ರೈಲ್ವೇ ಇತಿಹಾಸದಲ್ಲೇ ಮೊದಲು! ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವಾ ಸೌಲಭ್ಯಕ್ಕೆ ಚಾಲನೆ
: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಪ್ರಾರಂಭಿಸಿದೆ.ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ....

Published On :
ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಪ್ರಾರಂಭಿಸಿದೆ.ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ ಪ್ರಯಾಣಿಕರು ಈ ಮಸಾಜ್ ಸೌಲಭ್ಯ ಪಡೆದುಕೊಳ್ಳಬಹುದು.
ಪ್ರಾಥಮಿಕ ಹಂತದಲ್ಲಿ ಈ ಸೌಲಭ್ಯವನ್ನು ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಕಲ್ಪಿಸಲಾಗಿದೆ ಎಂದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ರೈಲ್ವೆ ವಲಯದ ರತ್ಲಾಮ್ ವಿಭಾಗದಿಂದ ರೈಲಿನಲ್ಲಿ ಮಸಾಜ್ ಸೌಲಭ್ಯ ಕಲ್ಪಿಸಬೇಕೆಂಬ ಪ್ರಸ್ತಾವನೆ ಬಂದಿತ್ತು. "ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಮಸಾಜ್ ಸೇವೆ ಒದಗಿಸಲಾಗುತ್ತಿದೆ.ಚಲಿಸುತ್ತಿರುವ ರೈಲುಗಳಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ನಾವು ಮಸಾಜ್ ಸೇವೆ ಒದಗಿಸುತ್ತೇವೆ ಅದು ಆದಾಯವನ್ನು ಮಾತ್ರ ಹೆಚ್ಚಿಸುವುದಲ್ಲ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನೂ ಸೆಳೆಯಲಿದೆ.
"ಈ ಸೇವೆಯಿಂದ ರೈಲ್ವೆಗೆ ವಾರ್ಷಿಕವಾಗಿ ರೂ 20 ಲಕ್ಷ ಹೆಚ್ಚುವರಿ ಆದಾಯ ಲಭ್ಯವಾಗಲಿದೆ. ಅಲ್ಲದೆ 20,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಲುವುದರಿಂದ ವಾರ್ಷಿಕ 90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ. ಇಂತಹಾ ಒಪ್ಪಂದವೊಂದಕ್ಕೆ ಇದೇ ಮೊದಲ ಬಾರಿಗೆ ಸಹಿ ಹಾಕಲಾಗಿದೆ" ರೈಲ್ವೆ ಮಂಡಳಿ ಮಾಧ್ಯಮ ಮತ್ತು ಸಂವಹನ ನಿರ್ದೇಶಕ ರಾಜೇಶ್ ಬಾಜ್ ಪೇಯ್ ಹೇಳಿದ್ದಾರೆ.
ಪಾದಗಳ ಮಸಾಜ್ ಹಾಗೂ ತಲೆ ಮಸಾಜ್ ಗಳ ಸೇವೆಗೆ 100 ರೂ.ದರವನ್ನು ನಿಗದಿಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


