ಲೋಕಾ' ಸಮರಕ್ಕೆ ಕ್ಷಣಗಣನೆ: ಜನಸ್ನೇಹಿ ಬಜೆಟ್ ನೀಡುತ್ತಾ ಮೋದಿ ಸರ್ಕಾರ?
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಧ್ಯಂತರ ಕೇಂದ್ರ ಬಜೆಟ್ 2019 ಮಂಡನೆಯಾಗುತ್ತಿದ್ದು, ಮತದಾರರ ಸೆಳೆಯಲು ಜನಪ್ರಿಯ ಘೋಷಣೆಗಳನ್ನು ಘೋಷಣೆ ಮಾಡುವ ಮೋದಿ ಸರ್ಕಾರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.

Published On :
ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಧ್ಯಂತರ ಕೇಂದ್ರ ಬಜೆಟ್ 2019 ಮಂಡನೆಯಾಗುತ್ತಿದ್ದು, ಮತದಾರರ ಸೆಳೆಯಲು ಜನಪ್ರಿಯ ಘೋಷಣೆಗಳನ್ನು ಘೋಷಣೆ ಮಾಡುವ ಮೋದಿ ಸರ್ಕಾರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.
ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಬಜೆಟ್‌ನಲ್ಲಿ ಹಲವಾರು ‘ಜನಪ್ರಿಯ’ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗಲಿರುವ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, ಮತದಾರರನ್ನು ಸೆಳೆಯುವ ತಂತ್ರವಾಗಿಯೂ ಬಳಕೆಯಾಗುವುದು ಖಚಿತವಾಗಿದೆ.
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರುವುದಕ್ಕೆ ಕೃಷಿಕರ ಸಮಸ್ಯೆ ಮತ್ತು ಉದ್ಯೋಗ ನಷ್ಟವೇ ಪ್ರಮುಖ ಕಾರಣವೆಂಬ ವಿಶ್ಲೇಷಣೆಗಳು ಕೇಳಿಬಂದಿರುವುದರಿಂದ ಈ ವಲಯಗಳಿಗೆ ಹೆಚ್ಚಿನ ಗಮನ ನೀಡುವ ಸಾಧ್ಯತೆಗಳಿವೆ. ಅಂತೆಯೇ ರೈತರು, ಮಧ್ಯಮ ವರ್ಗ, ಉದ್ದಿಮೆದಾರರು ಸೇರಿದಂತೆ ಎಲ್ಲ ಪ್ರಮುಖ ವಲಯಗಳಿಗೂ ಅಚ್ಚರಿಯ ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನು ಈ ಹಿಂದೆ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಒತ್ತಿ ಹೇಳುವ ಮೂಲಕ ಬಜೆಟ್ ನ ದೃಷ್ಟಿಕೋನದ ಸುಳಿವು ನೀಡಿದ್ದರು.
ಇದೇ ಕಾರಣಕ್ಕೆ ಇಂದು ಮಂಡನೆಯಾಗುವ ಬಜೆಟ್ ಕೃಷಿ ಕೇಂದ್ರಿತ ಯೋಜನೆಗಳೇ ಪ್ರಮುಖವಾಗುವ ಸಾಧ್ಯತೆ ಇದೆ. ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಅನಾರೋಗ್ಯದ ನಿಮಿತ್ತ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಂಗಾಮಿ ಹಣಕಾಸು ಸಚಿವರಾಗಿರುವ ಪಿಯೂಶ್ ಗೋಯಲ್ ಅವರು ಬಜೆಟ್ ಮಂಡಿಸಲಿದ್ದಾರೆ. ಇದು ಪೂರ್ಣ ಬಜೆಟ್ ಅಲ್ಲ, ಲೇಖಾನುದಾನವೂ ಅಲ್ಲ, ಮಧ್ಯಂತರ ಬಜೆಟ್ ಎಂದು ಸರ್ಕಾರ ಈ ಹಿಂದೆಯೇ ಸ್ಪಷ್ಟನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiPM Modiಪ್ರಧಾನಿ ಮೋದಿNDA governmentPiyush Goyalಪಿಯೂಶ್ ಗೋಯಲ್Budget 2019ಬಜೆಟ್ 2019ಎನ್ಡಿಎ ಸರ್ಕಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


