ಬಜೆಟ್ 2018: ಆರೋಗ್ಯ ವಲಯಕ್ಕೆ ಸಿಗದ ಹೆಚ್ಚು ಪ್ರಾಧಾನ್ಯತೆ
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ಅಷ್ಟೊಂದು ಅನುದಾನ ಮತ್ತು ಪ್ರಾಮುಖ್ಯತೆ ...

ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ಅಷ್ಟೊಂದು ಅನುದಾನ ಮತ್ತು ಪ್ರಾಮುಖ್ಯತೆ ಸಿಕ್ಕಿಲ್ಲ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ ಶೇಕಡಾ 0.66ರಷ್ಟನ್ನು ಮಾತ್ರ ಆರೋಗ್ಯ ವಲಯಕ್ಕೆ ಮೀಸಲಿರಿಸಲಾಗಿದೆ. ಹಲವು ಶಿಫಾರಸುಗಳ ನಂತರ ರಾಜ್ಯ ಸರ್ಕಾರ 2020ರ ವೇಳೆಗೆ ರಾಜ್ಯ ಶೇಕಡಾ 3ರಷ್ಟು ಮತ್ತು 2025ರ ಹೊತ್ತಿಗೆ ಶೇಕಡಾ 4ರಷ್ಟು ಆರೋಗ್ಯ ವಲಯಕ್ಕೆ ಖರ್ಚು ಮಾಡಬೇಕಾಗಿದೆ.
ಬಜೆಟ್ ನಲ್ಲಿ ಮಾಡಿರುವ ಆರೋಗ್ಯ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಭರವಸೆಗಳು ತೃತೀಯ ಆರೈಕೆ ಸೇವೆಗಳು ಮತ್ತು ಹೊಸ ಆಸ್ಪತ್ರೆಗಳ ಸ್ಥಾಪನೆಗಳಿಗೆ ಆಗಿವೆ. ತಾಲ್ಲೂಕು ಆಸ್ಪತ್ರೆಗಳ ಬಲವರ್ಧನೆ ಮತ್ತು ದ್ವಿತೀಯ ಆರೈಕೆಗಳ ಮುಖ್ಯವಾಗಿ ತಾಯಿ ಮತ್ತು ಮಗುವಿನ ಆರೈಕೆ ಸೇವೆಗಳನ್ನು ಕಡೆಗಣಿಸಿದೆ. ಹೀಗಾಗಿ ಬಜೆಟ್ ನಲ್ಲಿ ಮಾಡಿರುವ ಪ್ರಕಟಣೆಗಳು ವಾಸ್ತವವಾಗಿ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ.
ನಗದು ಪ್ರೋತ್ಸಾಹಕ ಯೋಜನೆಗಳಾದ ಮಾತೃಶ್ರೀ ಯೋಜನೆ ಜೊತೆಗೆ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೇವೆಗಳನ್ನು ನೀಡಿದರೆ ಅದಕ್ಕೆ ಅರ್ಥ ಬರುತ್ತದೆ. ಆದರೆ ಅದು ಬಜೆಟ್ ನಲ್ಲಿ ತಪ್ಪಿಹೋಗಿದೆ ಎನ್ನುತ್ತಾರೆ ಕರ್ನಾಟಕ ಜನಾರೋಗ್ಯ ಚಳವಳಿಯ ಸಂಚಾಲಕ ಅಖಿಲ ವಾಸನ್.
ಸಾರ್ವಜನಿಕ ಆರೋಗ್ಯ ಫೌಂಡೇಶನ್ ನ ಹೆಚ್ಚುವರಿ ಪ್ರೊಫೆಸರ್ ಡಾ ಗಿರಿಧರ್ ಬಾಬು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಿ.ಪಿ ಮತ್ತು ಶುಗರ್ ತೊಂದರೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯಿರಬೇಕು. ಈಗಿರುವ ವ್ಯವಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸದಿದ್ದರೆ ಕನಕಪುರದಲ್ಲಿ ಮತ್ತೊಂದು ವೈದ್ಯಕೀಯ ಸ್ಥಾಪನೆಯನ್ನು ಘೋಷಿಸುವುದು ವೈರುದ್ಯವಾಗಿದೆ.
ಕರ್ನಾಟಕ ಸಾರ್ವಜನಿಕ ಆರೋಗ್ಯ ಯೋಜನೆ ಪ್ರಕಾರ, ಸಾರ್ವಜನಿಕ ಆರೋಗ್ಯ ವಲಯದಲ್ಲಿರುವ ವೃತ್ತಿಪರರನ್ನು ಇನ್ನಷ್ಟು ಸಶಕ್ತೀಕರಣಗೊಳಿಸಬೇಕಾಗಿದೆ ಎಂದರು.
ಮಣಿಪಾಲ್ ಆಸ್ಪತ್ರೆಯ ಡಾ ಸುದರ್ಶನ್ ಬಲ್ಲಾಳ್, ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ತೃತೀಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಯಿಂದ ರೋಗಿಗಳಿಗೆ ಮತ್ತು ಅವರ ಮನೆಯವರಿಗೆ ಅನುಕೂಲವಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಬಹಳ ವೆಚ್ಚವಾಗುವುದರಿಂದ ಬೋನ್ ಮ್ಯಾರೊ ಟ್ರಾನ್ಸ್ ಪ್ಲೆಂಟ್ ಘಟಕವನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ಸ್ಥಾಪಿಸಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


