲದೆ ಇವರು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಏಕೆಂದರೆ, ಹೊರದೇಶಗಳಲ್ಲಿ ತಗಲುವ ವೆಚ್ಚಕ್ಕಿಂತ ಶೇ.30ರಷ್ಟು ಹಣ ಸಹ ಕಡಿಮೆಯಾಗಲಿದೆ. ಯುರೋಪ್‌ನಲ್ಲಿ ಇದಕ್ಕಾಗಿಯೇ ಇರುವ ತಜ್ಞರ ಕೆಲಸವನ್ನು ಭಾರತದಲ್ಲಿ ಪ್ರವೃತ್ತಿಯಾಗಿಕೊಂಡಿವವರೇ ಕೆಲಸ ನಿರ್ವಹಿಸುತ್ತಿರುವುದರಿಂದ ಗ್ರಾಹಕರಿಗೆ ಶೇ.30ರಷ್ಟು ವೆಚ್ಚ ಸಹ ಕಡಿಮೆಯಾಗುತ್ತಿದೆ.
ಕೈಗಾರಿಕಾ ಅಸೋಸಿಯೇಶನ್ ಹೇಳುವ ಹಾಗೆ, ಪ್ರಸ್ತುತ ಭಾರತದಲ್ಲಿ 1.3 ಲಕ್ಷ ಕೋಟಿ ಇರುವ ಬಿಪಿಎಂ ವಲಯ 2020ರಷ್ಟರಲ್ಲಿ ವಲಯದ ಆದಾಯ ರು. 3.1 ಲಕ್ಷ ಕೋಟಿಗೆ ದಾಟುವ ಸಾಧ್ಯತೆ ಇದೆ.

ಭಾರತಕ್ಕೇನು ಲಾಭ?

  • ಕಾನೂನಿನಲ್ಲಿ ಹೆಚ್ಚಿನ ಕೌಶಲ ಹೊಂದಿರುವವರಿಗೆ ಅವಕಾಶಗಳು.
  • ಭಾರತದವರೇ ಕೆಲಸ ನಿರ್ವಹಿಸುತ್ತಿರುವುರಿಂದ ಗ್ರಾಹಕರಿಗೆ ಕಡಿಮೆ ಸಮಯದಲ್ಲಿ ಮನವರಿಕೆ ಮಾಡುವಲ್ಲಿ ಸಫಲ.
  • ದೇಶೀಯ ಗ್ರಾಹಕರಿಗೆ ಶೇ.30ರಷ್ಟು ಹಣ ಉಳಿತಾಯ.
  • ಸಂಖ್ಯಾ ಶಾಸ್ತ್ರಜ್ಞರು, ಲೆಕ್ಕಾಧಿಕಾರಿಗಳು, ವಕೀಲರು,ವೈದ್ಯರ ಭಾಗಿ.
  • ಚಿಕ್ಕ ಚಿಕ್ಕ ನಗರಗಳಲ್ಲೂ ಸೇವೆ ಸಿಗುವಂತಾಗಿದೆ.
ಗೋವಾಕ್ಕೆ ರಾಜ್ಯದ ತರಕಾರಿ
ನಮಗೆ ಅನುಕೂಲ
ವ್ಯಾಪಾರ ವಹಿವಾಟು ನಿರ್ವಹಣೆ
ಕಟ್ಟಡ ನಿರ್ಮಾಣ, ಎಂಜಿನಿಯರಿಂಗ್.

- ಎನ್.ಎಲ್. ಶಿವಮಾದು
shivamadhu2009@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.