ಮದ್ವೆ ಯಾವಾಗ ಗುರು?
ವಿವಾಹ ಮಾನವ ಜೀವನದ ಆಶ್ರಮ ಧರ್ಮಗಳಲ್ಲಿ ಒಂದಾಗಿದ್ದು, ವೈವಾಹಿಕ ಸಂಬಂಧದಿಂದ ಪಿತೃ, ದೇವ ಮತ್ತು ಋಷಿ ಋಣ...

ವಿವಾಹ ಮಾನವ ಜೀವನದ ಆಶ್ರಮ ಧರ್ಮಗಳಲ್ಲಿ ಒಂದಾಗಿದ್ದು, ವೈವಾಹಿಕ ಸಂಬಂಧದಿಂದ ಪಿತೃ, ದೇವ ಮತ್ತು ಋಷಿ ಋಣ ತೀರಿಸಲು ಸಾಧ್ಯವಿದೆ.
ವಿವಾಹ ಯೋಗ ಕೂಡಿಬರಲು ಗುರು ಅನುಗ್ರಹ ಅತಿಮುಖ್ಯ. ಅದನ್ನೇ ಗುರುಬಲ ಎನ್ನುವುದು. ಗೋಚಾರದಲ್ಲಿ ಜನ್ಮರಾಶಿಯಿಂದ ಗುರು ಇರುವ ರಾಶಿವರೆಗೂ ಎಣಿಸಿದಾಗ ಗುರು 2-5-7-9-11ನೇ ಸ್ಥಾನದಲ್ಲಿದ್ದರೆ ಗುರುಬಲ ವೆನ್ನುವರು. ಅಥವಾ ಗುರುವು ಸ್ವಕ್ಷೇತ್ರ, ಮಿತ್ರ ಕ್ಷೇತ್ರ ಅಥವಾ ಉಚ್ಚ ಕ್ಷೇತ್ರದಲ್ಲಿದ್ದಾಗ ಗುರುವು 2-5-7-9-11ರಲ್ಲಿ ಇಲ್ಲದಿದ್ದರೂ ಗುರುಬಲವೆಂದು ತಿಳಿಯಬೇಕು. ಇಷ್ಟೇ ಅಲ್ಲದೆ, ವಿವಾಹ ಚಿಂತನೆ ಮಾಡುವಾಗ ವಿವಾಹ ಭಾವಗಳಾದ - 2-7-11ನೇ ಭಾವ ಅತಿ ಮುಖ್ಯ.
ಅಂದರೆ 2ನೇ ಭಾವ ಕುಟುಂಬ ಸೌಖ್ಯ- 7ನೇ ಭಾವ ಸತಿ ಅಥವಾ ಪತ್ನಿ ಗುಣ ಸ್ವಭಾವ ಅವರಿಂದ ಉಂಟಾಗುವ ಸುಖ ಅಥವಾ ದುಃಖ. 11ನೇ ಭಾವ ವೈವಾಹಿಕ ಸುಖದ ಪ್ರಮಾಣ ನಿರ್ಧರಿಸುತ್ತದೆ. ಇಷ್ಟೇ ಅಲ್ಲದ ಲಗ್ನ- ಸುಖಸ್ಥಾನ- ಮಾಂಗಲ್ಯ ಸ್ಥಾನ ಮತ್ತು ಶಯನ ಸುಖ ಸ್ಥಾನವಾದ 12ನೇ ಭಾವಗಳನ್ನು ಲಗ್ನ, ಚಂದ್ರ, ಕಳಪ್ರಕಾರಕ ಶುಕ್ರನಿಂದಲೂ ನಿರ್ಧರಿಸಬೇಕು.
ಈ ಭಾವಗಳು ಪ್ರಬಲವಾಗಿದ್ದರೆ ವಿವಾಹ ಜೀವನ ಉತ್ತಮ. ಗ್ರಹವಾದರೆ ರವಿ, ರಾಹು ಶನಿಗ್ರಹಗಳು ವಿವಾಹಕ್ಕೆ ಅಶುಭವಾಗಿರುತ್ತದೆ. ಕುಜ, ಬುಧ, ಕೇತು ಗ್ರಹಗಳು ಶುಭ/ ಅಶುಭಗಳ ಸಂಬಂಧದಂತೆ ವರ್ತಿಸಿದರೆ ಕುಜ ಬುಧರು ಜೋಕರ್‌ನಂತೆ ಇರುತ್ತವೆ.
ವಿವಾಹ ಯೋಗವು (1) ಜಾತಕದಲ್ಲಿನ 2-7-11ನೇ ಮನೆಯ ಅಧಿಪತಿಯ ದಶಾಬುಕ್ತಿ ಕಾಲ (2) 2-7-11ನೇ ಮನೆಯನ್ನು ನೋಡುತ್ತಿರುವ ಗ್ರಹದ ರಾಶ್ಯಾಧಿಪತಿಯ ದಶಾಕಾಲದಲ್ಲಿ ಅಥವಾ 2-7-11ನೇ ಮನೆಗೆ ಸಂಬಂಧವಿರುವ ಗ್ರಹಗಳ ದಶಾಬುಕ್ತಿಯಲ್ಲಿ ವಿವಾಹ ಯೋಗ ಕೂಡಿಬರುತ್ತದೆ. (3) ವಿವಾಹ ಸೂಚಕ ಗ್ರಹಗಳಾದ ಶುಕ್ಲಪಕ್ಷ ಚಂದ್ರ- ಗುರು- ಶುಕ್ರರು ಬಲಿಷ್ಠರಾಗಿದ್ದರೆ ಅವರ ದಶಾಬುಕ್ತಿಯಲ್ಲಿ ಶೀಘ್ರವಾಗಿ ಜಾತಕರಿಗೆ ವಿವಾಹವಾಗುತ್ತದೆ. (4) ಭಾಗ್ಯ ಸ್ಥಾನ ಮತ್ತು ದಶಮಸ್ಥಾನದ ಅಧಿಪತಿಗಳ ದಶಾಬುಕ್ತಿಯಲ್ಲಿ ವಿವಾಹವಾಗುತ್ತದೆ. ಮಾಹಿತಿಗೆ ಸಂಪರ್ಕಿಸಿ, ಮೊ. 9611989120.
-ಸಿ. ರಂಗನಾಥರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


