ದೇವಾಲಯಗಳಲ್ಲಿ ತೆಂಗಿನಕಾಯಿ ಅರ್ಪಿಸುವುದರ ಹಿಂದಿನ ಉದ್ದೇಶ ಏನು ಗೊತ್ತಾ?
ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಸಾಮರ್ಥ್ಯವಿದೆ.

Published On :
ಭಾರತೀಯ ಸನಾತನ ಪರಂಪರೆಯಲ್ಲಿ ತೆಂಗಿನ ಕಾಯಿಗೆ ವಿಶೇಷ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಈ ಕಾರಣದಿಂದ ತೆಂಗಿನ ಕಾಯಿಗೆ ವಿಶೇಷ ಮಾಹತ್ವ, ಮಹಿಮೆ ಇದೆ.
ತನ್ನ ವೈಷ್ಟ್ಯದಿಂದ ತೆಂಗಿನಕಾಯಿ ಶ್ರೀಫಲಗಳ ಸಾಲಿನಲ್ಲಿ ಸ್ಥಾನಪಡೆದಿದ್ದು, ಎಲ್ಲಕ್ಕಿಂತ ಹೆಚ್ಚು ಸಾತ್ವಿಕ ಶಕ್ತಿಯನ್ನು ಹೊಂದಿದ್ದು, ಪೂಜೆ ಮಾಡುವವರಿಗೂ ಸಾತ್ವಿಕ ಶಕ್ತಿಯನ್ನು ನೀಡುವ ಫಲವಾಗಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿ ಅಥವಾ ಶ್ರೀಫಲವನ್ನು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲೇ ದೇವರಿಗೆ ಅರ್ಪಿಸುವುದಕ್ಕೆ ಮಹತ್ವದ ಕಾರಣವಿದೆ. ಎಲ್ಲಾ ಸಮಯದಲ್ಲೂ ಲಭ್ಯವಿರುವ ಫಲ ಎನ್ನುವ ಕಾರಣ ಒಂದೇ ಅಲ್ಲದೇ, ತತ್ವಜ್ಞಾನದ ಆಳವಾದ ಅರ್ಥವನ್ನು ಹೊಂದಿದೆ.
ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವವರೆಗೂ ಅಂದರೆ ಅದನ್ನು ಒಡೆಯುವವರೆಗೂ ತೆಂಗಿನ ಕಾಯಿಯಲ್ಲಿರುವ ಸೇವಿಸಬಹುದಾದ ಭಾಗವನ್ನು ಪಡೆಯಲು ಸಾಧ್ಯವಿರುವುದಿಲ್ಲ. ಒಮ್ಮೆ ತೆಂಗಿನ ಕಾಯಿಯನ್ನು ಒಡೆದರೆ ಅದರಲ್ಲಿರುವ ನೀರು ಹಾಗೂ ಒಳಭಾಗದಲ್ಲಿರುವ ಪದಾರ್ಥ ದೇವರಿಗೆ ನೈವೇದ್ಯವಾಗಲಿದೆ. ತೆಂಗಿನ ಕಾಯಿಯ ಮೇಲ್ಭಾಗದಲ್ಲಿರುವ ಕರಟ ಮನುಷ್ಯನ ಅಹಂಕಾರವನ್ನು ಪ್ರತಿನಿಧಿಸುತ್ತದೆ. ಒಳಗಿರುವ ಸಿಹಿ ನೀರು ಹಾಗೂ ಸೇವಿಸಬಹುದಾದ ಪದಾರ್ಥ ಸಾತ್ವಿಕತೆ, ಮೃದುತ್ವವನ್ನು ಪ್ರತಿನಿಧಿಸುತ್ತದೆ. ಅಹಂಕಾರವನ್ನು ಪ್ರತಿನಿಧಿಸುವ ಕರಟವನ್ನು ಒಡೆದಿ ಒಳಗಿರುವ ಸಾತ್ವಿಕತೆಯಿಂದ ದೇವರನ್ನು ಪ್ರಾರ್ಥಿಸಿದರೆ ಅಂತರಾತ್ಮ ಶುದ್ಧಿಗೆ ಸಹಕಾರಿಯಾಗಲಿದೆ ಎಂಬ ನಂಬಿಕೆಯೂ ಇದೆ.
ತೆಂಗಿನಕಾಯಿಯ ಕರಟದಂತಹ ಕಠಿಣ ಅಹಂಕಾರವನ್ನು ಭಂಜಿಸಿದರೆ ಪರಮಾತ್ಮನ ಸಾಕ್ಷಾತ್ಕಾರ ಹಾಗೂ ಪರಮಸತ್ಯದ ಸಾಕ್ಷಾತ್ಕಾರದ ಹಾದಿ ಸುಗಮ ಎಂಬುದು ಸನಾತನ ಧರ್ಮದ ಬೋಧನೆಯಾಗಿದ್ದು, ಇದನ್ನು ತಿಳಿಸಲು ಶ್ರೀಫಲವಾಗಿರುವ ತೆಂಗಿನಕಾಯಿಯನ್ನು ರೂಪಕವಾಗಿ ಉದಾಹರಣೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


