ಉದ್ದೇಶ ಒಳ್ಳೆಯದೇ, ಮಾರ್ಗಸೂಚಿ ಸರಿಯಿಲ್ಲ: ಮನಮೋಹನ್ ಸಿಂಗ್
ಜೇಟ್ಲಿ ಅವರ ಚೊಚ್ಚಲ ಪೂರ್ಣ ಬಜೆಟ್‍ಗೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್‍ರಿಂದ `ಥಂಬ್ಸ್ ಅಪ್' ಸಿಕ್ಕಿಲ್ಲ...

ನವದೆಹಲಿ: ಜೇಟ್ಲಿ ಅವರ ಚೊಚ್ಚಲ ಪೂರ್ಣ ಬಜೆಟ್‍ಗೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್‍ರಿಂದ `ಥಂಬ್ಸ್ ಅಪ್' ಸಿಕ್ಕಿಲ್ಲ. ಸಚಿವ ಜೇಟ್ಲಿ ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ, ಸರಿಯಾದ ಮಾರ್ಗಸೂಚಿ ಅನುಸರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಿಂಗ್ ಹೇಳಿದ್ದೇನು?
ಜೇಟ್ಲಿ ಅವರು ಅದೃಷ್ಟವಂತ ವಿತ್ತ ಸಚಿವ. ಅವರು ಸಚಿವರಾಗುತ್ತಿದ್ದಂತೆ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ. ಇದಕ್ಕೆ ಕಾರಣ ಅವರ ಕೆಲಸವಲ್ಲ, ಬದಲಿಗೆ ಜಾಗತಿಕ ಆರ್ಥಿಕ ಸ್ಥಿತಿ. ಈ ಬಜೆಟ್‍ನಲ್ಲಿ ಜೇಟ್ಲಿ ಅವರು ಬೃಹತ್ ಆರ್ಥಿಕ ಚೌಕಟ್ಟನ್ನು ಸ್ಥಿರಗೊಳಿಸಲು ಇನ್ನಷ್ಟು ಕ್ರಮ ಕೈಗೊಳ್ಳಬಹುದಿತ್ತು. ಆ ಮೂಲಕ ವಿತ್ತೀಯ ಸಂಚಯನದತ್ತ ಹೆಜ್ಜೆ ಹಾಕಬಹುದಿತ್ತು. ಅವರ ಬಜೆಟ್‍ನಲ್ಲಿ ಕೆಲವೊಂದು ಉತ್ತಮ ಯೋಜನೆಗಳು ಹಾಗೂ ಉದ್ದೇಶಗಳಿವೆ.
ಆದರೆ ಉದ್ದೇಶಗಳನ್ನು ಘೋಷಿಸಿದಷ್ಟೇ, ಅದರ ಅನುಷ್ಠಾನವೂ ಮುಖ್ಯವಾಗುತ್ತದೆ. ಆದರೆ ನನಗೆಲ್ಲೂ ಇದಕ್ಕೆ ಸರಿಯಾದ ಮಾರ್ಗಸೂಚಿ ಕಂಡುಬರುತ್ತಿಲ್ಲ ಎಂದಿದ್ದಾರೆ ಮನಮೋಹನ್‍ಸಿಂಗ್. ಜತೆಗೆ, ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವಲ್ಲಿಯೂ ಜೇಟ್ಲಿ ವಿಫಲರಾಗಿದ್ದಾರೆ ಎನ್ನುವುದು ಸಿಂಗ್ ಅಂಬೋಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


