ರಿಸರ್ವ್ ಮಾಡದೆ ದೂರ ಪ್ರಯಾಣ ಮಾಡುವವರಿಗಾಗಿ ದೀನ್‌ದಯಾಳ್ ಬೋಗಿಗಳು
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಂಡಿಸಿದ 2016 -17ರ ರೈಲ್ವೆ ಬಜೆಟ್‌ನಲ್ಲಿ ದೀರ್ಘ ದೂರ ಪ್ರಯಾಣಿಕರಿಗಾಗಿ ಹೆಚ್ಚುವರಿ ...

Published On :
ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಂಡಿಸಿದ 2016 -17ರ ರೈಲ್ವೆ ಬಜೆಟ್‌ನಲ್ಲಿ ದೀರ್ಘ ದೂರ ಪ್ರಯಾಣಿಕರಿಗಾಗಿ ಹೆಚ್ಚುವರಿ ಎರಡು ಬೋಗಿಗಳನ್ನು ಸೇರಿಸಲು ನಿರ್ಧರಿಸಲಾಗಿದೆ.
ಆ ಬೋಗಿಗಳಿಗೆ ದೀನ್ ದಯಾಳ್ ಕೋಚ್ ಎಂದು ಹೆಸರಿಡಲಾಗಿದೆ. ಈ ಬೋಗಿಗಳನ್ನು ಕಾಯ್ದಿರಿಸಬೇಕಾಗಿಲ್ಲ. ಇದರಲ್ಲಿ ಪ್ರಯಾಣಿಕರಿಗೆ ಮೊಬೈಲ್ ಫೋನ್ ಚಾರ್ಜ್ ಮಾಡಲು ಚಾರ್ಜಿಂಗ್ ಪಾಯಿಂಟ್‌ಗಳ ಸೌಕರ್ಯವನ್ನೂ ಒದಗಿಸಲಾಗುತ್ತದೆ. ರಿಸರ್ವೇಶನ್ ಮಾಡದೆ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಅಂತ್ಯೋದಯ್ ಎಕ್ಸ್‌ಪ್ರೆಸ್ ಎಂಬ ಹೊಸ ಸೂಪರ್ ಫಾಸ್ಟ್ ರೈಲಿಗೆ ಬಜೆಟ್‌ನಲ್ಲಿ ಅನುಮತಿ ನೀಡಲಾಗಿದೆ.
ರಿಸರ್ವ್ ಮಾಡಿ ಯಾತ್ರೆ ಮಾಡುವವರಿಗೆ ಹಂಸಫರ್, ಅತಿ ವೇಗದಲ್ಲಿ ದೀರ್ಘ ದೂರ ಪ್ರಯಾಣಿಸುವವರಿಗೆ 130 ಕಿಮೀ ವೇಗದಲ್ಲಿ ಓಡುವ ತೇಜಸ್, ರಾತ್ರಿ ಪ್ರಯಾಣಿಕರಿಗೆ ಡಬಲ್ ಡೆಕರ್ ಸೇವೆ ಕಲ್ಪಿಸುವ ಉದಯ್ ರೈಲುಗಳ ಸೇವೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


