2020 ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗುರಿ: ಇ.ವಿ ಕಾರ್ ಮಾದರಿ ತಪಾಸಣೆ ಪ್ರಾರಂಭಿಸಿದ ಮಾರುತಿ ಸುಜೂಕಿ
ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.

Published On :
ನವದೆಹಲಿ: ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.
2020 ರ ವೇಳೆಗೆ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಸಂಸ್ಥೆ, ಅ.09 ರಂದು ಎಲೆಕ್ಟ್ರಿಕ್ ಕಾರುಗಳನ್ನು ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. ಜಪಾನ್ ನ ಸುಜೂಕಿ ಮೋಟೊರ್ ಕಾರ್ಪೊರೇಷನ್ ನ ಈಗಿನ ಮಾದರಿಯಲ್ಲಿ ಮಾರುತಿ ಸುಜೂಕಿಯ ಎಲೆಕ್ಟ್ರಿಕ್ ಕಾರುಗಳನ್ನು ವಿನ್ಯಾಸ ಮಾಡಲಾಗಿದ್ದು, ಗುರುಗ್ರಾಮ್ ನಲ್ಲಿ ಮಾದರಿಯನ್ನು ತಯಾರಿಸಲಾಗಿದೆ.
ಈಗಾಗಲೇ ಸಿದ್ಧವಾಗಿರುವ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರ ಸ್ನೇಹಿಯಾಗಿರಿಸುವ ನಿಟ್ಟಿನಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


