ರೈಲ್ವೇ ಬಜೆಟ್ ಟೀಕಿಸಿದ ಜಯಲಲಿತಾ
೨೦೧೬-೧೭ನೇ ಸಾಲಿನ ರೈಲ್ವೇ ಬಜೆಟ್ ರಾಜ್ಯದ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಗುರುವಾರ ಹೇಳಿದ್ದು,
ಚೆನ್ನೈ: ೨೦೧೬-೧೭ನೇ ಸಾಲಿನ ರೈಲ್ವೇ ಬಜೆಟ್ ರಾಜ್ಯದ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಗುರುವಾರ ಹೇಳಿದ್ದು, ಬಜೆಟ್ ನ ಕೆಲವು ಆಯಾಮಗಳನ್ನು ಸ್ವಾಗತಿಸಿದ್ದಾರೆ.
"ಇಡಿಯಾಗಿ ರೈಲ್ವೇ ಬಜೆಟ್ ತಮಿಳು ನಾಡು ಜನರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ" ಎಂದು ಜಯಲಲಿತಾ ಹೇಳಿದ್ದಾರೆ.
ಚೆನ್ನೈನಲ್ಲಿ ರೈಲ್ವೇ ಆಟೊ ಹಬ್ ಸ್ಥಾಪನೆ, ದೆಹಲಿ ಚೆನ್ನೈ ನಡುವೆ ರೈಲು ಕಾರಿಡಾರ್ ಯೋಜನೆ ಮತ್ತು ನಾಗಪಟ್ಟಣಂ ಹಾಗೂ ವೇಲಂಕನ್ನಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗಳನ್ನು ಸ್ವಾಗತಿಸಿದ್ದಾರೆ.
ಆದರೆ ಕುಂದು ಕೊರತೆಗಳನ್ನು ನೀಗಿಸಲು ಅಂತರ್ಜಾಲಾದ ಮೊರೆ ಹೋಗಿರುವುದು ಹಿನ್ನಡೆ ಎಂದಿರುವ ಜಯಲಲಿತಾ, ಸಾಮಾನ್ಯ ಜನಕ್ಕೆ ಅಂತರ್ಜಾಲದ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ ಮತ್ತು ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವುದಿಲ್ಲ. ಆದುದರಿಂದ ಕುಂದು ಕೊರತೆಗಳ ವಿಚಾರಣೆಯನ್ನು ಕೇವಲ ಸಾಮಾಜಿಕ ಅಂತರ್ಜಾಲ ತಾಣಗಳಿಗೆ ಮೀಸಲಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

