ರೇಲ್ವೆ ಬಜೆಟ್ 2015 - ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುರೇಶ್ ಪ್ರಭು
ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ರೇಲ್ವೆ ಬಜೆಟ್ ಮಂಡಿಸಿದ್ದು, ಪ್ರಯಾಣ ದರದಲ್ಲಿ ಯಾವುದೇ...

ನವದೆಹಲಿ: ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಗುರುವಾರ ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ರೇಲ್ವೆ ಬಜೆಟ್ ಮಂಡಿಸಿದ್ದು, ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿದೇ, ಯಾವುದೇ ಹೊಸ ರೈಲುಗಳನ್ನು ಘೋಷಿಸದೇ ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ.
ಬಜೆಟ್ ಮಂಡನೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ ಪ್ರಭು, ಸ್ವಾತಂತ್ರ್ಯ ಪೂರ್ವದಿಂದಲೂ ರೇಲ್ವೆ ಇಲಾಖೆಯಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ. ಹೀಗಾಗಿಯೇ ರೇಲ್ವೆ ಇಲಾಖೆ ನಷ್ಟದಲ್ಲಿದೆ ಎಂದರು. ಅಲ್ಲದೆ ರೇಲ್ವೆ ಇಲಾಖೆಯಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಅವಕಾಶ ಇದ್ದು, 8. 50 ಲಕ್ಷ ಕೋಟಿ ಯೋಜನೆ ರೂಪಿಸಲಾಗಿದೆ ಮತ್ತು ಇದರಿಂದ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದರು.
ಜನರೇ ನಮಗೆ ದೊಡ್ಡ ಆಸ್ತಿಯಾಗಿದ್ದು, ರೇಲ್ವೆ ಆಧುನೀಕರಣಕ್ಕಾಗಿ ಖಾಸಗಿ ವಲಯದವರನ್ನು ಆಹ್ವಾನಿಸಲಾಗುವುದು ಮತ್ತು ಪಾರದರ್ಶಕ ಆಡಳಿತ ನೀಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸ್ವಚ್ಛತೆ, ಮಹಿಳಾ ಭದ್ರತೆ ಮತ್ತು ರೇಲ್ವೆ ಸುರಕ್ಷತೆಗೆ ಸಂಬಂಧಿಸಿದಂತೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ರೇಲ್ವೆ ಇಲಾಖೆ ಭಾರಿ ಸುಧಾರಣೆ ಕಾಣಲಿದೆ ಎಂದು ಸುರೇಶ್ ಪ್ರಭು ಹೇಳಿದರು.
ಬಜೆಟ್ ಮುಖ್ಯಾಂಶಗಳು
- ಮಹಿಳೆಯರ ಸುರಕ್ಷತೆಗಾಗಿ ಕಣ್ಗಾವಲು ಕ್ಯಾಮರಾ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ
- ಹೂಡಿಕೆಗಾಗಿ ಬ್ಯಾಂಕ್ ಗಳು ಮತ್ತು ನಿವೃತ್ತಿ ಫಂಡ್ ಗಳನ್ನು ಉಪಯೋಗಿಸಲಾಗುವುದು.
- ಎಲ್ಲಾ ರೇಲ್ವೆ ನಿಲ್ದಾಣಗಳ ಖಾಸಗಿಕರಣಕ್ಕೆ ಮುಕ್ತ ಅವಕಾಶ
- ಮೊದಲ ಬಾರಿಗೆ ಮೇಘಾಲಯಕ್ಕೆ ರೇಲ್ವೆ ಮಾರ್ಗ ವಿಸ್ತರಣೆ
- ಹೈಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ
- ಮುಂಬೈ-ಅಹಮದಾಬಾದ್ ಗೆ ಹೈಸ್ಪೀಡ್ ರೈಲು ಸೇವೆ.
- 08 ರೈಲುಗಳಲ್ಲಿ ಇ ಕ್ಯಾಟರಿಂಗ್ ಮೂಲಕ ಆಹಾರ ವ್ಯವಸ್ಥೆ ನೀಡಲಾಗುವುದು
- 400 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ನೀಡಲಾಗುವುದು
- ಕಾಗದ ರಹಿತ ಟಿಕೆಟ್ ವ್ಯವಸ್ಥೆ
- 4 ರಾಜ್ಯಗಳಲ್ಲಿ ರೈಲ್ವೆ ಸಂಶೋಧನಾ ವಿಭಾಗ ಆರಂಭ
- ಎಲ್ಲಾ ಭಾಷೆಗಳಲ್ಲೂ ಇ-ಟಿಕೆಟ್ ಸೌಲಭ್ಯ
- ಅನಿರೀಕ್ಷಿತ ಸಮಯದಲ್ಲಿ ಕೇವಲ 5 ನಿಮಿಷಗಳಲ್ಲಿ ಟಿಕೆಟ್ ನೀಡುವ ವ್ಯವಸ್ಥೆ
- ಡಿಜಿಡಲ್ ಮ್ಯಾಪ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ
- ರೈಲ್ವೆ ಸಿಬ್ಬಂದಿಗಾಗಿ ನಾಲ್ಕು ಹಾಲಿಡೇ ಹೋಮ್ ನಿರ್ಮಾಣ
- ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಜನರಿಗೆ ಮನರಂಜನೆಗೆ ವ್ಯವಸ್ಥೆ
- ಅರುಣಾಚಲ ಪ್ರದೇಶದಿಂದ ದೆಹಲಿಗೆ ನೇರ ರೈಲು ಸಂಪರ್ಕ
- 6,608 ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ.
- ಹಣಕಾಸು ಕೊರತೆ ನಿಭಾಯಿಸಲು ಇನ್ ಫ್ರಾ ನಿಧಿ ಯೋಜನೆ
- ರೈಲ್ವೆ ಆಸ್ತಿ ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ
- ರೈಲ್ ಕಂ ರೋಡ್ ಟಿಕೆಟ್ ಸೌಕರ್ಯ ಹಲವು ಸ್ಷೇಶನ್ ಗಳಿಗೆ ವಿಸ್ತರಣೆ
- ರೈಲ್ವೆ ಸಿಬ್ಬಂದಿಗಳಿಗಾಗಿ ಪೂರ್ಣ ಪ್ರಮಾಣದ ವಿವಿ ಸ್ಥಾಪನೆ
- ರೈಲ್ವೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೊಸ ಯೋಜನೆ
- ಅಪಘಾತಗಳ ತಡೆಗೆ ಐದು ವರ್ಷಗಳ ಸುರಕ್ಷತಾ ಯೋಜನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


