ಉದ್ಯೋಗ ತಾರೆ

ಪ್ರತಿಯೊಬ್ಬ ಜಾತಕನೂ ಒಂದಲ್ಲ ಒಂದು ರಾಶಿ ಮತ್ತು ನಕ್ಷತ್ರದಲ್ಲಿ ಜನಿಸಿರಲೇಬೇಕು ಮತ್ತು ಅವರ ಗುಣ ಸ್ವಭಾವಗಳೂ ರಾಶಿ ಮತ್ತು ನಕ್ಷತ್ರಗಳ ಮೇಲೆ ಅವಲಂಬಿತವಾಗಿ ಜೀವನ ಸಾಗಿಸುತ್ತಿರುತ್ತಾರೆ. ಕೆಲವೊಮ್ಮೆ ಯಾವುದೋ ರಾಶಿಯವರು ಇನ್ನ್ಯಾವುದೋ ಉದ್ಯೋಗ ಮಾಡಿ ಅದರಲ್ಲಿ ಯಶ ಕಾಣದೆ ಕಷ್ಟಪಡುವುದೂ ಉಂಟು. ಅದರಲ್ಲೂ ಮೊದಲ 6 ನಕ್ಷತ್ರವದವರು ಇಂಥದ್ದೇ ಕೆಲಸದಲ್ಲಿ ತೊಡಗಿಸಿಕೊಂಡರೆ ಅದರಲ್ಲಿ ಯಶಸ್ಸು ಸಾಧ್ಯ.
ಅಶ್ವಿನಿ
ಮಿಲಿಟರಿ, ರಕ್ಷಣಾದಳ, ಪೊಲೀಸ್, ಬೇಟೆಗಾರರು, ದೊಡ್ಡ ದೊಡ್ಡ ಕೈಗಾರಿಕೆಗಳು, ರಾಸಾಯನಿಕ ಸಂಸ್ಥೆ, ದಂತ ವೈದ್ಯರು, ಕಬ್ಬಿಣ, ಸ್ಟೀಲ್, ತಾಮ್ರ, ಆಸಿಡ್ ಕಂಪನಿ, ಬೆಂಕಿ, ಶಸ್ತ್ರಗಾರ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವುದು (ವಕೀಲ, ಜಡ್ಜ್) ವಿದೇಶಿ ವಿನಿಮಯ, ಕೃಷಿ ಇಲಾಖೆ, ಭೂಮಿ ಮನೆ, ಸಂಬಂಧಿತ ಉದ್ಯೋಗ ಮಾಡಬಹುದು.
ಭರಣಿ
ಸಿನಿಮಾ, ಸಂಗೀತಾ, ನಾಟ್ಯ, ಕಲೆಗಳ ಅಭಿವೃದ್ಧಿ ಸಂಬಂಧಿತ ಉದ್ಯೋಗ, ಕಲೆ, ಪ್ರಸಿದ್ಧ ವಿಚಾರಗಳು, ಬೆಳ್ಳಿ ಹಾಗೂ ತಾಮ್ರದ ವಸ್ತುಗಳು, ಸಿಲ್ಕ್ ಮತ್ತು ರೆಯಾನ್, ಪ್ಲಾಸ್ಟಿಕ್ ವಸ್ತುಗಳು, ವಾಹನದ ಬಿಡಿಭಾಗಗಳು, ದೊಡ್ಡ ದೊಡ್ಡ ಕೈಗಾರಿಕಾ ಉದ್ಯೋಗ, ರೇಲ್ವೆ ಇಲಾಖೆ ಮುಂತಾದ ಉದ್ಯೋಗ ಮಾಡಬಹುದು.
ಕೃತ್ತಿಕ
ಜಮೀನು ಖರೀದಿಸುವುದು, ಮಾರುವುದು. ಲಾಟರಿ, ಜೂಜುಗಳನ್ನು ನಡೆಸಬಹುದು. ಮಿಲಿಟರಿ, ಪೊಲೀಸ್, ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಬಹುದು. ದೊಡ್ಡ ಕೈಗಾರಿಕೆ, ವೈದ್ಯ ವೃತ್ತಿಯಿಂದ ಬಹಳ ಒಳ್ಳೆಯ ಹೆಸರು ಬರುವುದು. ನಾವಿಕ ಹಾಗೂ ದೊಣಿಗಳ ಉದ್ಯೋಗ ಮಾಡಬಹುದು.
ರೋಹಿಣಿ
ಈ ನಕ್ಷತ್ರದವರು ಸಿನಿಮಾ, ನಾಟಕ, ಸಂಗೀತ, ನಾಟ್ಯ ಮುಂತಾದ ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಕತೆ, ಕಾದಂಬರಿ, ಪುಸ್ತಕ ಮುಂತಾದವುಗಳಲ್ಲಿ ಹೆಚ್ಚಿನ ಒಲವು, ಕಾಂಡಿಮೆಂಟ್ಸ್, ದಿನಸಿ ವ್ಯಾಪಾರ, ವಾಹನ, ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಹಾಲಿನ ಡೈರಿ, ಹೂಗಳು, ಎಣ್ಣೆ ವ್ಯಾಪಾರ, ಮನೆಗಳ ಮತ್ತು ಭೂಮಿ ಮಾರಾಟ, ಸಕ್ಕರೆ, ಬೆಲ್ಲ, ಅಕ್ಕಿ ಸಂಬಂಧಿತ ದಲ್ಲಾಳಿ ವ್ಯಾಪಾರ.
ಮೃಗಶಿರ
ಭೂಮಿ, ಮನೆ ಜಮೀನು ಮಾರಾಟ; ಸಂಗೀತ ಪ್ರದರ್ಶನ ನೀಡುವುದು, ವಸ್ತುಪ್ರದರ್ಶನಗಳ ಆಯೋಜಕರು, ದರ್ಜಿ ಕೆಲಸ, ವಾದ್ಯಗೋಷ್ಠಿ ನಡೆಸುವುದು. ಆಭರಣಗಳ ವ್ಯಾಪಾರ, ಮಿಷನರಿಗಳು, ಕಂಪ್ಯೂಟರ್ ಸೆಂಟರ್‌ಗಳು, ಕಂಪ್ಯೂಟರ್ ರಿಪೇರಿ, ತೆರಿಗೆ ಇಲಾಖೆ, ಚರ್ಮ, ಹೈನುಗಾರಿಕೆ, ಟೀ, ಕಾಫಿ, ತಂಬಾಕು, ನಶ್ಯ ಮಧುರ ಪದಾರ್ಥಗಳ ವ್ಯಾಪಾರ.
ಆರಿದ್ರ
ವೈದ್ಯಶಾಲೆ, ನರ್ಸಿಂಗ್ ಟ್ರೈನಿಂಗ್ ಸೆಂಟರ್, ಡ್ರೈವರ್, ಬಿದಿರಿನ ವ್ಯಾಪಾರ, ಹಣ್ಣು- ಹೂ ತರಕಾರಿಗಳ ವ್ಯಾಪಾರ, ಸಿಹಿ ಪಾನೀಯಗಳ ಅಂಗಡಿ, ಟಿವಿ ರಿಪೇರಿ, ಫೋಟೋಗ್ರಫಿ ಸೌಂದರ್ಯ ಸಾಧನಗಳ ಸಾಮಗ್ರಿಗಳ ಮಳಿಗೆ, ಜಲ ಪ್ರಾಣಿಗಳ ಸಂಗ್ರಹಾಲಯ, ಪಕ್ಷಿಧಾಮ, ಪ್ರಾಣಿಗಳ ಸಂಗ್ರಹಾಲಯ, ಹೆಂಡದ ತಯಾರಿಕೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂತಾದ ಉದ್ಯೋಗಗಳು ಹೆಚ್ಚಿನ ಲಾಭ ತರುವುದು.
(ಮುಂದುವರಿಯುವುದು)
= ಅಂಜನ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


