ಭಕ್ತಿ-ಜ್ಯೋತಿಷ್ಯ

ಮಿಶ್ರ ಸಂಕ್ರಮಣ

ಈ ವರ್ಷ 14.1.2014ನೇ ಮಂಗಳವಾರ ಮಧ್ಯಾಹ್ನ 1-02ಕ್ಕೆ ರವಿ ಮಕರ ರಾಶಿಯನ್ನು ಪ್ರವೇಶಿಸಿದ. ಈ ಕಾಲದಲ್ಲಿ ಗರಜಕರಣ ಇರುವುದು. ನಕ್ಷತ್ರ ...

ಮಿಶ್ರ ಸಂಕ್ರಮಣ
Published On :

ಈ ವರ್ಷ 14.1.2014ನೇ ಮಂಗಳವಾರ ಮಧ್ಯಾಹ್ನ 1-02ಕ್ಕೆ ರವಿ ಮಕರ ರಾಶಿಯನ್ನು ಪ್ರವೇಶಿಸಿದ. ಈ ಕಾಲದಲ್ಲಿ ಗರಜಕರಣ ಇರುವುದು. ನಕ್ಷತ್ರ ಆರಿದ್ರ. ಇಂದ್ರಯೋಗ ಗಜಕರಣ.
ಮಹೋದರಿ ಎಂಬ ಹೆಸರಿನ ಪಶುಜಾತಿಯ ಪ್ರೌಢವಯಸ್ಸಿನ ಸಂಕ್ರಾಂತಿ ರಕ್ತವರ್ಣದ ವಸ್ತ್ರವನ್ನು ಧರಿಸಿ, ಬಿಳಿವರ್ಣದ ರವಿಕೆ ತೊಟ್ಟು, ಬಿಲ್ವ ಪುಷ್ಪವನ್ನು ಮುಡಿಗೆ ಸೇರಿಸಿ, ಗೋಮದ ಖಚಿತ ಮುಕುಟದಿಂದ ಅಲಂಕರಿಸಿ, ಲೋಹದ ಪಾತ್ರೆಯಲ್ಲಿ ಹಾಲು ಕುಡಿಯುತ್ತಾ, ಕೋದಂಡವನ್ನು ಧರಿಸಿ, ಆನೆಯ ಮೇಲೇರಿ, ಕತ್ತೆಯನ್ನು ಉಪವಾಹನವನ್ನಾಗಿಸಿಕೊಂಡು, ದಕ್ಷಿಣಕ್ಕೆ ಮುಖಮಾಡಿ, ವಾಯುವ್ಯ ದಿಕ್ಕನ್ನು ನೋಡುತ್ತಾ, ಪಶ್ಚಿಮದಿಕ್ಕಿಗೆ ಪ್ರಯಾಣಿಸುವುದು.
ದಕ್ಷಿಣಕ್ಕೆ ಮುಖ ಮಾಡಿರುವುದರಿಂದ ಕಳ್ಳತನ ಮಾಡುವವರಿಗೆ, ದರೋಡೆಕೋರರಿಗೆ ಶುಭಫಲ. ಹಾಗಾಗಿ ದಕ್ಷಿಣ ದಿಕ್ಕು ಮುಖ್ಯಬಾಗಿಲು ಇರುವವರಿಗೆ ಅರಿಷ್ಟ ಉಂಟಾಗಲಿದೆ.
ವಾಯುವ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಪ್ರಕೃತಿ ವಿಶೇಷ ರೀತಿ ಎಂದರೆ ಭೂಕಂಪ, ಚಂಡಮಾರುತಗಳು ಉಂಟಾಗುವ ಸಾಧ್ಯತೆ ಇದೆ.
ನಾನಾ ವಿಧಗಳ ಲೋಹ ಮತ್ತು ಹಾಲಿನ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಚತುಷ್ಪಾದ ಪ್ರಾಣಿಗಳಿಗೆ ಚಿತ್ರವಿಚಿತ್ರ ರೋಗಗಳು ಉಂಟಾಗುವ ಸಾಧ್ಯತೆ ಇದೆ. ಕತ್ತೆ ಉಪವಾಹನ ಆಗಲಿದೆ. ಜನರ ಮೇಲೆ ತೆರೆಗೆ ಭೀತಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಚಂದ್ರ ಮಿಥುನ ರಾಶಿಯಲ್ಲಿದ್ದು, ಸಂಕ್ರಾತಿ ಪುರುಷನ ಹಸ್ತದಲ್ಲಿ ಶ್ವೇತ ಫಲ ಇರುವುದರಿಂದ ಭಾರತಕ್ಕೆ ಶುಭ ಉಂಟಾಗಲಿದೆ. ರಾಜಕೀಯ ಬದಲಾವಣೆ ಫಲದಂತೆ ಜನರಿಗೆ ಕೆಲವು ರೀತಿಗಳಲ್ಲಿ ಲಾಭ ಆಗಲಿದೆ.


-  ರತ್ನರಾಜ್ ಜೈನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.