ಕೇಂದ್ರ ಬಜೆಟ್

ಹಸಿರು ಭಾರತದ ಕನಸಿಗೆ ಪೋಷಣೆ

ಜಾಗತಿಕ ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ `ಹಸಿರು ಭಾರತ'ದ ಕನಸಿಗೆ ನೀರೆರೆಯಲಾಗಿದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ...

ಹಸಿರು ಭಾರತದ ಕನಸಿಗೆ ಪೋಷಣೆ
ಎಲೆಕ್ಟ್ರಿಕ್ ವಾಹನ
Published On :

ಜಾಗತಿಕ ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ `ಹಸಿರು ಭಾರತ'ದ ಕನಸಿಗೆ ನೀರೆರೆಯಲಾಗಿದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಲು ವಿಶೇಷ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರು.75 ಕೋಟಿ ಮೀಸಲಿರಿಸಲಾಗಿದೆ. ನವೀಕರಿಸಬಹುದಾದ ಇಂಧನ ಗುರಿ ಹೆಚ್ಚಿಸಲಾಗಿದ್ದು 2022ರ ವೇಳೆಗೆ 1.75 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.

ಇದರಲ್ಲಿ ಸೋಲಾರ ವಿದ್ಯುತ್ ನಿಂದ 1 ಲಕ್ಷ ಮೆಗಾವ್ಯಾಟ್, ಪವನ ವಿದ್ಯುತ್ ನಿಂದ 60 ಸಾವಿರ ಮೆಗಾವ್ಯಾಟ್, ಜೈವಿಕ ಇಂಧನದಿಂದ 10 ಸಾವಿರ ಮೆಗಾವ್ಯಾಟ್ ಹಾಗೂ ಕಿರು ವಿದ್ಯುತ್ ಯೋಜನೆಗಳಿಂದ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.