ಸಿನಿಮೋತ್ಸವಕ್ಕೆ ತೆರೆ: "ಹಜ್" ಕನ್ನಡದ ಅತ್ಯುತ್ತಮ ಚಲನಚಿತ್ರ
ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ, ಉತ್ತಮ ಚಿತ್ರಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ, ಉತ್ತಮ ಚಿತ್ರಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದ ಸಮಾರೋಪ ಸಮಾರಂಭದ ಮೂಲಕ ಗುರುವಾರ ಕೊನೆಗೊಂಡಿತು.
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ, ಕನ್ನಡೇತರ ಸಿನೆಮಾಗಳಿಗೂ ತೆರಿಗೆ ವಿನಾಯಿಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗೆ ತೆರಿಗೆ ವಿನಾಯಿತಿ ಇದೆ ಆದರೆ ಭೇರೆ ಭಾಷೆಯ ಚಿತ್ರಗಳಿಗೆ ಇಲ್ಲ. ಹಾಗೆಯೇ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ಭಾಷೆ ಹೊರತು ಪಡಿಸಿ ಬೇರೆ ಭಾಷೆಯ ಚಲನಚಿತ್ರಗಳಿಗೆ ವಿನಾಯಿತಿ ಇಲ್ಲದಿರುವುದರಿಂದ ಅನ್ಯ ಭಾಷೆಯ, ಉತ್ತಮ ಅಭಿರುಚಿಯ ಚಲನಚಿತ್ರಗಳಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಿನೆಮಾ ಸ್ಪರ್ಧೆಯಲ್ಲಿ ನಿಖಿಲ್ ಮನೋಜ್ ಲಿಂಗಯ್ಯ ನಿರ್ದೇಶನದ "ಹಜ್" ಚಲನಚಿತ್ರ ಉತ್ತಮ ಚಿತ್ರ ಪ್ರಶಸ್ತಿ ಪಡೆದು, ೨ ಲಕ್ಷ ರೂ ನಗದು ಬಹುಮಾನಕ್ಕೆ ಭಾಜನವಾಯಿತು. ತೀರ್ಪುಗಾರರ ವಿಶೇಶ ಪ್ರಶಸ್ತಿ ಪಡೆದ ಚಿತ್ರಗಳು ೧ ಲಕ್ಷ ನಗದು ಬಹುಮಾನ ಪಡೆದವು.
ಪ್ರಶಸ್ತಿ ವಿಜೇತ ಸಿನೆಮಾಗಳ ವಿವರ ಹೀಗಿದೆ.
ಕನ್ನಡ ಸಿನೆಮಾ
ಉತ್ತಮ ಚಿತ್ರ ಪ್ರಶಸ್ತಿ
ಹಜ್/ ನಿ: ನಿಖಿಲ್ ಮನೋಜ್ ಲಿಂಗಯ್ಯ
ತೀರ್ಪುಗಾರರ ವಿಷೇಶ ಪ್ರಶಸ್ತಿ
ಅಗಸಿ ಪಾರ್ಲರ್/ ನಿ: ಮಹಂತೇಶ ರಾಮದುರ್ಗ
ಪ್ರಕೃತಿ/ ನಿ: ಪಂಚಾಕ್ಷರಿ
ಚಿತ್ರಭಾರತಿ - ಭಾರತಿಯ ಸಿನೆಮಾ
ಉತ್ತಮ ಚಿತ್ರ ಪ್ರಶಸ್ತಿ
ಅನ್ ಟು ದ ಡಸ್ಕ್/ ಮಲಯಾಳಂ/ ನಿ: ಸಾಜಿನ್ ಬಾಬು
ತೀರ್ಪುಗಾರರ ವಿಷೇಶ ಪ್ರಶಸ್ತಿ
ಯೆಲ್ಲೋ/ ಮರಾಠಿ/ ನಿ: ಮಹೇಶ್ ಲಿಮಯೆ
ಪನ್ನಇಯುರಂ ಪದ್ಮಿನಿಯಂ/ ನಿ: ಎಸ್ ಯು ಅರುಣ್ ಕುಮಾರ್
ನೆಟ್ ಪ್ಯಾಕ್ ಏಷ್ಯನ್ ಸಿನೆಮಾ
ಉತ್ತಮ ಚಿತ್ರ ಪ್ರಶಸ್ತಿ
ಲೇಬರ್ ಆಫ್ ಲವ್/ ಬೆಂಗಾಲಿ/ ನಿ: ಆದಿತ್ಯ ವಿಕ್ರಮ್ ಸೆನ್ ಗುಪ್ತ
ತೀರ್ಪುಗಾರರ ವಿಷೇಶ ಪ್ರಶಸ್ತಿ
ದುಕ್ತರ್/ ಪಾಕಿಸ್ತಾನ/ ನಿ: ಅಫಿಯಾ ನಾಥನೆಲ್
ಉತ್ತಮ ಕನ್ನಡ ಚಿತ್ರ ಪ್ರಶಸ್ತಿ
ಡಿಸೆಂಬರ್ ೧/ ನಿ: ಪಿ ಶೇಷಾದ್ರಿ
ಉತ್ತಮ ಕನ್ನಡ ತೀರ್ಪುಗಾರರ ವಿಷೇಶ ಪ್ರಶಸ್ತಿ
ಅತ್ತಿಹಣ್ಣು ಮತ್ತು ಕಣಜ/ ನಿ: ಎಂ ಎಸ್ ಪ್ರಕಾಶ್ ಬಾಬು
ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ವಾರ್ತಾ ಸಚಿವ ರೋಶನ್ ಬೇಗ್, ಕರ್ನಾಟಕ ವಾಣಿಜ್ಯ ಮಂಡಲಿ ಅಧ್ಯಕ್ಷ ಹೆಚ್ ಡಿ ಗಂಗರಾಜು ಮತ್ತು ಚಿತ್ರನಟ ಪುನಿತ್ ರಾಜಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


