ಹಳೆಯ 'ರಾಜಕೀಯ' ಬದಲಾಯಿಸಲಾಗುತ್ತಿದೆ... ಓಹ್ ಕ್ಷಮಿಸಿ ಎಂದು ಮುಗುಳ್ನಕ್ಕ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ತಮ್ಮ ಬಜೆಟ್ 2023-24ರ ಭಾಷಣ ಮಾಡುವಾಗ 'ಮಾಲಿನ್ಯ' ಎಂಬ ಪದದ ಬದಲಿಗೆ 'ರಾಜಕೀಯ' ಎಂದು ಹೇಳಿದರು. ಅವರ ಈ ಹೇಳಿಕೆ ನಗುವನ್ನು ಪ್ರಚೋದಿಸಿತು.

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ತಮ್ಮ ಬಜೆಟ್ 2023-24ರ ಭಾಷಣ ಮಾಡುವಾಗ 'ಮಾಲಿನ್ಯ' ಎಂಬ ಪದದ ಬದಲಿಗೆ 'ರಾಜಕೀಯ' ಎಂದು ಹೇಳಿದರು. ಅವರ ಈ ಹೇಳಿಕೆ ನಗುವನ್ನು ಪ್ರಚೋದಿಸಿತು.
ಬಳಿಕ ಎಚ್ಚೆತ್ತ ಅವರು ಮುಗುಳ್ನಕ್ಕು, ತನ್ನನ್ನು ತಾನು ಸರಿಪಡಿಸಿಕೊಂಡರು ಮತ್ತು ಪರಿಸರ ಸಂರಕ್ಷಣಾ ನೀತಿಯ ಭಾಗವಾಗಿ ಹಳೆಯ ವಾಹನವನ್ನು ಬದಲಿಸುವ ಬಗ್ಗೆ ಮಾತನಾಡುತ್ತಾ 'ಮಾಲಿನ್ಯ' ಎಂಬ ಪದವನ್ನು ಹಲವು ಬಾರಿ ಒತ್ತಿ ಹೇಳಿದರು.
ವಿತ್ತ ಸಚಿವೆ ಈ ವರ್ಷ ಕಂದು ಬಣ್ಣದ ಬಾರ್ಡರ್ನೊಂದಿಗೆ ಕಾಂತಿಯುತ ಕೆಂಪು ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2019ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ನಂತರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮ್ ಬಜೆಟ್ ಮಂಡನೆ ದಿನ ಕೈಮಗ್ಗ ಸೀರೆಗಳನ್ನು ಧರಿಸುತ್ತಾ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


