ಕೇಂದ್ರ ಬಜೆಟ್ 2018: ರೈಲ್ವೆಗೆ ರೂ.1.48 ಲಕ್ಷ ಕೋಟಿ, ಬೆಂಗಳೂರಿಗೆ ಸಬ್'ಅರ್ಬನ್ ರೈಲು ಘೋಷಿಸಿದ ಜೇಟ್ಲಿ
2018-19ನೇ ಸಾಲಿನ ಕೇಂದ್ರ ಬಜೆಟ್'ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ರೈಲ್ವೇ ಇಲಾಖೆಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ...

Published On :
ನವದೆಹಲಿ: 2018-19ನೇ ಸಾಲಿನ ಕೇಂದ್ರ ಬಜೆಟ್'ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ರೈಲ್ವೇ ಇಲಾಖೆಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ.
2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು, ರೈಲ್ವೇ ಅಭಿವೃದ್ಧಿಗೆ ರೂ.1.48 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಬುಲೆಟ್ ರೈಲು ಕಾರ್ಯಕ್ರಮದ ಕುರಿತು ತರಬೇತಿಗಾಗಿ ವಡೋದರಾದಲ್ಲಿ ರೈಲ್ವೆ ಸಂಸ್ಥೆ ಸ್ಥಾಪನೆ, ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ, ಸಿಸಿಟಿವಿ ಅಳವಡಿಕೆ, ರೂ.25 ಸಾವಿರ ಪ್ರಯಾಣಿಕರು ಸಂಚರಿಸುವ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್ ಅಳವಡಿಕೆ ಘೋಷಿಸಿರುವ ಜೇಟ್ಲಿಯವರು ಬೆಂಗಳೂರು ನಗರಕ್ಕೆ ಸಬ್'ಅರ್ಬನ್ ರೈಲನ್ನು ಘೋಷಣೆ ಮಾಡಿದ್ದಾರೆ.
ಬೆಂಗಳೂರಿಗೆ 160 ಕಿಲೋ ಮೀಟರ್ ಉಪನಗರಗಳ ರೈಲ್ವೆ ಸಂಪರ್ಕ ಯೋಜನೆಗೆ ರೂ.17 ಸಾವಿರ ಕೋಟಿ, ಮುಂಬೈ ಸಾರಿಗೆ ಸಂಪರ್ಕ ವಿಸ್ತರಣೆಗೆ ಕಾರ್ಯಕ್ರಮ, 600 ಪ್ರಮುಖ ರೈಲ್ವೇ ನಿಲ್ದಾಣಗಳ ಪುನರ್ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರೈಲ್ವೇ ಮಾರ್ಗಗಳ ಸುರಕ್ಷತೆ ಹಾಗೂ ನಿರ್ವಹಣೆಗೆ ಆದ್ಯತೆ, ನೂತನ ತಂತ್ರಜ್ಞಾನಗಳ ಬಳಕೆ ಹಾಗೂ ದಟ್ಟ ಮಂಜು ಆವರಿಸಿದ ಸಂದರ್ಭದಲ್ಲಿ ಸುರಕ್ಷತೆಗಾಗಿ ವಿಶೇಷ ಉಪಕರಣಗಳ ಅಳವಡಿಕೆ, ಭಾರತ್ ಮಾಲಾ ಯೋಜನೆ ಅಡಿ ರಸ್ತೆ ಸಂಪರ್ಕ ಉನ್ನತೀಕರಿಸಲು ರೂ.5.35 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.
ಉಡಾನ್ ವಿಮಾನಯಾನ ಸೇವೆ 56 ವಿಮಾನ ನಿಲ್ದಾಣಗಳಿಗೆ ವಿಸ್ತರಣೆ, ಸಂಪರ್ಕ. ಪ್ರಸ್ತುತ ದೇಶದಲ್ಲಿ 124 ವಿಮಾನ ನಿಲ್ದಾಣಗಳಿದ್ದು ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 5 ಪಟ್ಟು ಹೆಚ್ಚಾಗಲಿದೆ. ವಾರ್ಷಿಕ 100 ಕೋಟಿ ವಿಮಾನ ಪ್ರಯಾಣದ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


