ವೃಷಭ ಭವಿಷ್ಯ
ಚಂದ್ರನನ್ನು ಪರಮೋಚ್ಚ ಸ್ಥಿತಿಯಲ್ಲಿ ಪಡೆಯುವ ವೃಷಭ ರಾಶಿಯವರು ಮಾನಸಿಕವಾಗಿ ಬಹಳ ಬಲಾಢ್ಯರು...

ಚಂದ್ರನನ್ನು ಪರಮೋಚ್ಚ ಸ್ಥಿತಿಯಲ್ಲಿ ಪಡೆಯುವ ವೃಷಭ ರಾಶಿಯವರು ಮಾನಸಿಕವಾಗಿ ಬಹಳ ಬಲಾಢ್ಯರು. ಶುಕ್ರ ರಾಶ್ಯಾಧಿಪತಿ ಆಗಿರುವುದರಿಂದ ಸಂಗೀತ ನೃತ್ಯಾದಿ ಕಲೆಗಳಲ್ಲಿ ಆಸಕ್ತರೂ ಹಾಗೂ ವಿದ್ವಾಂಸರೂ ಆಗಬಹುದು.
ಶುಕ್ರ ಇವರಿಗೆ ಕೇವಲ ರಾಶ್ಯಾಧಿಪತಿ ಅಷ್ಟೇ ಅಲ್ಲ. ಷಷ್ಠಾಧಿಪತಿಯೂ ಆಗಿರುತ್ತಾನೆ. ಆದ್ದರಿಂದ ಇವರು ಎಷ್ಟೇ ದೊಡ್ಡ ವಿದ್ವಾಂಸರು, ಶ್ರೀಮಂತರು ಆಗಿದ್ದರೂ, ದುಶ್ಚಟ ಹಾಗೂ ದುರಭ್ಯಾಸಗಳಿಂದ ದೂರ ಇರಲೇಬೇಕು. ವೃಷಭ ರಾಶಿಯ ಪುರುಷನು ಸ್ತ್ರೀಯರಿಂದ ದೂರ ಇದ್ದಷ್ಟೂ ಒಳಿತು. ನೋಡಲು ಮೊದಲೇ ಅತ್ಯಂತ ಸುಂದರವಾಗಿರುವ ಇವರು ಸೌಂದರ್ಯವರ್ಧಕಗಳನ್ನು ಹೆಚ್ಚು ಬಳಸುವ ಅವಶ್ಯ ಇರುವುದಿಲ್ಲ.
ಔಷಧೋಪಚಾರ
ವೃಷಭ ರಾಶಿಯ ಸ್ತ್ರೀಯರಿಗೆ ಕುಜ ವ್ಯಯಾಧಿಪತಿ ಆಗಿರುವುದರಿಂದ ಮಾಸಿಕ ಋತು ಚಕ್ರದಲ್ಲಿ ಏರುಪೇರು ಆಗುವುದು. ಋತು ಸಮಯದಲ್ಲಿ ಅತಿಯಾದ ರಕ್ತಸ್ರಾವ ಸಾಮಾನ್ಯ. ಆದುದರಿಂದ ಇವರು ಅದನ್ನು ತಡೆಗಟ್ಟಲು ಅತಿ ಖಾರದ ಪದಾರ್ಥ ತಿನ್ನುವುದನ್ನು ಬಿಡಬೇಕು. ಉತ್ತಮ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಔಷಧಿ ಉಪಚಾರ ಮಾಡುತ್ತಿರಬೇಕು. ಕುಜ ಸಪ್ತಮಾಧಿಪತಿಯೂ ಆಗಿರುವುದರಿಂದ ಅತಿ ಕೋಪಿಷ್ಠರು ಇವರಿಗೆ ಬಾಳ ಸಂಗಾತಿಯಾಗುತ್ತಾರೆ.
ಮಾತಿನಂತಿರಲಿ ಕೃತಿ
ವೃಷಭ ರಾಶಿಯವರಿಗೆ ಬುಧ, ಧನ ಹಾಗೂ ಪಂಚಮಾಧಿಪತಿ ಆಗಿರುವುದರಿಂದ ಒಳ್ಳೆ ಮಾತುಗಾರರು ಎಂಬುದರಲ್ಲಿ ಸಂಶಯ ಇಲ್ಲ. ಆದರೆ ಕೇವಲ ಉತ್ತಮ ಭಾಷಣಕಾರರಷ್ಟೇ ಅಲ್ಲದೇ ಆಡಿದ ಮಾತುಗಳನ್ನು ಕೃತಿಯಲ್ಲೂ ತೋರಿಸಿದರಷ್ಟೇ ನಿಜವಾದ ಹಾಗೂ ದೀರ್ಘ ಕಾಲದ ವಿಶ್ವಾಸ ಪಡೆಯಬಹುದು. ಧನಾಧಿಪತಿಯೂ ಬುಧನೇ ಆಗುವುದರಿಂದ ಕೇವಲ ಹಣ ಸಂಪಾದಿಸಲು ಮಾತ್ರ ಚೆನ್ನಾಗಿ ಮಾತನಾಡಿದರೆ ಅದು ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗಲು ಸಹಕಾರಿ ಆಗುವುದಿಲ್ಲ ಹಾಗೂ ಭವಿಷ್ಯವೂ ಇರುವುದಿಲ್ಲ.
ಇನ್ನು ದೇವತಾರಾಧನೆ ವಿಚಾರಕ್ಕೆ ಬಂದಾಗ ತಮ್ಮೆಲ್ಲ ಕಾರ್ಯಸಿದ್ಧಿಗಾಗಿ ವೃಷಭ ರಾಶಿಯವರು ಮಹಾವಿಷ್ಣುವಿನ ಆರಾಧಿಸುವುದು ಉತ್ತಮ. ನಿತ್ಯ ವಿಷ್ಣು ಸಹಸ್ರನಾಮ ಪಠಣ ಮಾಡುವುದರಿಂದ ಎಲ್ಲ ದೋಷಗಳಿಂದ ಮುಕ್ತರಾಗಿ ಜೀವನದಲ್ಲಿ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ. ಮಾಹಿತಿಗೆ ಮೊ. 9743331250 ಸಂಪರ್ಕಿಸಿ.
- ವಿಠಲ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


