ಹೊಸ ರೈಲುಗಳಿಲ್ಲ ಹೊಸ ಮಾರ್ಗಗಳಿಲ್ಲ, ಟಿಕೆಟ್ ದರದಲ್ಲಿ ಇಳಿಕೆ ಇಲ್ಲ
ರೇಲ್ವೇ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು,

ನವದೆಹಲಿ: ರೇಲ್ವೇ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು, ಬಜೆಟ್ ನ ಮೂಲಮಂತ್ರವಾದ ಹೊಸ ರೈಲುಗಳು ಹೊಸ ಮಾರ್ಗಗಳು ಮತ್ತು ಟಿಕೆಟ್ ದರಗಳ ಬಗ್ಗೆ ಯಾವುದೇ ಬದಲಾವಣೆ ಮಾಡದೆ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಗಣನೀಯ ಇಳಿಮುಖ ಕಂಡಿದ್ದರು, ರೈಲ್ವೆ ಪ್ರಯಾಣಿಕರಿಗೆ ಸಂತಸ ತರುವಂತಹ ಟಿಕೆಟ್ ದರದ ಇಳಿಕೆಯ ಯಾವ ಪ್ರಸ್ತಾಪವೂ ಇಲ್ಲ. ಸಾಮಾನ್ಯವಾಗಿ ಹೆಚ್ಚಿನ ರೈಲುಗಳ ನಿರೀಕ್ಷೆ, ಹೊಸ ಮಾರ್ಗಗಳ ನಿರೀಕ್ಷೆ ರೇಲ್ವೇ ಬಜೆಟ್ ನಲ್ಲಿ ಇರುತ್ತದೆ. ಆದರೆ ಯಾವುದೇ ಹೊಸ ರೈಲನ್ನು ಘೋಷಣೆ ಮಾಡದೆ, ಗಣನೀಯವಾದ ಯಾವುದೇ ಹೊಸ ರೇಲ್ವೇ ಮಾರ್ಗವನ್ನು ಘೋಷಿಸದೆ ಅಚ್ಚರಿ ಮೂಡಿಸಿದ್ದಾರೆ.
ಹಲವಾರು ರಾಜ್ಯಗಳಲ್ಲಿ ಸಬ್ ಅರ್ಬನ್ ರೇಲ್ವೇ ಮಾರ್ಗಗಳನ್ನು ನಿರ್ಮಿಸುವ ಪ್ರಸ್ತಾಪ ಮಾಡಿರುವುದು ಒಂದು ಖುಷಿಯ ಸಂಗತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


