ಬೆಂಗಳೂರು: ಮೂರು ರೇಸ್ ಕಾರ್ ಗಳನ್ನು ವಿನ್ಯಾಸಗೊಳಿಸಿದ ಆರ್.ವಿ. ಕಾಲೇಜು ವಿದ್ಯಾರ್ಥಿಗಳು
ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಮೂರು ರೇಸ್ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ.

Published On :
ಬೆಂಗಳೂರು: ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಮೂರು ರೇಸ್ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರುಗಳು ಏಪ್ರಿಲ್-ಮೇ ತಿಂಗಳಲ್ಲಿ ಅಮೆರಿಕಾದಲ್ಲಿ ನಡೆಯುವ ರೇಸ್ ನಲ್ಲಿ ಕಾಣಿಸಿಕೊಳ್ಳಲು ಸಿದ್ದವಾಗಿವೆ. ಅಶ್ವ ಮೊಬಿಲಿಟಿ ಬ್ರ್ಯಾಂಡ್ ನ ಅಡಿಯಲ್ಲಿ ಈ ರೇಸ್ ಕಾರುಗಳು ತಯಾರಾಗಿವೆ.
ಅವರು 2018ರ ರೇಸ್ ಋತುವಿಗಾಗಿ ಪೆಟ್ರೋಲ್ ಚಾಲಿತ (AMF RZX8- CO 210kg), ಹೈಬ್ರಿಡ್ (AMF X8-HY 300kg) ಮತ್ತು ವಿದ್ಯುತ್ (AMF-RZX8 -ELE 200kg) ಚಾಲಿತ ಮೂರು ಕಾರ್ ಗಳು ತಯಾರಾಗಿದ್ದು ಶನಿವಾರ ಈ ಕಾರ್ ಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸ್ವೀಕೃತ್ ಶೆಟ್ಟಿ ನೇತೃತ್ವದ ತಂಡ ಪೆಟ್ರೋಲ್ ಚಾಲಿತ ವಾಹನ ತಯಾರಿಸಿದ್ದು ಪ್ರಾಜೆಕ್ಟ್ ಮ್ಯಾನೇಜರ್ ರಾಕೇಶ್ ಎಚ್ ಎನ್ ಮತ್ತು ಮುಖ್ಯ ಎಂಜಿನಿಯರ್ ಪ್ರತಿಕ್ ಭಸ್ತಲಿ ಸಹ ಜತೆಯಾಗಿದ್ದಾರೆ. ಇನ್ನು ಹೈಬ್ರೀಡ್ ವಾಹನ ತಯಾರಿಯಲ್ಲಿ ತಂಡದ ನಾಯಕ ಅಸ್ಫಾನ್ ಖಾನ್, ಯೋಜನಾ ವ್ಯವಸ್ಥಾಪಕ ಸುಹಾಸ್ ಬಿ ಯು, ಮುಖ್ಯ ಎಂಜಿನಿಯರ್ ಉದಯ್ ನಾಯಕ್ ಮತ್ತು ಮುಖ್ಯ ಸಂವಹನ ಅಧಿಕಾರಿ ತರುಣ್ ಕೇಸಾ ಭಾಗವಹಿಸಿದ್ದಾರೆ. ವಿದ್ಯುತ್ ಚಾಲಿತ ಕಾರ್ ತಯಾರಿಕೆಯಲ್ಲಿ ತಂಡದ ನಾಯಕರಾದ ಪ್ರಣವ್ ನಂದಾ, ಪ್ರಾಜೆಕ್ಟ್ ಮ್ಯಾನೇಜರ್ ರಾಹುಲ್ ಎಸ್. ಡಿ, ಮುಖ್ಯ ಎಂಜಿನಿಯರ್ ಗೌತಮ್ ಸಿಂಗ್ ಮತ್ತು ಮುಖ್ಯ ಸಂವಹನ ಅಧಿಕಾರಿ ಶ್ರೀವಾತ್ಸ ದೇಶಪಾಂಡೆ ಅವರುಗಳ ಕೌಶಲ್ಯ ಅಡಗಿದೆ.
ಅಶ್ವ ಮೊಬಿಲಿಟಿ ತಂಡವು ಪದವೀಧರ ಎಂಜಿನಿಯರುಗಳನ್ನು ಒಳಗೊಂಡಿದ್ದು, ಇದು ತನ್ನ ಮೂಲ ಮಾದರಿಗಳೊಡನೆ ರೇಸ್ ಕಾರ್ ಗಳನ್ನು ವಿನ್ಯಾಸಗೊಳಿಸುತ್ತದೆ. ಹಾಗೆ ತಯಾರಾದ ಕಾರ್ ಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಾರ್ ವಿನ್ಯಾಸ ಪ್ರದರ್ಶನ, ಸ್ಪರ್ಧೆಗಳಲ್ಲಿ ಭಾಗವಹಿಸುತ್ತದೆ. ಅಶ್ವ ಮೊಬಿಲಿಟಿ ಚಲನಾಶೀಲ ಇಂಜಿನಿಯರಿಂಗ್ ಅಭಿವೃದ್ಧಿ ಯೋಜನೆಗೆ ಉತ್ತೇಜನ ನೀಡುತ್ತಾ ಬಂದಿದ್ದು. 2003 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಮೊದಲ ರೇಸ್ ಕಾರ್ ಅನ್ನು 2005 ರಲ್ಲಿ ವಿನ್ಯಾಸಗೊಳಿಸಿತ್ತು. ಕಳೆದ ದಶಕದಲ್ಲಿ, ತಂಡವು 12ಪೆಟ್ರೋಲ್ ಚಾಲಿತ ವಾಹನ ಮಾದರಿಯನ್ನು ನಿರ್ಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruRV College Of Engineeringrace carAshwa mobilityರೇಸ್ ಕಾರ್ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ಅಶ್ವ ಮೊಬಿಲಿಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


