ವಿದ್ಯುತ್ ವಾಹನಗಳ ಮಾರಾಟದಲ್ಲಿನ ಸಬ್ಸಿಡಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ
ವಿದ್ಯುತ್ ವಾಹನಗಳ ಮಾರಾಟದಲ್ಲಿ ಸಹಾಯಧನ ಒದಗಿಸಲು ಮೂರು ವರ್ಷಗಳ ನಂತರ ಭಾರಿ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ವೇಗವಾಗಿ ಅಳವಡಿಸಿಕೊಳ್ಳುವ ಹಾಗೂ ವಿದ್ಯುತ್ ವಾಹನ ಯೋಜನೆ- ಎಫ್ ಎ ಎಂ ಇ ಯನ್ನು ಜಾರಿಗೊಳಿಸಿದೆ.

ಹೈದ್ರಾಬಾದ್ : ವಿದ್ಯುತ್ ವಾಹನಗಳ ಮಾರಾಟದಲ್ಲಿ ಸಹಾಯಧನ ಒದಗಿಸಲು ಭಾರಿ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ಮೂರು ವರ್ಷಗಳ ನಂತರ ವಿದ್ಯುತ್ ವಾಹನ ಯೋಜನೆ- ಎಫ್ ಎ ಎಂ ಇ ಯನ್ನು ಜಾರಿಗೊಳಿಸಿದೆ.
ವಿದ್ಯುತ್ ವಾಹನಗಳ ಮಾರಾಟದಲ್ಲಿ ತೆಲಂಗಾಣ 10 ನೇ ಸ್ಛಾನದಲ್ಲಿದೆ. ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.
ಎಫ್ ಎಎಂಇ ಯೋಜನೆಯಲ್ಲಿ ದೊರೆಯುವ ಸಬ್ಸಿಡಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದಾಗಿ ವಿದ್ಯುತ್ ವಾಹನಗಳ ಡೀಲರ್ ಹಾಗೂ ಅಪರೇಟರ್ ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಎಫ್ ಎಎಂಇ ವೆಬ್ ಸೈಟ್ ಪ್ರಕಾರ ಈ ಯೋಜನೆಯಡಿ ದ್ವಿಚಕ್ರ, ನಾಲ್ಕು ಚಕ್ರವಾಹನಗಳು ಸೇರಿದಂತೆ 7, 401 ವಾಹನಗಳು ಮಾರಾಟವಾಗಿವೆ.ಎಫ್ ಎಎಂಇ ಮಾರ್ಗದರ್ಶಿಯಂತೆ ಮಾರ್ಚ್ 31 ರಂದು ಮೊದಲ ಹಂತ ಕೊನೆಯಾಗಲಿದ್ದು, ಎರಡನೇ ಹಂತ ಪರಿಷ್ಕರಿಸಲಾಗುತ್ತಿದೆ.
ಸಬ್ಸಿಡಿ ಆಧಾರದಲ್ಲಿ ವಿದ್ಯುತ್ ವಾಹನ ಕೊಂಡುಕೊಂಡ ಗ್ರಾಹಕರ ಸಂಪೂರ್ಣ ಮಾಹಿತಿ ಇಡಲಾಗಿದ್ದು, ಈ ಯೋಜನೆಯಡಿ 7,500 ರಿಂದ 1, 38, 000 ವಾಹನಗಳ ಪಟ್ಟಿ ಇದೆ.
ಆದಾಗ್ಯೂ, ನಗರದ ಎಷ್ಟೋ ಜನರಿಗೆ ಈ ಸಬ್ಸಿಡಿಯ ಬಗ್ಗೆ ಗೊತ್ತಿಲ್ಲ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ ಎಂದು ಚಾರು ಮಿನಾರ್ ನ ದ್ವಿಚಕ್ರವಾಹನ ಸೇಲ್ಸ್ ಮ್ಯಾನ್ ಅಸ್ಲಾಮ್ ಹಸನ್ ಹೇಳುತ್ತಾರೆ.
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಹೈದ್ರಾಬಾದಿನ ಶೇ. 7 ರಷ್ಟು ಜನರಿಗೆ ಮಾತ್ರ ವಿದ್ಯುತ್ ವಾಹನ ಹಾಗೂ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಅರಿವಿದೆ. ಆದರೆ ಶೇಕಡಾ. 54 ಜನರಿಗೆ ಈ ಯೋಜನೆಯ ಮಹತ್ವ ತಿಳಿದಿಲ್ಲ.
ಈ ಮಧ್ಯೆ ತೆಲಂಗಾಣದಲ್ಲಿ ಮೂರು ತಿಂಗಳ ನಂತರ ರಾಜ್ಯಾದ್ಯಂತ ವಿದ್ಯುತ್ ವಾಹನ ಯೋಜನೆ ಜಾರಿಗೊಳಿಸಲಾಗಿದ್ದು, ರಸ್ತೆ ತೆರಿಗೆ ಕಡಿಮೆಯಾಗಿರುವುದು ಪರಿಸರ ಸ್ನೇಹಿ ವ್ಯವಸ್ಥೆಗೆ ನೆರವಾಗಲಿದೆ ಎಂದು ತಜ್ಞರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


