ಭಕ್ತಿ-ಜ್ಯೋತಿಷ್ಯ

ಭಯವೇ ಮುಪ್ಪಿನ ಮೂಲ

ನಿಮ್ಮ ವಯಸ್ಸು ಮತ್ತು ಆಯಸ್ಸು ನಿಮ್ಮ ಯೋಚನೆಯನ್ನು ಅವಲಂಬಿಸಿದೆ. 'ಪಾಸಿಟಿವ್ ಆಗಿ ಯೋಚಿಸು'ಎಂಬ ಉಪದೇಶ ...

Published On :

ನಿಮ್ಮ ವಯಸ್ಸು ಮತ್ತು ಆಯಸ್ಸು ನಿಮ್ಮ ಯೋಚನೆಯನ್ನು ಅವಲಂಬಿಸಿದೆ. 'ಪಾಸಿಟಿವ್ ಆಗಿ ಯೋಚಿಸು'ಎಂಬ ಉಪದೇಶ ನಮ್ಮಲ್ಲಿ ಸರ್ವೇಸಾಮಾನ್ಯ. ಘೋರಖಾಯಿಲೆ, ಕಡುದುಃಖದ ಸಂದರ್ಭ, ಇನ್ಯಾವುದೋ ಸಂಕಷ್ಟ ಇಂಥ ಹೊತ್ತಲ್ಲಿ ಮನಸ್ಸು ಅತಿಯಾಗಿ ಚಿಂತಿಸತೊಡಗುತ್ತದೆ. ಅದರಿಂದಾಗಿ ನೆಗೆಟಿವ್ ಆಲೋಚನೆಗಳೆಡೆಗೆ ಮನಸು ಹರಿಯುತ್ತದೆ. ಇದಕ್ಕೆ ಮೂಲ ಕಾರಣವೇ ಭಯ. ಭಯದಿಂದಾಗಿ ಯೋಚನೆಗಳು ಒಂದಾದ ಮೇಲೊಂದು ಹುಟ್ಟಿ ಒಂದಕ್ಕೊಂದು ಕೊಂಡಿಯಾಗಿ ಮೆದುಳಿನಲ್ಲಿ ನೆಗೆಟಿವ್ ಆಲೋಚನೆಗಳ ಸರಮಾಲೆ ಸೃಷ್ಟಿಯಾಗುತ್ತದೆ. ಇದು ಈ ಸೃಷ್ಟಿ ನಮಗೆ ಕೊಟ್ಟಿರುವ ಸಾಮರ್ಥ್ಯವನ್ನೇ ಮರೆಯುವಂತೆ ಮಾಡುತ್ತದೆ. ನಮ್ಮ ಅರಿವಿನ ಮಟ್ಟಕ್ಕೆ ತಕ್ಕಂತೆ ನಮ್ಮ ಯೋಚನಾ ದಿಕ್ಕು ಕೂಡ ನಿರ್ಧಾರವಾಗುತ್ತದೆ. ಇಷ್ಟಕ್ಕೂ ಯೋಚನೆಗಳು ನಮ್ಮ ಮೆದುಳಿನಲ್ಲಿ ಜನ್ಮತಾಳುವುದಿಲ್ಲ. ಅದನ್ನು ನಾವು ನಮ್ಮ ಸುತ್ತಲಿನ ಚಕ್ರಗಳಿಂದ ಸೆಳೆದು ಹಿಡಿದುಕೊಳ್ಳುತ್ತೇವೆ.  ಯೋಚನೆಗಳೇ ಬರದಂತೆ ತಡೆಯೋದು ಅಥವಾ ಅವುಗಳನ್ನು ಹತೋಟಿಯಲ್ಲಿ ಇಡೋದು ಒಬ್ಬ ಸಾಮಾನ್ಯ ಮನುಷ್ಯನಿಂದ ಅಸಾಧ್ಯ. ಯೋಗಾಭ್ಯಾಸಿಗೆ ಮಾತ್ರ ಅದು ಸಾಧ್ಯ. ಸನಾತನ ಕ್ರಿಯೆಯ ಉನ್ನತ ಅಭ್ಯಾಸದಿಂದ ಭಯದಿಂದ ಮುಕ್ತರಾಗುವ, ಯೋಚನೆಗಳಿಗೆ ಕಡಿವಾಣ ಹಾಕುವ, ಅವುಗಳನ್ನು ನಿಮ್ಮ ಆದೇಶದಂತೆ ನಡೆಯುವ ತಂತ್ರಗಳನ್ನು ಕರಗತ ಮಾಡಿಕೊಳ್ಳಬಹುದು. ಪ್ರಾಚೀನ ಹಾಗೂ ಪುರಾಣ ಕಾಲದ ಋಷಿ ಮುನಿಗಳು ವರ-ಶಾಪ ನೀಡುವ ಶಕ್ತಿ ಪಡೆಯುತ್ತಿದ್ದುದು ಈ ವಿದ್ಯೆಯಿಂದಲೇ. ಮನಸಿನಿಂದ ಭಯಭಾವ ಹೊರಹಾಕದ ಹೊರತು ಪಾಸಿಟಿವ್ ಥಿಂಕಿಂಗ್ ಅಸಾಧ್ಯ. ಸುಮ್ಮನೆ ಪಾಸಿಟಿವ್ ಆಗಿ ಥಿಂಕ್ ಮಾಡ್ಬೇಕು ಎಂದು ನಿರ್ಧರಿಸೋದ್ರಿಂದ ಅದು ಸಾಧ್ಯವಿಲ್ಲ. ಯಾಕಂದ್ರೆ ನಮ್ಮ ಸುಪ್ತ ಮನಸಿನಲ್ಲಿ ಭಯಗಳು ಹಾಗೆಯೇ ಉಳಿದುಕೊಂಡಿರುತ್ತವೆ. ಅದನ್ನು ಮಟ್ಟಹಾಕಲು ಯೋಗವೊಂದೇ ಸಾಧನ. ಇದನ್ನು ಸನಾತನ ಕ್ರಿಯೆ- ದಿ ಏಜ್‌ಲೆಸ್ ಡೈಮೆನ್ಷನ್ ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ. ನೆನಪಿಡಿ. ನೀವು ನೆಗಟಿವ್ ಯೋಚನೆಗಳ ಭಾರ ಹೊತ್ತುಕೊಂಡಷ್ಟೂ  ನಿಮ್ಮನ್ನು ಮುಪ್ಪು ವೇಗವಾಗಿ ಸೆಳೆದುಕೊಳ್ಳುತ್ತದೆ.


- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.