ಯಾರೀ ಯೋಗಮಾಯೆ? ಶ್ರೀಕೃಷ್ಣ ಜನ್ಮಾಷ್ಟಮಿಯ ಕಥೆಯ ಅಬ್ಬರದಲ್ಲಿ ಮರೆತುಹೋದ ಮಗಳು!
ಯೋಗಮಾಯ ಪ್ರಸಂಗವು ಜನ್ಮಾಷ್ಟಮಿಯಲ್ಲಿ ಕಡಿಮೆ ಪ್ರಾಮುಖ್ಯತೆ ಪಡೆದುಕೊಂಡಿದೆ. ವೈಷ್ಣವ ಮತ್ತು ಶಾಕ್ತ ಸಂಪ್ರದಾಯದಲ್ಲಿ ಈಕೆಯನ್ನು ಆದಿಶಕ್ತಿಯ ಅಥವಾ ನಾರಾಯಣನ ಶಕ್ತಿಯ ಮೂರ್ತರೂಪವೆಂದು ಪೂಜಿಸಲಾಗುತ್ತದೆ

ಯೋಗಮಾಯೆ ಎಂದರೆ ಹಿಂದೂ ಪುರಾಣ ಮತ್ತು ತತ್ತ್ವಶಾಸ್ತ್ರದ ಪ್ರಕಾರ ಭಗವಾನ್ ವಿಷ್ಣುವಿನ ದೈವಿಕ, ಆಂತರಿಕ ಮತ್ತು ಆಧ್ಯಾತ್ಮಿಕ ಶಕ್ತಿ. ಇದು ಜಗತ್ತನ್ನು ಮೋಹಗೊಳಿಸುವ ಮಾಯಾ ಶಕ್ತಿಯಲ್ಲದೆ, ಭಕ್ತರನ್ನು ಭಗವಂತನ ಕಡೆಗೆ ಸೆಳೆಯುವ ಶುದ್ಧ ದೈವಿಕ ಶಕ್ತಿಯಾಗಿದೆ.
ಭಕ್ತರು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸಿದ್ಧರಾಗುತ್ತಿದ್ದಂತೆ, ಶ್ರೀಕೃಷ್ಣನ ದೈವಿಕ ಜನನದ ಪರಿಚಿತ ಕಥೆಯು ಹೆಚ್ಚಾಗಿ ವಾಸುದೇವನು ನವಜಾತ ಕೃಷ್ಣನನ್ನು ಮಥುರಾದಿಂದ ಗೋಕುಲಕ್ಕೆ ಹೊತ್ತೊಯ್ಯುವುದರ ಮೇಲೆ ಕೇಂದ್ರೀಕರಿಸುತ್ತದೆ. ಆದರೆ ಶ್ರೀಮದ್-ಭಾಗವತವು ಈ ಪ್ರಸಂಗದಲ್ಲಿ ಮತ್ತೊಂದು ಪ್ರಮುಖ ವ್ಯಕ್ತಿಯಾದ ಯೋಗಮಾಯೆಯನ್ನು ಯಶೋದೆಯೊಂದಿಗೆ ಸಂಬಂಧ ಹೊಂದಿರುವ ದೈವಿಕ ಶಕ್ತಿ ಎಂದು ದಾಖಲಿಸುತ್ತದೆ.
ದೇವಕಿಯ ಎಂಟನೇ ಮಗು ತನ್ನ ಸಾವಿಗೆ ಕಾರಣ ಎಂಬ ಭವಿಷ್ಯವಾಣಿಗೆ ಹೆದರಿದ ಕಂಸ ಸೆರೆಮನೆಗೆ ಬಂದು ಶಿಶುವನ್ನು ಕೊಲ್ಲಲು ಪ್ರಯತ್ನಿಸಿದನು. ಯಶೋದೆಯ ಮಗಳಾಗಿ ಯೋಗಮಾಯೆ ಜನಿಸುತ್ತಾಳೆ. ವಸುದೇವನು ಕೃಷ್ಣನನ್ನು ಗೋಕುಲಕ್ಕೆ ಬಿಟ್ಟು, ಈ ಹೆಣ್ಣು ಮಗುವನ್ನು ಸೆರೆಮನೆಗೆ ತರುತ್ತಾನೆ. ಕಂಸನು ಆ ಮಗುವನ್ನು ಕೊಲ್ಲಲು ಹೋದಾಗ, ಆಕೆ ಅವನ ಕೈಯಿಂದ ತಪ್ಪಿಸಿಕೊಂಡು ಆಕಾಶಕ್ಕೆ ಹಾರಿ, "ನಿನ್ನನ್ನು ಕೊಲ್ಲುವವನು ಈಗಾಗಲೇ ಬೇರೆಡೆ ಬೆಳೆಯುತ್ತಿದ್ದಾನೆ" ಎಂದು ಭವಿಷ್ಯ ನುಡಿದು ಮಾಯವಾಗುತ್ತಾಳೆ. ಅವಳು ತನ್ನನ್ನು ವಿಷ್ಣುವಿನ ತಂಗಿ ಎಂದು ಗುರುತಿಸಿಕೊಂಡಿದ್ದಾಳೆ.
ಯೋಗಮಾಯ ಪ್ರಸಂಗವು ಜನ್ಮಾಷ್ಟಮಿಯಲ್ಲಿ ಕಡಿಮೆ ಪ್ರಾಮುಖ್ಯತೆ ಪಡೆದುಕೊಂಡಿದೆ. ವೈಷ್ಣವ ಮತ್ತು ಶಾಕ್ತ ಸಂಪ್ರದಾಯದಲ್ಲಿ ಈಕೆಯನ್ನು ಆದಿಶಕ್ತಿಯ ಅಥವಾ ನಾರಾಯಣನ ಶಕ್ತಿಯ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ಈಕೆಯನ್ನು ದುರ್ಗಾ ದೇವಿಯ ಅಂಶವೆಂದೂ ಪರಿಗಣಿಸಲಾಗಿದೆ. ಭಾಗವತ ಪುರಾಣದ ಪ್ರಕಾರ, ಕೃಷ್ಣನ ಅವತಾರ ಸಮಯದಲ್ಲಿ ಯೋಗಮಾಯೆಯು ನಂದ ಮತ್ತು ಯಶೋದೆಯರ ಮಗಳಾಗಿ ಜನಿಸಿದಳು. ಕಂಸನಿಂದ ಕೃಷ್ಣನನ್ನು ರಕ್ಷಿಸಲು ವಸುದೇವನು ಕೃಷ್ಣನನ್ನು ಗೋಕುಲಕ್ಕೆ ಕೊಂಡೊಯ್ದು, ಯೋಗಮಾಯೆಯನ್ನು ಯಶೋದೆಯ ಬಳಿ ತಂದಿಟ್ಟನು.
ವೈಷ್ಣವ ಸಂಪ್ರದಾಯದಲ್ಲಿ ಈಕೆಗೆ ನಾರಾಯಣಿ ಎಂದು ಕರೆಯಲಾಗುತ್ತದೆ. ವಿಷ್ಣು ವಿನ ಶಕ್ತಿಗಳ ಮೂರ್ತರೂಪವಾಗಿ ಪೂಜಿಸಲಾಗುತ್ತದೆ. ಈ ದೇವತೆಯನ್ನು ಭಾಗವತ ಪುರಾಣದಲ್ಲಿ ದುರ್ಗಾ ದೇವಿಯ ಅಂಶವೆಂದು ಪರಿಗಣಿಸಲಾಗಿದೆ. ಆಕೆಯನ್ನು ಶಾಕ್ತಾ ಸಂಪ್ರದಾಯದಲ್ಲಿ ಆದಿ ಶಕ್ತಿಯ ಒಂದು ರೂಪವೆಂದು ಪರಿಗಣಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



