ರೇಲ್ವೆ ಬಜೆಟ್

ರೈಲು ಅಪಘಾತ ತಪ್ಪಿಸಲು ಬರಲಿದೆ 'ವಾರ್ನಿಂಗ್ ಸಿಸ್ಟಮ್'

ರೈಲು ಅಪಘಾತ ತಪ್ಪಿಸಲು ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲಿಯೂ...

ರೈಲು ಅಪಘಾತ ತಪ್ಪಿಸಲು ಬರಲಿದೆ 'ವಾರ್ನಿಂಗ್ ಸಿಸ್ಟಮ್'
ರೈಲ್ವೇ ನಿಲ್ದಾಣಗಳಲ್ಲಿ ವಾರ್ನಿಂಗ್ ಸಿಸ್ಟಮ್ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ರೈಲು ಅಪಘಾತ ತಪ್ಪಿಸಲು ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲಿಯೂ ವಾರ್ನಿಂಗ್ ಸಿಸ್ಟಮ್ (ಅಪಘಾತ ಎಚ್ಚರಿಕೆ ವ್ಯವಸ್ಥೆ)ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ದೆಹಲಿಯ ಸಂಸತ್ ಭವನದಲ್ಲಿ ಇಂದು 2015ರ ರೇಲ್ವೇ ಬಜೆಟ್ ಮಂಡಿಸಿದ ಸುರೇಶ್ ಪ್ರಭು ಅವರು, ರೈಲು ಅಪಘಾತಗಳಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಸಚಿವಾಲಯ ಕೊಗೊಳ್ಳಲಿರುವ ಕ್ರಮಗಳನ್ನು ವಿವರಿಸಿದರು.

  • ಅಪಘಾತಗಳ ತಡೆಗೆ ಐದು ವರ್ಷಗಳ ಸುರಕ್ಷತಾ ಯೋಜನೆ. ನಾಲ್ಕು ಫ್ರೈಟ್ ಕಾರಿಡಾರ್ ಗಳ ನಿರ್ಮಾಣ ಈ ವರ್ಷವೇ ಪೂರ್ಣಗೊಳ್ಳಲ್ಲಿದ್ದು, 9,420 ಕಿ.ಮೀ. ರೈಲ್ವೆ ಮಾರ್ಗದ ಸಾಮರ್ಥ್ಯ ವೃದ್ದಿಗೆ 96,182 ಕೋಟಿ ರೂ. ಯೋಜನೆ ಮೀಸಲಿಡಲಾಗುವುದು.
  • ರೈಲುಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ವಾರ್ನಿಂಗ್ ಸಿಸ್ಷಮ್ ಅಳವಡಿಸಲಾಗುವುದು.
  • ಬೋಗಿಗಳಲ್ಲೇ ವಾರ್ನಿಂಗ್ ಸಿಸ್ಟಮ್ ಅಳವಡಿಕೆ. ಖಾಲಿ ಸೀಟುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. 
  • ಎಸ್ಎಂಎಸ್ ನಲ್ಲಿ ರೈಲಿನ ಆಗಮನ, ನಿರ್ಗಮನ ಮಾಹಿತಿ. ಹೈ ಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ. 9 ಮಾರ್ಗಗಳಲ್ಲಿ ರೈಲಿನ ವೇಗ 200 ಕಿ.ಮೀಗೆ ಹೆಚ್ಚಳ.
  • ಗರ್ಭಿಣಿಯರಿಗೆ ಲೋವರ್ ಬರ್ತ್ ನಲ್ಲೇ ಸೀಟು ನೀಡುವ ವ್ಯವಸ್ಥೆ. ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಬಹಿರಂಗ ಬಿಡ್. ಅತ್ಯಂತ ಪಾರದರ್ಶಕ ಬಿಡ್ಡಿಂಗ್ ವ್ಯವಸ್ಥೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.