ರಾಜ್ಯ ಬಜೆಟ್ 2017-18ರ ಮುಖ್ಯಾಂಶಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌದದಲ್ಲಿ 2017-18ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿದ್ದು, ಇದು ಅವರ 12 ಬಜೆಟ್ ಮಂಡನೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸುಮಾರು 2 ಲಕ್ಷ ಕೋಟಿ ಗಾತ್ರದ್ದಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌದದಲ್ಲಿ 2017-18ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿದ್ದು, ಇದು ಅವರ 12 ಬಜೆಟ್ ಮಂಡನೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸುಮಾರು 2 ಲಕ್ಷ ಕೋಟಿ ಗಾತ್ರದ್ದಾಗಿದೆ.
11:09:07 AM ಬಜೆಟ್ ಮಂಡನೆಗೂ ಮುನ್ನ ಮಂತ್ರಿ ಪರಿಷತ್ ಸಭೆ ಆರಂಭ
11:20:14 AM ಮಂತ್ರಿ ಪರಿಷತ್ ನಲ್ಲಿ ಬಜೆಟ್ ಗೆ ಅನುಮೋದನೆ
11:30:00 AM ವಿಧಾನಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಬೃಹತ್ ಗಾತ್ರದ ಬಜೆಟ್ ಪುಸ್ತಕ ಪ್ರತಿ ಹೊರ ತೆಗೆದೆ ಸಿಎಂ
11:30:50 AM ವಿಧಾನಸಭೆಗೆ ಆಗಮಿಸಿದ ಸ್ಪೀಕರ್ ಕೋಳಿವಾಡ್
11:31:06 AM ವಂದೇ ಮಾತರಂ ಗೀತೆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ
11:32:05 AM ಸದನದ ಮಾನ್ಯ ಮೊಯಿನುದ್ದೀನ್ ಭಾವಾ ಅವರಿಗೆ ಜನ್ಮ ದಿನದ ಶುಭ ಕೋರಿದ ಸ್ಪೀಕರ್ ಕೋಳಿವಾಡ್
11:32:57 AM 2017-18 ಸಾಲಿನ ಬಜೆಟ್ ಮಂಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದ ಸ್ಪೀಕರ್ ಕೋಳಿವಾಡ್
11:33:24 AM ಸಿಎಂ ಸಿದ್ದರಾಮಯ್ಯರಿಂದ 2017-18 ಸಾಲಿನ ಬಜೆಟ್ ಮಂಡನೆ ಆರಂಭ
11:37:17 AM ನಮ್ಮದು ಸರ್ವರನ್ನು ಒಳಗೊಂಡ ಸರ್ವೋದಯ ಅಭಿವೃದ್ಧಿ ಮಾದರಿ ಸರ್ಕಾರ. ಅಭಿವೃದ್ಧಿಯ ಪಥವೇ ಸರ್ಕಾರದ ಸಾಧನೆಯಾಗಿದೆ.
11:39:49 AM ಬೆಂಗಳೂರನ್ನು ಅತ್ಯಂತ ಕ್ರಿಯಾಶೀಲ ನಗರಿಯನ್ನಾಗಿಸಿದ್ದೇವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬಜೆಟ್ ಮಂಡನೆ.
11:42:20 AM ಅಮ್ಯಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನ ಪ್ರತೀ ವಾರ್ಡ್ ತಲಾ ಒಂದರಂತೆ 198 ನಮ್ಮ ಕ್ಯಾಂಟೀನ್ ಸ್ಥಾಪನೆ. 5 ರುಪಾಯಿಗೆ ತಿಂಡಿ, 10 ರುಪಾಯಿಗೆ ಊಟ..ಇದು ನಮ್ಮ ಕ್ಯಾಂಟೀನ್ ವಿಶೇಷತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
11:44:33 AM ರೈತರ ಸಾಲ ಮನ್ನಾ ಇಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಣೆ. ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಕೆ. 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ.
11:45:36 AM 21 ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ, ಅನ್ನಭಾಗ್ಯ ಅಕ್ಕಿ 5ಕೆಜಿಯಿಂದ 7ಕೆಜಿಗೆ ಏರಿಕೆ. ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ.
11:47:39 AM 2017-18ನೇ ಸಾಲಿನಲ್ಲಿ 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆ. 25 ಲಕ್ಷ ರೈತರಿಗೆ 13, 500 ಕೋಟಿ ರುಪಾಯಿ ಕೃಷಿ ಸಾಲ ನೀಡುವ ಗುರಿ.
11:48:38 AM ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5ದಿನ ಮಕ್ಕಳಿಗೆ ಹಾಲು ವಿತರಣೆ.
11:50:07 AM 3 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆ. 42 ಕೋಟಿ ರೂಪಾಯಿ ವೆಚ್ಚದಲ್ಲಿ 10 ಕೆರೆಗಳ ಅಭಿವೃದ್ಧಿ.
11:51:15 AM ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ.
11:53:35 AM ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ 145 ಚಿಕಿತ್ಸಾ ಘಟಕ ಸ್ಥಾಪನೆ.
11:55:00 AM ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ.
11:56:43 AM ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ. ಕೃಷಿ ಇಲಾಖೆಗೆ 5080 ಕೋಟಿ ರೂಪಾಯಿ ಅನುದಾನ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


