ಅಧಿಕಾರ ಭಾಗ್ಯ?
ಇಂದು ಪ್ರಜಾಪ್ರಭುತ್ವ ಎಂಬ ಶಬ್ದ ಹೆಚ್ಚು ಅರ್ಥಪೂರ್ಣವಾಗುತ್ತಿದ್ದು, ಜನಸಾಮಾನ್ಯರೂ ಕೂಡಾ ರಾಜಕೀಯದಲ್ಲಿ...

ಇಂದು ಪ್ರಜಾಪ್ರಭುತ್ವ ಎಂಬ ಶಬ್ದ ಹೆಚ್ಚು ಅರ್ಥಪೂರ್ಣವಾಗುತ್ತಿದ್ದು, ಜನಸಾಮಾನ್ಯರೂ ಕೂಡಾ ರಾಜಕೀಯದಲ್ಲಿ ಪಾಲ್ಗೊಂಡು ರಾಜ್ಯವಾಳಬಹುದಾದ ದಿನಗಳು ಬಂದಿವೆ. ಹೀಗೆ ರಾಜಕೀಯದ ವಿವಿಧ ಮಜಲುಗಳನ್ನೇರಲು ಕೇವಲ ವ್ಯಕ್ತಿಗಳ ಬೆಂಬಲವಿದ್ದರಷ್ಟೇ ಸಾಲದು, ಗ್ರಹಗತಿಗಳೂ ಚೆನ್ನಾಗಿರಬೇಕು.
ಯಾವ ಗ್ರಹ ಎಲ್ಲಿದ್ದರೆ ಎಂ.ಎಲ್.ಎ., ಎಂ.ಪಿ, ಕ್ಯಾಬಿನೆಟ್ ಮಿನಿಸ್ಟರ್, ಚೀಫ್ ಮಿನಿಸ್ಟರ್ ಇಂತಹ ರಾಜ್ಯವಾಳುವ ಪದವಿ ಪಡೆಯುವುದು ಎಂಬ ಬಗ್ಗೆ ತಿಳಿದುಕೊಳ್ಳಲೇಬೇಕು.
ರಾಜ್ಯವಾಳುವ ಪದವಿ ಪಡೆಯಬೇಕಾದರೆ ಜಾತಕದಲ್ಲಿ ಅಥವಾ ರಾಶಿಕುಂಡಲಿಯಲ್ಲಿ 2ನೇ ಭಾವದಲ್ಲಿ ಶುಕ್ರ, ಕುಜ ಇದ್ದು ಗುರುದೃಷ್ಟಿಯಾಗಿದ್ದರೆ ಅಂತಹ ಜಾತಕದವರು ರಾಜ್ಯವಾಳುತ್ತಾರೆ. ಲಗ್ನದಿಂದ 4ನೇ ಭಾವದವರೆಗೆ ಶುಭಗ್ರಹಗಳು ಇದ್ದು, 11-12 ಭಾವಗಳಲ್ಲಿ ಬೇರೆ ಗ್ರಹಗಳಿದ್ದರೆ ರಾಜ್ಯವಾಳುವ ಭಾಗ್ಯ ಸಿಗುತ್ತದೆ. ಇಂತಹ ಯೋಗವನ್ನು ಗ್ರಹಮಾಲಿಕಾ ಯೋಗ ಎಂದು ಕರೆಯುತ್ತಾರೆ. ಶನಿಗ್ರಹಕ್ಕೆ ಸೂರ್ಯದೃಷ್ಟಿ ಇದ್ದರೂ ಮತ್ತು ಕುಂಭರಾಶಿ ಶನಿಯನ್ನು ಸೂರ್ಯಗ್ರಹ ನೋಡುತ್ತಿದ್ದ ಪಕ್ಷದಲ್ಲಿ ರಾಜ್ಯವಾಳುವ ಭಾಗ್ಯ ಸಿಗುತ್ತದೆ.
ಒಬ್ಬರ ಜಾತಕದಲ್ಲಿ 3,6,8,12 ಅದಕ್ಕೆ ಸಂಬಂಧಪಟ್ಟ ಗ್ರಹಗಳು ಪರಿವರ್ತನೆ ಆಗಿದ್ದರೂ ರಾಜ್ಯವಾಳುವ ಯೋಗವಿರುತ್ತದೆ. ಇದಕ್ಕೆ ವಿಪರೀತ ರಾಜಯೋಗ ಎಂದು ಕರೆಯಲಾಗುತ್ತದೆ. ಕಾರಕ ಅಂಶಕ್ಕೆ 1,7,9,11 ಭಾವಗಳಲ್ಲಿ ಗುರುಬಲ ಪಡೆದ ಚಂದ್ರ ಮತ್ತು ಶುಭ ಗ್ರಹಗಳು ನೋಡಿದ ಪಕ್ಷದಲ್ಲಿ ರಾಜ್ಯವಾಳುವ ಸಂದರ್ಭ ಸಿಗುತ್ತದೆ.
ಬುಧ, ಗುರು ಒಂದಾಗಿ ಸೇರಿ, 1,7,9,11ರ ಭಾವಗಳಲ್ಲಿ ಸೂರ್ಯ ಮತ್ತು ಕುಜ ದೃಷ್ಟಿ ಇರುವ ಪಕ್ಷದಲ್ಲಿ ರಾಜ್ಯವಾಳುವ ಯೋಗವಿರುತ್ತದೆ. ಸೂರ್ಯ, ಚಂದ್ರ, ಗುರು 11ರ ಭಾವದಲ್ಲಿ ಇದ್ದು ಮಿಕ್ಕ ಶುಭಗ್ರಹಗಳು 9ನೇ ಭಾಗ್ಯಸ್ಥಾನದಲ್ಲಿ ಇದ್ದರೆ ಅವರು ಮಂತ್ರಿಗಳಾಗುತ್ತಾರೆ.
ಕಾರಕಾಂಶಕ್ಕೆ 2,4,5 ಭಾವಗಳಲ್ಲಿ ಮತ್ತು 3 ಅಲ್ಲದೆ 4 ಭಾವಗಳಲ್ಲಿ ಶುಭಗ್ರಹಗಳಿದ್ದಲ್ಲಿ ಮಂತ್ರಿಯಾಗುತ್ತಾರೆ. ಆರನೇ ಲಗ್ನ ಹೋರ ಲಗ್ನ, ಸೂರ್ಯ ಲಗ್ನ ಇಂತಹುಗಳಲ್ಲಿ ಶುಭಗ್ರಹಗಳು ಇದ್ದರೆ ಮತ್ತು ಶುಭ ದೃಷ್ಟಿ ಇದ್ದರೂ ಮಂತ್ರಿಗಳಾಗುತ್ತಾರೆ.
ಮಂತ್ರಿ ಪದವಿ
ಲಗ್ನ ನವಾಂಶ ಲಗ್ನ, ದ್ರೇಕ್ಕಾಣ ಮುಂತಾದ ಲಗ್ನಕ್ಕೆ ಮೂರು ಶುಭ ಗ್ರಹಗಳ ದೃಷ್ಟಿ ಬಿದ್ದರೆ ಕ್ಯಾಬಿನೆಟ್ ಮಿನಿಸ್ಟರ್ ಮತ್ತು ಮುಖ್ಯಮಂತ್ರಿ ಆಗುತ್ತಾರೆ.
ಶುಕ್ರ, ಕುಜ, ಕೇತು ಒಬ್ಬರಿಗೊಬ್ಬರು 3,11 ಭಾವದಲ್ಲಿದ್ದು, ಒಬ್ಬರ ದೃಷ್ಟಿ ಮತ್ತೊಬ್ಬರ ಮೇಲಿದ್ದರೆ ರಾಜ್ಯವಾಳುವ ಭಾಗ್ಯ ಸಿಗುತ್ತದೆ. 3,6,8,12ರ ಭಾವಗಳಲ್ಲಿ ಪಾಪಗ್ರಹಗಳಿದ್ದು, ಒಬ್ಬರಿಗೊಬ್ಬರು ದೃಷ್ಟಿಸಿ ನೋಡಿದರೆ ಮತ್ತು ಒಬ್ಬರಿಗೊಬ್ಬರು ಪರಿವರ್ತ ಆಗಿದ್ದರೆ ರಾಜ್ಯವಾಳುವ ಲಭ್ಯ ಉಂಟು.
ಮಿಥುನ, ಕನ್ಯಾ, ಧನಸ್ಸು, ಮೀನಾ ಇಂತಹ 4 ರಾಶಿ ಭಾವಗಳಲ್ಲಿ ಶುಭ ಗ್ರಹಗಳು ಇದ್ದರೆ ಅಥವಾ ಶುಭಗ್ರಹಗಳ ದೃಷ್ಟಿ ಇದ್ದರೆ ಅವರು (ಮುಖ್ಯಮಂತ್ರಿಗಳಾಗುತ್ತಾರೆ ಮತ್ತು ಪಕ್ಷದ ಮುಖ್ಯಸ್ಥರಾಗುತ್ತರೆ.) ರಾಷ್ಟ್ರಾಧ್ಯಕ್ಷರಾಗುತ್ತಾರೆ.
ಒಬ್ಬರ ಜಾತಕದಲ್ಲಿ 2 ಮತ್ತು 3 ಭಾವಗಳಲ್ಲಿ ಶುಭಗ್ರಹಗಳು ಉಚ್ಛ ಸ್ಥಾನದಲ್ಲಿದ್ದು, ಪಾಪಗ್ರಹಗಳು ನೀಚಸ್ಥಾನ ಅಥವಾ ಅವರವರ ಸ್ವಸ್ಥಾನದಲ್ಲಿದ್ದರೆ ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಾಧ್ಯಕ್ಷ ಆಗುವ ಸಾಧ್ಯತೆ ಇದೆ.
- ಎನ್.ಆರ್.ಕೆ. ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


