ಕಲರ್‌ಸ್ಟ್ರಾಲಜಿ!
ಹೆಸರೇ ವಿಚಿತ್ರ ಅನ್ನಿಸಬಹುದು. ಜ್ಯೋತಿಷ್ಯ ಮತ್ತು ವರ್ಣ ವಿಜ್ಞಾನ ಎರಡನ್ನೂ ಒಳಗೊಂಡ...

ಹೆಸರೇ ವಿಚಿತ್ರ ಅನ್ನಿಸಬಹುದು. ಜ್ಯೋತಿಷ್ಯ ಮತ್ತು ವರ್ಣ ವಿಜ್ಞಾನ ಎರಡನ್ನೂ ಒಳಗೊಂಡ ಅದ್ಭುತ ಲೋಕವಿದು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು. ಆದರೆ ಬಣ್ಣಗಳು ಮಾನವನ ಮನಸ್ಸಿನ ಮೇಲೆ ಬೀರುವ ಪರಿಣಾಮ ಊಹಾತೀತ. ಬಣ್ಣಗಳಿಂದ ಬದುಕು ಬದಲಿಸಿಕೊಳ್ಳಲೂ ಸಾಧ್ಯವಿದೆ ಎನ್ನುವುದು ಇನ್ನಷ್ಟು ಅಚ್ಚರಿ ಮೂಡಿಸಬಹುದು.
ಕಲರ್‌ಸ್ಟ್ರಾಲಜಿಯಲ್ಲಿ 366 ಬಣ್ಣಗಳಿವೆ. ಅಂದರೆ ಒಂದೊಂದು ದಿನಕ್ಕೆ ಒಂದೊಂದು ಬಣ್ಣ. ಅದೇ ರೀತಿ ಪ್ರತಿ ತಿಂಗಳಿಗೂ ನಿರ್ದಿಷ್ಟ ಬಣ್ಣ. ನಿಮ್ಮ ಜನ್ಮದಿನ, ಜನಿಸಿದ ತಿಂಗಳಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣಬಲ್ಲಿರಿ.
ಅಸಾಧ್ಯವಾದುದನ್ನೂ ಸಾಧಿಸಬಲ್ಲಿರಿ. ಎಂತಹ ಕಷ್ಟಗಳನ್ನೂ ಸುರಳೀತವಾಗಿ ನಿಭಾಯಿಸಬಲ್ಲಿರಿ. ದೂರ ಹೋಗಿದ್ದ ನೆಮ್ಮದಿಯನ್ನು ಮತ್ತೆಮತ್ತೆ ಗಳಿಸಿಕೊಳ್ಳಬಲ್ಲಿರಿ. ಅಷ್ಟೇ ಏಕೆ, ನಿಮಗೆ ಹೊಂದಿಕೊಳ್ಳುವ ಸಂಗಾತಿ ಆಯ್ಕೆ ಮಾಡಿಕೊಳ್ಳಬಲ್ಲಿರಿ! ಇದೆಲ್ಲವೂ ಕಲರ್‌ಸ್ಟ್ರಾಲಜಿಯಿಂದ ಸಾಧ್ಯ.
ನಿಮ್ಮ ಜನ್ಮದಿನದ ಬಣ್ಣ ಈಗ ನಿಮ್ಮ ನೆಚ್ಚಿನ ಬಣ್ಣವಾಗದೇ ಇರಬಹುದು. ಆದರೆ ಈ ಬಣ್ಣವನ್ನು ನಿಮ್ಮದಾಗಿಸಿಕೊಳ್ಳುವುದು ಕಷ್ಟದ ಸಂಗತಿ ಅಲ್ಲವೇ ಅಲ್ಲ. ನೀವು ವಾಸಿಸುವ, ಕೆಲಸ ಮಾಡುವ ಪರಿಸರದಲ್ಲಿ ಎಲ್ಲಿಯಾದರೂ ಈ ಬಣ್ಣದ ಛಾಯೆ ಇದ್ದರೆ ಸಾಕು.
ಗೋಡೆಗಳಿಗೆ ಇದೇ ಬಣ್ಣ ಬಳಿಯುವ ಮೂಲಕ, ಬೆಡ್‌ಶೀಟ್, ಟವೆಲ್, ಬಟ್ಟೆ, ಕರ್ಚೀಫ್, ಸ್ಕಾರ್ಫ್ ಇತ್ಯಾದಿಗಳಲ್ಲಿ ಈ ಬಣ್ಣ ಹೊಂದುವ ಮೂಲಕ ಅಥವಾ ಈ ಬಣ್ಣವಿರುವ ಪೇಟಿಂಗ್, ಪೀಠೋಪಕರಣ ಹೊಂದುವ ಮೂಲಕ ಬದಲಾವಣೆಗೆ ನಿಮ್ಮನ್ನು ನೀವು ತೆರೆದುಕೊಳ್ಳಬಹುದು. ಇನ್ನು ನೀವುಂಟು ನಿಮ್ಮ ಬಣ್ಣವುಂಟು.
- ಯಶವಂತ ಸರದೇಶಪಾಂಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


