ಬೆಂಗಳೂರಿನಿಂದ ಚೀನಾಗೆ ಐಆರ್ಸಿಟಿಸಿ ವಿಶೇಷ ಪ್ಯಾಕೇಜ್ ಪ್ರಾರಂಭ, ಎಲ್ಲೆಲ್ಲಿ ವೀಕ್ಷಣೆ ಇಲ್ಲಿದೆ ಮಾಹಿತಿ
ಐಆರ್ಸಿಟಿಸಿ ಬೆಂಗಳುರಿನಿಂದ ನೂತನವಾಗಿ ಚೀನಾಗೆ ಏಳು ದಿನಗಳ ಪ್ರವಾಸ ಪ್ಯಾಕೇಜ್ ಮತ್ತು ಸ್ಕ್ಯಾಂಡಿನೇವಿಯಾ ಮತ್ತು ಐಸ್ ಲ್ಯಾಂಡ್ ಗೆ 15 ದಿನಗಳ ಪ್ಯಾಕೇಜ್ ಅನ್ನು ಆಯೋಜಿಸುತ್ತತ್ತಿದೆ.

Published On :
ಬೆಂಗಳೂರು: ಐಆರ್ಸಿಟಿಸಿ ಬೆಂಗಳುರಿನಿಂದ ನೂತನವಾಗಿ ಚೀನಾಗೆ ಏಳು ದಿನಗಳ ಪ್ರವಾಸ ಪ್ಯಾಕೇಜ್ ಮತ್ತು ಸ್ಕ್ಯಾಂಡಿನೇವಿಯಾ ಮತ್ತು ಐಸ್ ಲ್ಯಾಂಡ್ ಗೆ 15 ದಿನಗಳ ಪ್ಯಾಕೇಜ್ ಅನ್ನು ಆಯೋಜಿಸುತ್ತತ್ತಿದೆ.
ಚೀನಾ ಪ್ಯಾಕೇಜ್ ಶಾಂಘೈ ಮತ್ತು ಬೀಜಿಂಗ್ ಮತ್ತು ಬುಲೆಟ್ ರೈಲು ಪ್ರಯಾಣವನ್ನು ಒಳಗೊಂಡಿರಲಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. 3-ಸ್ಟಾರ್ ಹೋಟೆಲ್ ಗಳಲ್ಲಿ ಇಬ್ಬರಿಗೆ ಒಂದು ಕೋಣೆಯನ್ನು ಒದಗಿಸಲಾಗುವುದು.ಈ ಪ್ಯಾಕೇಜ್ ಓರ್ವ ವ್ಯಕ್ತಿಗೆ 87,700 ರೂ. ದರ ನಿಗದಿಪಡಿಸಿದ್ದು ವಿಮಾನ ಟಿಕೆಟ್, ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಒಳಗೊಂಡಿರಲಿದೆ. ಅಲ್ಲದೆ ಐಆರ್ಸಿಟಿಸಿ ಪ್ರವಾಸ ನಿರ್ವಾಹಕ, ಪ್ರವಾಸ ಮಾರ್ಗದರ್ಶಿ, ವೀಸಾ ಶುಲ್ಕಗಳು, ಎಲ್ಲಾ ಪ್ರಮುಖ ಸ್ಥಳಗಳಿಗೆ ಪ್ರವೇಶ ಶುಲ್ಕಗಳು.ಹಾಗೂ ವಿಮೆಯನ್ನೂ ಸಹ ಇದರಲ್ಲಿ ಸೇರಿಸಲಾಗಿದೆ.
ಸ್ಕ್ಯಾಂಡಿನೇವಿಯಾ ಪ್ಯಾಕೇಜ್ ಬರ್ಗೆನ್, ಕೋಪನ್ ಹ್ಯಾಗನ್, ಜಿಯಾಲೊ, ಹೆಲ್ಸಿಂಕಿ, ರೇಕ್ಜಾವಿಕ್, ಸ್ಟಾಕ್ಹೋಮ್ ಮತ್ತು ಟಾಲಿನ್.ಗಳನ್ನು ಒಳಗೊಂಡಿದ್ದು ಪ್ರತಿ ವ್ಯಕ್ತಿಗೆ 3,48,000 ರೂ. ನಿಗದಿಪಡಿಸಲಾಗಿದೆ.
ವೈಷ್ಣೋದೇವಿ ಪ್ರವಾಸ
ಮಾ ವೈಷ್ಣೋದೇವಿ ದರ್ಶನ್ ವಿಶೇಷ 12 ದಿನ ರೈಲು ಪ್ರವಾಸ ಪ್ಯಾಕೇಜ್ ಸಹ ಜೂನ್ 23 ರಿಂದ ಆಯೋಜಿಸಲಾಗುವುದು. ಬೆಂಗಳೂರಿಗರು ವೈಟ್ ಫೀಲ್ಡ್ ನಲ್ಲಿ ರೈಲು ಹತ್ತಿ ವೈಷ್ಣೋದೇವಿ ತಲುಪಬಹುದು. ಈ ಪ್ಯಾಕೇಜ್ ಗೆ ಒಬ್ಬರಿಗೆ `12,930 ರು. ದರವಿದ್ದು ದೆಹಲಿ-ಅಮೃತಸರ್-ಹರಿದ್ವಾರ-ಮಥುರಾ ಹಾಗೂ ಆಗ್ರಾ ಸೇರಿ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರಲಿದೆ.
ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿ ಬೇಕಾದವರು ಈ ಮುಂದಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ. 080-22960014, 9741426474, ಮತ್ತು 9746743045.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


