ಎಲ್ಲರೂ ಒಂದೇ
ಭೌತಿಕವಾಗಿ ಏನೂ ಇಲ್ಲದ ಶೂನ್ಯಮಯ ಕಾಲವೊಂದಿತ್ತು ಎನ್ನುವುದನ್ನು ಊಹಿಸಿಕೊಳ್ಳಬಲ್ಲಿರಾ? ಕಣ್ಣು ಮುಚ್ಚಿ ಕುಳಿತುಕೊಳ್ಳಿ ಮತ್ತು ಇಂತಹ ಜಗತ್ತನ್ನು ..
ಭೌತಿಕವಾಗಿ ಏನೂ ಇಲ್ಲದ ಶೂನ್ಯಮಯ ಕಾಲವೊಂದಿತ್ತು ಎನ್ನುವುದನ್ನು ಊಹಿಸಿಕೊಳ್ಳಬಲ್ಲಿರಾ? ಕಣ್ಣು ಮುಚ್ಚಿ ಕುಳಿತುಕೊಳ್ಳಿ ಮತ್ತು ಇಂತಹ ಜಗತ್ತನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಭೌತಿಕವಾಗಿ ಏನೂ ಇಲ್ಲದಿದ್ದರೂ, ಆ ಶೂನ್ಯದ ನಡುವೆಯೇ ನಿಮ್ಮ ಅಸ್ತಿತ್ವ ಇರುತ್ತದೆ, ಬಿಂದುವಿನ ರೂಪದಲ್ಲಿ. ಅದರ ಅರ್ಥ ಏನು? ಕೇವಲ ನೀವೊಬ್ಬರೇ ಇದ್ದೀರಿ ಎಂದುಕೊಂಡರೆ ಉಳಿದವರ ಕಥೆ ಏನು? ಈ ಸೃಷ್ಟಿಯಲ್ಲಿ ಕೋಟ್ಯಂತರ ಮನುಷ್ಯರಿಲ್ಲವೆ? ಅಂದರೆ ಒಂದು ಹಂತದಲ್ಲಿ ನಾವೆಲ್ಲರೂ ಒಂದು ಎನ್ನುವುದರ ಸಂಕೇತ ಇದು. ಮೂಲದಲ್ಲಿ ನಾವೆಲ್ಲರೂ ಒಂದೇ ಆಗಿದ್ದರೂ ನಮ್ಮಲ್ಲಿನ ಪರಿಶುದ್ಧತೆ, ಅಶುದ್ಧತೆಗೆ ಅನುಗುಣವಾಗಿ ನಾವು ಹೀಗೆ ಬೇರೆಬೇರೆಯಾಗಿ ಪ್ರಕಟಗೊಂಡಿದ್ದೇವೆ. ಭೌತಿಕ ಜಗತ್ತು ಎಲ್ಲ ಕ್ರಿಯೆಗಳ ಮೂಲ ಕಾರಣ. ಕ್ರಿಯೆಗಳಿಂದಾಗಿಯೇ ಎಲ್ಲ ಮಾನವರು, ದೇವತೆಗಳು ಮತ್ತು ರಾಕ್ಷಸರು ಅಸ್ತಿತ್ವಕ್ಕೆ ಬಂದದ್ದು.
ಬ್ರಹ್ಮ, ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ತನ್ನ ಇಚ್ಛಾಶಕ್ತಿಯಿಂದಲೇ. ಆತ 'ಓಂ' ಎನ್ನುವ ಮಂತ್ರಾಕ್ಷರವನ್ನು ಪ್ರಯೋಗಿಸಿದ. ನಮ್ಮ ಋಷಿಗಳು ಪರ್ವತಗಳ ಮೇಲೆ ಕುಳಿತು ತಮ್ಮ ಹಿಂದಿನ ಸ್ಥಿತಿಗೆ ಅಂದರೆ ಪರಿಶುದ್ಧ ಪ್ರಜ್ಞೆಯ ಸ್ಥಿತಿಗೆ ಹೋಗುತ್ತಿದ್ದರು. ಅವರೆಲ್ಲ ತಮ್ಮ ಭೌತಿಕ ಜಗತ್ತಿನ ಸಂಪರ್ಕಕ್ಕೆ ಬರುವುದಕ್ಕೆ ಮುಂಚೆ ಇದ್ದ ಮೂಲಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರು. ಪರಿಶುದ್ಧತೆಯ ಕಾರಣದಿಂದಾಗಿ ಮಾಯೆಯ ಪ್ರಭಾವಳಿಯನ್ನು ದಾಟಿದರೂ ಅವರು ಪ್ರಜ್ಞೆ ಜಾಗೃತವಾಗಿರುತ್ತಿತ್ತು ಮತ್ತು ಇಚ್ಛಾಶಕ್ತಿಯಿಂದಲೇ ಏನನ್ನೂ ಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿದ್ದರು. ಪ್ರಜ್ಞೆ ಜಾಗೃತವಾದಾಗ ಋಷಿಗಳು ನಕಾರಾತ್ಮಾಕ ಮತ್ತು ಸಕಾರಾತ್ಮಕ ಶಕ್ತಿಗಳ ನಡುವೆ ಸಮತೋಲನ ಸಾಧಿಸುವ ಹಾದಿಯನ್ನು ಕಂಡುಕೊಂಡರು.
ನಾವು ಭೌತಿಕ ಜಗತ್ತಿನ ಟೊಳ್ಳನ್ನು ಅರ್ಥ ಮಾಡಿಕೊಂಡು, ಅದನ್ನು ಮೀರಿ ಮೇಲಕ್ಕೆ ಹೋಗಲು ಪ್ರಯತ್ನಿಸಬೇಕು. ಆಗ ನಮ್ಮ ಪ್ರಜ್ಞೆಯೂ ಜಾಗೃತವಾಗುತ್ತದೆ. ಮಾನವರಾಗಿದ್ದರೂ ಅಧ್ಯಾತ್ಮಿಕವಾಗಿ ಎತ್ತರೆತ್ತರಕ್ಕೆ ಏರಲು ಪ್ರಯತ್ನಿಸಿದಾಗ ಎಲ್ಲವನ್ನೂ ನಮ್ಮ ಇಚ್ಛಾಶಕ್ತಿಯಿಂದಲೇ ಸಾಧಿಸಬಹುದು ಎನ್ನುವ ಸತ್ಯ ಅರ್ಥವಾಗುತ್ತದೆ.
-ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

