ರೈಲ್ವೆ ಬಜೆಟ್

ಕಾಯ್ದಿರಿಸದ ಟಿಕೆಟ್ ಅವಧಿ 3 ಗಂಟೆಗೆ ಸೀಮಿತ, ನೂತನ ನಿಯಮ ಮಾರ್ಚ್ 1ರಿಂದ ಜಾರಿ

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಗುರುವಾರ 2016ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ್ದು, ಕಾಯ್ದಿರಿಸದ ಟಿಕೆಟ್ ಗಳಿಗಾಗಿ ನೂತನ ನಿಯಮವನ್ನು ಘೋಷಣೆ ಮಾಡಿದ್ದಾರೆ...

ಕಾಯ್ದಿರಿಸದ ಟಿಕೆಟ್ ಅವಧಿ 3 ಗಂಟೆಗೆ ಸೀಮಿತ, ನೂತನ ನಿಯಮ ಮಾರ್ಚ್ 1ರಿಂದ ಜಾರಿ
ಕೇಂದ್ರ ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಗುರುವಾರ 2016ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ್ದು, ಕಾಯ್ದಿರಿಸದ ಟಿಕೆಟ್ ಗಳಿಗಾಗಿ ನೂತನ ನಿಯಮವನ್ನು ಘೋಷಣೆ  ಮಾಡಿದ್ದಾರೆ.

ನೂತನ ನಿಯಮದನ್ವಯ ಕಾಯ್ದಿರಿಸದ ಟಿಕೆಟ್ ನ ಪ್ರಯಾಣವನ್ನು 199 ಕಿ.ಮೀಗೆ ಏರಿಸಲಾಗಿದ್ದು, ಪ್ರಯಾಣಿಕರು ಟಿಕೆಟ್ ಕೊಂಡ ಅವಧಿಯಿಂದ 3 ಗಂಟೆಯೊಳಗೆ ಪ್ರಯಾಣ ಆರಂಭಿಸಬೇಕು. ಅವಧಿ  ಮೀರಿದರೆ ಟಿಕೆಟ್ ರದ್ದಾಗಲಿದೆ. ಈ ನೂತನ ನಿಯಮ ಇದೇ ಮಾರ್ಚ್ 1 ಜಾರಿಯಾಗುವಂತೆ ಕೇಂದ್ರ ರೈಲ್ವೇ ಇಲಾಖೆ ಜಾರಿಗೆ ತಂದಿದೆ. ಇನ್ನು ಕಾಯ್ದಿರಿಸದ ಟಿಕೆಟ್ ನ199 ಕಿ.ಮೀ ಅಂತರದ  ವಾಪಸ್ ಪ್ರಯಾಣ ನಿಯಮವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಮಾತನಾಡಿದ ರೈಲೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು, ಕಾಯ್ದಿರಿಸದ ಟಿಕೆಟ್ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ನೂತನ ನಿಯಮ ಇದೇ ಮಾರ್ಚ್ 1ರಿಂದ ಜಾರಿಗೆ  ಬರಲಿದೆ. ಇನ್ನು ದೇಶದ ಸುಮಾರು 29 ರೈಲ್ವೇ ನಿಲ್ದಾಣಗಳಲ್ಲಿ ಈಗಾಗಲೇ ಮೊಬೈಲ್ ಫೋನ್ ಗಳ ಮೂಲಕ ಕಾಗದ ರಹಿತ ಫ್ಲಾಟ್ ಫಾರ್ಮ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.