ಭಕ್ತಿ-ಜ್ಯೋತಿಷ್ಯ

ಯೋಗ ಕ್ಷೇಮ

ಎಲ್ಲಾ ಮಹಾನ್ ಪ್ರೇಮಕತೆಗಳೂ ಏಕೆ ದುಖಾಂತ್ಯವನ್ನೇ ಕಾಣುತ್ತವೆ ಅಂತ ಎಂದಾದರೂ ಯೋಚಿಸಿದ್ದೀರಾ? ಒಮ್ಮೆ ನಿಮ್ಮ ಸುತ್ತ ನೋಡಿ.....

ಯೋಗ ಕ್ಷೇಮ
Published On :

ಎಲ್ಲಾ ಮಹಾನ್ ಪ್ರೇಮಕತೆಗಳೂ ಏಕೆ ದುಖಾಂತ್ಯವನ್ನೇ ಕಾಣುತ್ತವೆ ಅಂತ ಎಂದಾದರೂ ಯೋಚಿಸಿದ್ದೀರಾ? ಒಮ್ಮೆ ನಿಮ್ಮ ಸುತ್ತ ನೋಡಿ... ನಾನು ಯಾರನ್ನೋ ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವವರನ್ನು ಒಮ್ಮೆ ಗಮನಿಸಿ ಅಥವಾ ಹಿಂದೆ ಆಗಿಹೋಗಿರುವ ಮಹಾನ್ ಪ್ರೇಮಕಥೆಗಳನ್ನೇ ಒಮ್ಮೆ ಓದಿಕೊಳ್ಳಿ. ಅಷ್ಟೆಲ್ಲಾ ಬೇಡ, ನಿಮ್ಮನ್ನೇ ನೀವೊಮ್ಮೆ ನೋಡಿಕೊಳ್ಳಿ. ಈ ಎಲ್ಲದರಲ್ಲೂ ಪ್ರೀತಿ ಎಂಬ ವಸ್ತು ಪ್ರೀತಿಸುವವನ ಬೇಕುಬೇಡಗಳ ಸುತ್ತವೇ ಯೋಚಿಸುತ್ತಿರುತ್ತದೆಯೇ ವಿನಾ ಆ ಪ್ರೀತಿಯ ಭಾಗವಾಗಿರೋ ಇನ್ನೊಬ್ಬ ವ್ಯಕ್ತಿಯ ಬಗೆಗೆ, ಅವರ ಇಷ್ಟ ಅನಿಷ್ಟಗಳ ಬಗೆಗೆ ಯೋಚಿಸುವುದೇ ಇಲ್ಲ. ಪ್ರೀತಿಸುವ ವ್ಯಕ್ತಿಗೆ ತನ್ನ ಪ್ರೀತಿ ಮತ್ತು ಭಾವನೆಗಳೇ ಅತಿ ಮುಖ್ಯವಾಗಿಬಿಟ್ಟಿರುತ್ತದೆ. ಆತ ಎಲ್ಲವೂ ತನ್ನ ಷರತ್ತು ನಿಬಂಧನೆಗಳ ಅನುಸಾರವೇ ನಡೆಯಬೇಕೆಂದು ಇಚ್ಛಿಸುತ್ತಾನೆ ಹಾಗೂ ಅದೇ ಸರಿ ಎಂದು ನಿರ್ಧರಿಸಿಬಿಡುತ್ತಾನೆ. ಅಲ್ಲಿ ಇನ್ನೊಬ್ಬರ ಒಪ್ಪಿಗೆ, ಆಕ್ಷೇಪಣೆಗಳಿಗೆ ಬೆಲೆಯೇ ಇರುವುದಿಲ್ಲ.
ಪ್ರೀತಿ ಅನ್ನೋದು ಒಂದು ಮಹಾನ್ ಮಾಯಾವಿ ಪದ. ಜಗತ್ತಿನಾದ್ಯಂತ ಪ್ರೀತಿಯ ಬಗ್ಗೆ ಕೋಟಿಗಟ್ಟಲೆ ಪುಟಗಳಷ್ಟು ಬರೆದು ಗುಡ್ಡೆ ಹಾಕಿಯಾಗಿದೆ. ಅಂಥಾ ಒಂದು ಪುಸ್ತಕದಲ್ಲಿ ಹೀಗೊಂದು ಹೇಳಿಕೆ ಇದೆ. 'ನೀವು ಯಾರನ್ನಾದರೂ, ಏನನ್ನಾದರೂ ಪ್ರೀತಿಸುತ್ತಿದ್ದರೆ... ಆ ಪ್ರೀತಿಯನ್ನು  ಸ್ವತಂತ್ರವಾಗಿರಲು ಬಿಟ್ಟುಬಿಡಿ. ಅದು ನಿಮ್ಮದೇ ಆಗಿದ್ದರೆ ಖಂಡಿತ ನಿಮ್ಮಲ್ಲಿಗೇ ಹಿಂದಿರುಗಿ ಬರುತ್ತದೆ. ಅದು ಹಿಂದಿರುಗಿ ಬರಲಿಲ್ಲ ಅಂತಾದಲ್ಲಿ, ಅದೆಂದಿಗೂ ನಿಮ್ಮ ಪ್ರೀತಿ ಆಗಿರಲೇ ಇಲ್ಲ ಎಂದರ್ಥ'.
ಪ್ರೀತಿಯ ಬಗೆಗಿನ ಈ ವ್ಯಾಖ್ಯಾನ ಪ್ರಪಂಚದಾದ್ಯಂತ ಎಲ್ಲ ಧರ್ಮ, ರಾಷ್ಟ್ರೀಯತೆ, ಪಂಗಡಗಳೂ ಒಪ್ಪುವಂಥ ಸಾರ್ವಕಾಲಿಕ ಸತ್ಯ. ಪ್ರೀತಿಯಲ್ಲಿ ಸಮಸ್ಯೆ ಶುರುವಾಗುವುದಕ್ಕೆ ಮುಖ್ಯ ಕಾರಣವೊಂದಿದೆ. ಪ್ರೀತಿ ಮತ್ತು ಕಾಮ ಅರ್ಥಾತ್ ದೈಹಿಕ ವಾಂಛೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವುದು. ಒಮ್ಮೆ ಪ್ರೀತಿ ಎಂಬ ಭಾವಕ್ಕೆ ಕಾಮದ ಹೊದಿಕೆ ಬಿತ್ತೆಂದರೆ, ಪ್ರೀತಿ ಎಂಬುದು ವ್ಯಾಮೋಹವಾಗಿ ಬದಲಾಗುತ್ತದೆ. ಇಂಗ್ಲೀಷಿನಲ್ಲಿ ಅದನ್ನು ಪೊಸೆಸಿವ್‌ನೆಸ್ ಅನ್ನಬಹುದು. ಅಷ್ಟೇ ಅಲ್ಲ, ಪ್ರೀತಿಯನ್ನು  ಕಳೆದುಕೊಳ್ಳುವ ಭಯ ಶುರುವಾಗುತ್ತದೆ. ಒಮ್ಮೆ ಈ ಅಭದ್ರತೆ ಕಾಡಲು ಶುರುವಾದರೆ ಎರಡಕ್ಷರದ ಪ್ರೀತಿ ತನ್ನ ಮೋಡಿ ಕಳೆದುಕೊಳ್ಳುತ್ತದೆ. ಅದರಲ್ಲಿನ ದೈವತ್ವವೂ ಮರೆಯಾಗಿ ಹೋಗುತ್ತದೆ.
ಮನುಷ್ಯನ ಎದೆಯ ನಡುಭಾಗದಲ್ಲಿ ಪ್ರೀತಿಯ ಭಾವಗಳನ್ನು ನಿಯಂತ್ರಿಸುವ ಅನಾಹತ ಚಕ್ರವಿರುತ್ತದೆ. ಈ ಅನಾಹತ ಚಕ್ರದೊಂದಿಗೆ ಸಂಪರ್ಕ ಸಾಧಿಸುವುದು ಸಾಮಾನ್ಯ ಮಾತಲ್ಲ. ಪೂರ್ವಜನ್ಮದ ಕರ್ಮಾನುಸಾರ ಹಾಗೂ ಸನಾತನ ಕ್ರಿಯೆಗಳ ಮೂಲಕ ಮಾತ್ರ ಅದು ಸಾಧ್ಯ. ಇಂಥ ಪ್ರೀತಿಗೆ ಒಂದು ಅತ್ಯುತ್ತಮ ಉದಾಹರಣೆ  ತಾಯಿ ಮತ್ತು ಮಗುವಿನ ನಡುವಣ ಹುಟ್ಟುವ ಷರತ್ತುರಹಿತ ಪ್ರೀತಿ. ಆದರೆ ಯೌವ್ವನಾವಸ್ಥೆಯ ನಂತರ ಹುಟ್ಟುವ ಪ್ರೀತಿ ಮತ್ತು ಸಂಬಂಧಗಳು ಕೇವಲ ನೀಚಚಕ್ರಗಳೊಂದಿಗೆ ಮಾತ್ರ ಸಂಪರ್ಕ ಸಾಧಿಸಲು ಶಕ್ತವಾಗಿರುತ್ತವೆ. ಲೌಕಿಕ ಸುಖದ ಹಂಬಲದ ಮೂಲಾಧಾರ, ಲೈಂಗಿಕ ಸಂತೋಷ ಬಯಸುವ ಸ್ವಾದಿಸ್ಠಾನ, ಹಾಗೂ ಅಧಿಕಾರ-ಸ್ಥಾನಮಾನ ಬಯಸುವ ಮಣಿಪೂರಕ ಚಕ್ರಗಳನ್ನು ಮಾತ್ರ ಈ ಪ್ರೀತಿ ತಲುಪುತ್ತದೆ.

-Yogi Ashwini.dhyan@dhyanfoundation.com ಮೊಬೈಲ್: 7406175228



- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.