ಸಿನಿಮೋತ್ಸವ: ಹೊಸ ಅಲೆಯ ಸಿನಿಮಾಗಳು ಎಂಬ ವರ್ಗೀಕರಣ ಸಲ್ಲ ಎಂದ ಪಿ ಶೇಷಾದ್ರಿ
ಏಳನೇ ಬೆಂಗಳೂರು ಅಂತರಾಷ್ಟ್ರೀಯ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಡಿಸೆಂಬರ್ ೧ ಸಿನೆಮಾದ ನಿರ್ದೇಶಕ ಪಿ ಶೇಷಾದ್ರಿ, ಸಿನೆಮಾಗಳನ್ನು ಕಲಾತ್ಮಕ ಸಿನೆಮಾಗಳು, ಹೊಸ ಅಲೆಯ ಸಿನೆಮಾಗಳು ಎಂದು ಕರೆಯುವುದು ಸರಿಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಿ ಶೇಷಾದ್ರಿ, ಕೆಲವು ಸಿನೆಮಾಗಳನ್ನು ಹೊಸ ಅಲೆಯ ಸಿನೆಮಾಗಳು, ಪರ್ಯಾಯ ಸಿನೆಮಾಗಳು, ಕಲಾತ್ಮಕ ಸಿನೆಮಾಗಳು ಎಂದು ಕರೆಯುವ ಹೊಸ ಬೆಳವಣಿಗೆ ಪ್ರಾರಂಭವಾಗಿದೆ. ಇದರಿಂದ ಕೆಲವು ನಿರ್ದೇಶಕರು ಅಸ್ಪೃಶ್ಯರಾಗಿದ್ದಾರೆ. ಎಲ್ಲ ಸಿನೆಮಾಗಳಲ್ಲು ಕಲೆ ಇದೆ. ಹೊಸ ಅಲೆ ಎಂಬ ಪದ ೭೦ ದಶಕದಲ್ಲಿ ಸರಿಯಿತ್ತೇನೊ, ಆದೆರೆ ಅದು ಈಗ ಅಪ್ರಸ್ತುತ ಎಂದಿದ್ದಾರೆ.
ಕಳೆದ ಗೋವಾ ಚಲನಚಿತ್ರೋತ್ಸವದಲ್ಲಿ ಬರೀ ಒಂದು ಕನ್ನಡ ಸಿನೆಮಾ ಪ್ರದರ್ಶನಗೊಂಡದಕ್ಕೆ ಬೇಸರ ವ್ಯಕ್ತಪಡಿಸಿದ ಶೇಷಾದ್ರಿ ಹೆಚ್ಚೆಚ್ಚು ಕನ್ನಡ ಚಲನಚಿತ್ರನಿರ್ದೇಶಕರು ತಮ್ಮ ಸಿನೆಮಾಗಳನ್ನು ಸಿನಿಮೋತ್ಸವಗಳಲ್ಲಿ ತೋರಿಸಬೇಕು ಎಂದರು.
'ಹರಿವು' ಕನ್ನಡ ಚಲನಚಿತ್ರದ ನಿರ್ದೇಶಕ ಮಂಜುನಾಥ್ ಎಸ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ತಮ್ಮ ಚಿತ್ರ ಪ್ರದರ್ಶನಗೊಂಡದಕ್ಕೆ ಸಂತಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


