ಅಪಾರ್ಚುನಿಟಿ ಫಂಡ್

ಯುಟಿಐ ಅಪಾರ್ಚುನಿಟಿ ಫಂಡ್ ಮಾರುಕಟ್ಟೆಯ ಏರುಪೇರುಗಳ ನಡುವೆಯೂ ಸ್ಥಿರ ಹಾಗೂ ಉತ್ತಮ ಲಾಭ ನೀಡುತ್ತಿದೆ. ಮಾರುಕಟ್ಟೆ ಏರುಗತಿ ಗತಿಯಲ್ಲಿರುವಾಗ ಉತ್ತಮ ಲಾಭ ತರುವ ಜತೆಗೆ ಮಾರುಕಟ್ಟೆ ಇಳಿಮುಖವಾದಾಗ ನಷ್ಟವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ಗ್ರಾಹಕರ ಕೈ ಹಿಡಿದಿದೆ. 'ಯುಟಿಐ ಅಪಾರ್ಚುನಿಟಿ ಫಂಡ್'ನ ಈ ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಈ ಅಂಶ ತಿಳಿದುಬರುತ್ತದೆ. ಈ ಫಂಡ್ನ ಮುಖ್ಯ ಉದ್ದೇಶವೆಂದರೆ ಬಂಡವಾಳದ ಮೌಲ್ಯೋತ್ಕರ್ಷ (ಈಕ್ವಿಟಿ ಷೇರುಗಳು ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಫಂಡ್ ಮೊತ್ತದ ಹಂಚಿಕೆ). ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿನ ಹೂಡಿಕೆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಮಾರುಕಟ್ಟೆಯ ಪ್ರವೃತ್ತಿಗೆ ಕ್ರಿಯಾಶೀಲವಾಗಿ ಸ್ಪಂದಿಸುವುದು ಮುಖ್ಯ ಆದ್ಯತೆ.
ಆದಾಯದ ನೋಟ
ಜೂನ್ 30, 2013ರ ವರೆಗೆ ಯುಟಿಐ ಅಪಾರ್ಚುನಿಟಿ ಫಂಡ್ನ ಲಾಭಾಂಶ ಇಂತಿದೆ. 5 ವರ್ಷಗಳ ಅವಧಿಯ ಫಂಡ್ನ ನಿಗದಿತ ಶೇ. 3.83 ಅಂಕಿಯನ್ನು ಮೀರಿ ಶೇ. 11.85ರಷ್ಟು ಸಾಧನೆ ತೋರಿದೆ. 3 ವರ್ಷದ ಅವಧಿಯ ಫಂಡ್ನ ನಿಗದಿತ ಶೇ.7.16 ಬದಲು ಶೇ. 3.95ರಷ್ಟು ಆದಾಯ ತಂದಿದೆ. ಫಂಡ್ನ ಆರಂಭದ ಅವಧಿಯಿಂದ ಈವರೆಗೆ ನಿಗದಿತ ಶೇ. 12.41ರ ಬದಲು ಶೇ. 15.25ರಷ್ಟು ಲಾಭಾಂಶ ಹೆಚ್ಚಳ ಕಂಡಿದೆ. ಯುಟಿಐ ಅಪಾರ್ಚುನಿಟಿ ಫಂಡ್ ಆರಂಭದಿಂದ ಹಿಡಿದು, 5 ವರ್ಷ, 3 ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆ ತೋರಿದೆ.
ಪೋರ್ಟ್ ಫೋಲಿಯೋ
ಈ ಫಂಡ್ನ ಹೂಡಿಕೆಯಲ್ಲಿ ಲಾರ್ಜ್ ಕ್ಯಾಪ್ಸ್ ಗಳಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ತನ್ನ ಪೋರ್ಟ್ ಫೋಲಿಯೋದ ಶೇ.16ರಷ್ಟನ್ನು ಸ್ಮಾಲ್ಕ್ಯಾಪ್ಸ್ಗಳಿಗಾಗಿ ಇಟ್ಟಿದೆ. ಮಾರುಕಟ್ಟೆಯಲ್ಲಿನ ಪ್ರಮುಖ ಕಂಪನಿಗಳಾದ ಐಟಿಸಿ, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಲ್ ಆ್ಯಂಡ್ ಟಿ ಮತ್ತಿತರ ಕಂಪನಿಗಳ ಮೇಲೆ ಫಂಡ್ನ ಬಂಡವಾಳದ ಶೇ. 36ರಷ್ಟು ಹೂಡಿಕೆ ಮಾಡಿದೆ. 5 ವರ್ಷಗಳಿಂದ ಫಂಡ್ ಉತ್ತಮ ನಿರ್ವಹಣೆಯಲ್ಲಿದ್ದು, ವಿವಿಧ ಕ್ಷೇತ್ರದಲ್ಲಿನ 38-40 ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ. ಫಂಡ್, ರು. 3, 485 ಕೋಟಿ (ತ್ರೈಮಾಸಿಕ ಸರಾಸರಿ) ಸಂಗ್ರಹಿಸಿದ್ದು, 2006ರ ಜುಲೈನಿಂದ ಪ್ರತಿ ವರ್ಷವೂ ಡಿವಿಡೆಂಡ್ ನೀಡುತ್ತಾ ಬಂದಿದೆ. ವ್ಯಾಲ್ಯೂ ರಿಸರ್ಚ್ನಿಂದ ಫೈವ್ ಸ್ಟಾರ್ ರೇಟಿಂಗ್ (2013 ಜೂನ್ ವರೆಗೆ) ಹಾಗೂ ಸಿಪಿಆರ್ ಮೊದಲನೇ ಸ್ಥಾನ (2013 ಮಾರ್ಚ್ನ ತ್ರೈಮಾಸಿಕ) ಹೊಂದಿದ್ದು, ಇದು ಫಂಡ್ನ ಉತ್ತಮ ಸಾಧನೆಗೆ ಸಾಕ್ಷಿಯಾಗಿದೆ
ಸಿಪ್ ಸೌಲಭ್ಯ
ಶಿಸ್ತುಬದ್ಧ ಹೂಡಿಕೆ ಯೋಜನೆ (sip) ಮೂಲಕವೂ ಜನರು ಯುಟಿಐ ಅಪಾರ್ಚುನಿಟಿ ಫಂಡ್ ಖರೀದಿಸಬಹುದಾಗಿದೆ. ಫಂಡ್ ಆರಂಭದ ಸಮಯ ಜುಲೈ 2005ರಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಿಲಾಗಿದ್ದ ರು. 10,000, 2013ರ ಜೂನ್ ಅಂತ್ಯಕ್ಕೆ 30, 909 ಆಗಿದೆ. ಹೀಗಾಗಿ ಹೂಡಿಕೆದಾರರು ಈ ಫಂಡ್ ಅನ್ನು ತಮ್ಮ ಪೋರ್ಟ್ ಫೋಲಿಯೋದಲ್ಲಿ ಇರಿಸಿಕೊಂಡರೆ ಉತ್ತಮ ಲಾಭ ಹೊಂದಬಹುದು.
-ಅನೂಪ್ ಭಾಸ್ಕರ್ಯುಟಿಐ ಫಂಡ್ ಮ್ಯಾನೇಜರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


