ಭಕ್ತಿ-ಜ್ಯೋತಿಷ್ಯ

ಕಾಕ ಶಾಸ್ತ್ರ

ಕಾಕ ಶಾಸ್ತ್ರ
Published On :

ಮನುಷ್ಯನಿಗೂ ಕಾಗೆಗೂ ಅವಿನಾಭಾವ ಸಂಬಂಧ. ಕಾಗೆಯನ್ನು ಪಿತೃದೇವತೆ ಎಂದೂ ಕರೆಯುತ್ತರೆ. ಹೀಗಾಗಿಯೇ ಪಿತೃಪಕ್ಷದಲ್ಲಿ ಪಿತೃತರ್ಪಣ ನೀಡುವಾಗ ಕಾಗೆ ಬೇಕೇಬೇಕು.  
ಮೃತಪಟ್ಟವರ ಉತ್ತರ ಕ್ರಿಯೆಯ ದಿನ ಮಧ್ಯಾಹ್ನ ಇತರರು ಊಟ ಮಾಡುವ ಮೊದಲು ಅನ್ನವನ್ನು ಕಾಗೆಗೆ ಇಡುವ ಕ್ರಮ ಇದೆ. ಸುತ್ತಮುತ್ತಲೂ ಬಹಳ ಸಂಖ್ಯೆಯಲ್ಲಿ ಕಾಗೆಗಳು ಇದ್ದರೂ ಕೆಲವರ ಉತ್ತರಕ್ರಿಯೆಯಲ್ಲಿ ಅನ್ನವನ್ನು ತಿನ್ನುವುದಕ್ಕೆ ಕಾಗೆಗಳು ಬರುವುದೇ ಇಲ್ಲ.
ಇದಕ್ಕೆ ಸರಿಯಾದ ಕಾರಣವನ್ನು ಯಾರೂ ಹುಡುಕಲು ಹೋಗಲೇ ಇಲ್ಲ.  ಮನುಷ್ಯ ಸತ್ತ ನಂತರ ಕಾಗೆಯಾಗಿ ಮರು ಜನ್ಮ ಪಡೆದು ಬರುತ್ತಾನೆ ಎಂದು ಹೇಳುತ್ತಾರೆ. ಇದರಿಂದ ಕಾಗೆಗಳಿಗೆ ಆಹಾರ ಕೊಟ್ಟು ತಮ್ಮ ಪೂರ್ವಿಕರ ತೃಪ್ತಿಗಾಗಿ ಊಟ ಹಾಕುವುದು ಹಿಂದೂಗಳ ನಂಬಿಕೆ.
ಕಾಗೆ ಮನೆಯ ಎದುರು ಬಂದು ಕೂಗುವ ಧ್ವನಿಯಿಂದ ನೆಂಟರು ಬರುವ ಸೂಚನೆ ಎಂದು ನಂಬಿಕೆ. ಕಾಗೆಗಳ ಬೇರೆ ಬೇರೆ ಚೇಷ್ಟೆಯಿಂದ ಬೇರೆ ಬೇರೆ ಘಟನೆ ನಡೆಯುವ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.
ಎಡ ಭಾಗದಲ್ಲಿ ಕೂಗಿ ಎದುರಾಗಿ ಬರುತ್ತಿದ್ದರೆ ಏನಾದರೂ ತೊಂದರೆ ಇದೆ ಎಂದು ತಿಳಿಯುತ್ತಾರೆ.  ಕೂಗಿಕೊಂಡು ಎದುರಿಗೆ ಬಂದರೆ ಕೈಗೊಂಡ ಕೆಲಸ ಕಾರ್ಯಗತವಾಗುವುದಿಲ್ಲ. ಕಾಗೆ ಮನೆಯ ಒಳಗೆ ಬರಬಾರದು. ನೆತ್ತಿಗೆ ಕುಕ್ಕಬಾರದು. ಕಾಗೆಗಳ ಮೈಥುನ ನೋಡಬಾರದು.
ಮನೆಯ ಮೇಲೆ ಕಾಗೆಗಳು ಗುಂಪಾಗಿ ಇದ್ದು ಕೂಗಬಾರದು. ಕಾಗೆಗಳು ಮನುಷ್ಯರ ಶರೀರದ ಮೇಲೆ ಮಲ ವಿಸರ್ಜನೆ ಮಾಡಬಾರದು. ಇದರಿಂದ ಏನಾದರೂ ತೊಂದರೆ ಇದೆ ಎಂದು ತಿಳಿಯಲಾಗುತ್ತದೆ.
ಕಾಗೆ ತಿನಿಸನ್ನು ಬಾಯಿಯಲ್ಲಿ ಕಚ್ಚಿಕೊಂಡು ಎಡಭಾಗದಿಂದ ಬಲ ಭಾಗಕ್ಕೆ ಹೋದರೆ ಕಾರ್ಯ ಸಫಲವಾಗುತ್ತದೆ. ಕಾಗೆ ಇನ್ನೊಂದು ಕಾಗೆಗೆ ತಿನಿಸು ಕೊಡುವುದನ್ನು ನೋಡಿದರೆ ಒಳ್ಳೆಯದು. ಕಾಗೆಗಳು ಕೊಕ್ಕಿನಿಂದ ಅಥವಾ ರೆಕ್ಕೆಯಿಂದ ಮನುಷ್ಯನ ಮೇಲೆ ದಾಳಿ ಮಾಡಿದರೆ ಶತ್ರುಗಳು ಜಾಸ್ತಿಯಾಗುತ್ತಾರೆ.  ಕಾಗೆಗಳು ನೀರಿನಲ್ಲಿ ಸ್ನಾನ ಮಾಡುವುದನ್ನು ಕಂಡರೆ ಮುಂದೆ ಮಳೆ ಬರುವ ಸೂಚನೆ.
= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.