ಕೊಬ್ಬು ಕರಗಿಸಬೇಡಿ!

30-40 ವರ್ಷ ವಯೋವಾನದವರಲ್ಲಿ ಹೆಚ್ಚಿನವರ ಯೋಚನೆ ಎಂದರೆ, 'ನನ್ನ ದೇಹ ತೂಕ ಹೆಚ್ಚುತ್ತಿದೆ. ಅದನ್ನು ಕಡಿಮೆ ಮಾಡಿಕೊಳ್ಳಬೇಕು' ಎನ್ನುವುದು. ವಯಸ್ಸಾಗುತ್ತಿದ್ದಂತೆ ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ಶರೀರ ಜಡವಾಗುತ್ತ ಬರುತ್ತದೆ ಮತ್ತು ದೈಹಿಕ ಚಟುವಟಿಕೆಗಳೂ ಕಡಿಮೆಯಾಗುತ್ತವೆ. ಅಂಥ ಸಂದರ್ಭಗಳಲ್ಲಿ ತೂಕ ಇಳಿಸಿಕೊಳ್ಳುವ ಕಸರತ್ತಿಗೆ ತೊಡಗುತ್ತಾರೆ, ಕೊಬ್ಬಿನ ಅಂಶ ಇರುವ ಆಹಾರ ಸೇವನೆ ಕಡಿಮೆ ಮಾಡುತ್ತಾರೆ. ಕೆಲವರು ಡಯಟಿಶಿಯನ್‌ಗಳ ಸಲಹೆ ಪಡೆಯಬಹುದು. ಡಯಟಿಶಿಯನ್‌ಗಳು ಕೂಡ ದೇಹತೂಕವೊಂದನ್ನೇ ಗಮನದಲ್ಲಿ ಇರಿಸಿಕೊಂಡು ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡಲು ಸಲಹೆ ಮಾಡುತ್ತಾರೆ.
ಭೌತಿಕ ಶರೀರ ಅಥವಾ ಅನ್ನಮಯ ಕೋಶವನ್ನು ಆಯುರ್ವೇದವು 'ದೋಷ ಧಾತು ಮಲ ಮೂಲ ಹಿ ಶರೀರಂ' ಎಂದು ವರ್ಣಿಸುತ್ತದೆ. ಅಂದರೆ ದೋಷ, ಧಾತು ಮತ್ತು ಮಲಗಳಿಂದ ನಮ್ಮ ಶರೀರ ರಚನೆಯಾಗಿದೆ ಎಂದು. ಏಳು ಧಾತುಗಳಲ್ಲಿ ಒಂದಾಗಿರುವ ಕೊಬ್ಬು ಅಥವಾ ಮೇದಸ್ಸು ನಮ್ಮ ಶರೀರದಲ್ಲಿನ ಬಹುಮುಖ್ಯ ಧಾತು ಎಂದರೆ ನೀವು ಅಚ್ಚರಿಪಡುತ್ತೀರಿ. ಆದ್ದರಿಂದ ಆಹಾರದಲ್ಲಿನ ಕೊಬ್ಬು ಕಡಿಮೆ ಮಾಡುವುದು ಎಂದರೆ ನೀವು ಗೊತ್ತಿದ್ದೊ, ಗೊತ್ತಿಲ್ಲದೆಯೊ ಶರೀರದಲ್ಲಿನ ಸಮತೋಲನ ತಪ್ಪುವಂತೆ ಮಾಡಿಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಈ ಅಸಮತೋಲನ ಕಾಯಿಲೆಗಳು ಮತ್ತು ವಯಸ್ಸಾಗುವಿಕೆಗಳ ಮೇಲೂ ಪರಿಣಾಮ ಬೀರುತ್ತದೆ.
ವೇದಕಾಲದ ಋಷಿಗಳು ವ್ಯಕ್ತಿಯ ಶರೀರದಲ್ಲಿನ ದೋಷ, ಧಾತು, ಮೂಲ ಎಂಬ ಮೂರು ಅಂಶಗಳಿಂದಲೇ ಆತನ ದೇಹಪ್ರಕೃತಿ ಹೇಗಿರುತ್ತದೆ ಎನ್ನುವುದನ್ನು ಹೇಳಿದರು. ಆಯುರ್ವೇದ ವಿಜ್ಞಾನ ಕಾಯಿಲೆ ಕೇಂದ್ರಿತ ಔಷಧೀಯ ವಿಜ್ಞಾನವಲ್ಲ. ಆಯುರ್ವೇದ ನಿಂತಿರುವುದೇ ಪ್ರಕೃತಿ ಆಧರಿಸಿ. ಪ್ರಕೃತಿ ಯಾವಾಗಲೂ ಸಮತೋಲದಿಂದಲೇ ಕೂಡಿರುತ್ತದೆ. ಹೀಗಾಗಿ ವ್ಯಕ್ತಿ ವಾಸಿಸುವ ವಾತಾವರಣ ಮತ್ತು ಆತನ ದೇಹಪ್ರಕೃತಿಗೆ ಅನುಗುಣವಾಗಿ ಶರೀರದಲ್ಲಿ ಹೇಗೆ ಸಮತೋಲನ ಸಾಧಿಸಬೇಕು ಎನ್ನುವುದನ್ನು ವಿವರಿಸುತ್ತದೆ ಈ ವಿಜ್ಞಾನ. ಅನಾರೋಗ್ಯ ಶರೀರದಲ್ಲಿನ ಅಸಮತೋಲನದ ಸಂಕೇತ. ಇಡೀ ಶರೀರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸರಿಪಡಿಸುವ ಪ್ರಯತ್ನವನ್ನು ಆಯುರ್ವೇದ ಮಾಡುತ್ತದೆ. ನನ್ನ 'ಸನಾತನ ಕ್ರಿಯಾ: ದಿ ಏಜ್‌ಲೆಸ್ ಡೈಮೆನ್ಶನ್' ಕೃತಿಯ 'ದೀಪನ್ ಕ್ರಿಯಾ' ಅಧ್ಯಾಯದಲ್ಲಿ ನಮ್ಮ ಶರೀರದಲ್ಲಿನ ಅಸಮತೋಲನಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವ ಕುರಿತು ವಿವರವಾಗಿ ಹೇಳಿದ್ದೇನೆ. ಇದು ವಿವಿಧ ಪ್ರಕೃತಿಯಲ್ಲೇ ಇರುವ ಹಲವಾರು ಬಲವರ್ಧಕಗಳು, ಗಿಡಮೂಲಿಕೆಗಳು, ಆಹಾರಶೈಲಿಯನ್ನು ಒಳಗೊಂಡಿದೆ.
= ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


