ಶಿವರಾತ್ರಿಯಂದು ಮಂತ್ರಪಠಣ

ಸೂರ್ಯ ಪ್ರತಿದಿನ ಮುಂಜಾನೆ ಉದಯಿಸುತ್ತಾನೆ ಹಾಗೂ ಪ್ರತಿ ಸಂಜೆ ಅಸ್ತಂಗತನಾಗುತ್ತಾನೆ. ನೀರು ಆವಿಯಾಗುತ್ತದೆ. ಮತ್ತೆ ಮಳೆಯ ರೂಪದಲ್ಲಿ ಭೂಮಿಗೆ ವಾಪಸಾಗುತ್ತದೆ. ನೀವು ನಿಮ್ಮ ಸುತ್ತಲಿನ ಸೃಷ್ಟಿಯನ್ನು ಗಮನಿಸಿ ನೋಡಿದರೆ ಎಲ್ಲವೂ ಒಂದು ಚಕ್ರದಂತೆ ಅನಿಸುವುದಿಲ್ಲವೇ? ಯಾವುದೂ ಶಾಶ್ವತವಲ್ಲ ಹಾಗೂ ಇಲ್ಲಿ ನಾಶ ಎಂಬ ಮಾತೇ ಇಲ್ಲ. ಐನ್‌ಸ್ಟೀನ್ ಹೇಳಿದ ಮಾತಿನಂತೆ, ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಅದರ ರೂಪವನ್ನು ಬದಲಿಸಬಹುದಷ್ಟೇ. ಐವತ್ತು ಸಾವಿರ ವರ್ಷಗಳಿಂದ ನಮ್ಮ ವೇದಗಳು ಹೇಳುತ್ತಿರುವುದೂ ಅದನ್ನೇ.
ಸೂರ್ಯ ಮುಳುಗಿದ, ದಿನ ಮುಗಿಯಿತು... ಅಂದಮಾತ್ರಕ್ಕೆ ಆ ದಿನ ಮತ್ತೆ ಬರುವುದೇ ಇಲ್ಲವೆಂದಲ್ಲ. ಕಡುಕತ್ತಲ ರಾತ್ರಿಗಳೇ ಪ್ರಖರ ಬೆಳಕಿನ ದಿನಗಳಿಗೆ ಮೂಲ. ಸೃಷ್ಟಿ ಎಂಬುದು ಪೂರ್ಣವಾಗುವುದೇ ವೈರುಧ್ಯಗಳಿಂದ. ವೈರುಧ್ಯಗಳು ಬೇರ್ಪಟ್ಟಾಗ ಅದನ್ನು ನಾಶ ಅಥವಾ ಪ್ರಳಯ ಅನ್ನುತ್ತೇವೆ. ವೈರುಧ್ಯಗಳು ಒಂದಾದಾಗ ಅದನ್ನು ಸೃಷ್ಟಿ ಅಥವಾ ಹುಟ್ಟು ಅನ್ನುತ್ತೇವೆ.
ಶಿವರಾತ್ರಿಯ ರಾತ್ರಿ ಒಂದು ಸೃಷ್ಟಿಯ ರಾತ್ರಿ. ಅದು ಒಂದು ಮಿಲನದ, ಒಂದು ಸೃಷ್ಟಿಯ, ಒಂದು ಉದ್ದೇಶದ ಒಂದು ಸಂತೃಪ್ತಿಯ ರಾತ್ರಿ. ಝ್ಝಢಛ ಎಂಬ ಪದದಲ್ಲಿ ಝಛಢ ಎಂಬ ಪದವು ಹುದುಗಿದೆ. ಅದರ ಅರ್ಥ ಮೃತ ಶರೀರ. ್ಝ ಎಂಬ ಅಕ್ಷರಕ್ಕೆ ಶಕ್ತಿ ಎಂದರ್ಥ. ಅಂದ್ರೆ ಸೃಷ್ಟಿಯನ್ನು ಪ್ರಚೋದಿಸುವ ಶಕ್ತಿ. ಈ ಶಕ್ತಿಗೊಂದು ರೂಪ ಬೇಕಿರುತ್ತದೆ. ಝಛಢ ಶಿವ ಆಗುವ ಹಂತವೇ ಸೃಷ್ಟಿ. ಅದೇ ರೀತಿ ಶಿವರಾತ್ರಿಯ ರಾತ್ರಿಗೆ ನಿಮ್ಮಲ್ಲಿ ಯೋಚನೆಗಳನ್ನು ಸೃಷ್ಟಿಸುವ ಶಕ್ತಿ ಇರುತ್ತದೆ.
ಶಬ್ದ ಎಂಬುದು ಯೋಚನೆಯು ಘಟಿಸುವ ಹಾಗೆ ಮಾಡುವ ಒಂದು ಶಕ್ತಿಶಾಲಿ ಮಾಧ್ಯಮ. ಕ್ರೋಡೀಕರಿಸಿದ ಶಬ್ದವಾದ 'ಮಂತ್ರ' ಕೂಡ ಪ್ರಾಕೃತಿಕವಾದ ವಸ್ತುವನ್ನು ಅಥವಾ ಶಕ್ತಿಯನ್ನು ಸೃಷ್ಟಿಸುವ ಶಕ್ತಿ ಹೊಂದಿದೆ.
ಶಿವರಾತ್ರಿಯಂದು ಈ ಮಂತ್ರಗಳ ಶಕ್ತಿ ಹಲವು ಪಟ್ಟು ಹೆಚ್ಚಾಗಿ ಅದರ ಪ್ರಭಾವಗಳೂ ತೀವ್ರವಾಗಿ ಹೆಚ್ಚುತ್ತವೆ. ಆದರೆ ಈ ಮಂತ್ರಗಳು ಒಬ್ಬ ನುರಿತ ಗುರುವಿನಿಂದ ಪಟಿಸಲ್ಪಟ್ಟಲ್ಲಿ ಮಾತ್ರ ಅದು ಫಲಕಾರಿ ಆಗುತ್ತದೆ.
ಸನಾತನ ಕ್ರಿಯೆಯು 'ನಮಃ ಶಿವಾಯೇ ಯವಾಶಿ ಮನಃ' ಈ ಪಂಚಾಕ್ಷರಿ ಮಂತ್ರವನ್ನು ವಿವರಿಸುತ್ತದೆ. ಗುರುವಿನಿಂದ ಬೋಧಿಸಲ್ಪಟ್ಟ ಈ ಮಂತ್ರವನ್ನು ಶಿವರಾತ್ರಿಯ ರಾತ್ರಿಯಂದು ಪಠಿಸಿದರೆ, ಮನಸಿನಲ್ಲಿ ಗುರುವಿನ ಬಗ್ಗೆ ಯೋಚಿಸುತ್ತಿದ್ದರೆ, ಶಿವನ ಸ್ವರೂಪವೇ ನಿಮ್ಮ ಕಣ್ಮುಂದೆ ಬರುತ್ತದೆ. ಆದರೆ ನೀವು ನೆನೆಯುವ ಗುರು ಮಾಯೆಗಳಿಂದ ಮುಕ್ತನಾಗಿರಬೇಕು ಹಾಗೂ ಈ ಕ್ರಿಯೆಗೆ ನಿಮ್ಮಿಂದ ಯಾವುದೇ ಶುಲ್ಕ ಪಡೆದಿರಬಾರದು.
dhyanzdhyanfoundation.com.
cell : 7406175228.
= ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


