ಭಕ್ತಿ-ಜ್ಯೋತಿಷ್ಯ

ನಿಮಗಿದೆಯೇ ಭೂ ಕಾಟ?

ನಿವೇಶನ ಖರೀದಿಸಲು, ಗೃಹ ನಿರ್ಮಿಸಲು, ಕಟ್ಟಡ ಕಟ್ಟಿಕೊಳ್ಳಲು, ಭೂ ಅಭಿವೃದ್ಧಿ ಕಾರ್ಯ ಮಾಡಲು, ನಿವೇಶನ, ಕಟ್ಟಡ...

Published On :

ನಿವೇಶನ ಖರೀದಿಸಲು, ಗೃಹ ನಿರ್ಮಿಸಲು, ಕಟ್ಟಡ ಕಟ್ಟಿಕೊಳ್ಳಲು, ಭೂ ಅಭಿವೃದ್ಧಿ ಕಾರ್ಯ ಮಾಡಲು, ನಿವೇಶನ, ಕಟ್ಟಡ, ಹೊಲಗದ್ದೆ ಮಾರಲು ಯಾವುದೇ ಅಡಚಣೆಯಾದರೆ ಜಾತಕದಲ್ಲಿ ನಾಲ್ಕನೇ ಅಧಿಪತಿ ಗ್ರಹಕ್ಕೆ ಶರಣಾಗಿ. ಆ ಗ್ರಹದ ಮಂತ್ರ ಜಪ, ಪೂಜೆ, ವಸ್ತುಗಳ ದಾನ ಮಾಡುವುದರಿಂದ ಭೂ ವ್ಯವಹಾರದ ಸಮಸ್ಯೆಗಳು ದೂರವಾಗುವುದು.
ನಿಮ್ಮ ಜಾತಕದಲ್ಲಿ ಲಗ್ನದಿಂದ 4ನೇ ಅಧಿಪತಿ ಯಾರೆಂದು ತಿಳಿದ ಮೇಲೆ, ತಿಳಿಸಿದ ಯಾವುದೇ ಪರಿಹಾರ ಒಂದನ್ನು ಆಸಕ್ತಿಯಿಂದ ಮಾಡಿದರೂ ಅನುಕೂಲವಾಗುವುದು.
4ನೇ ಸ್ಥಾನದಲ್ಲಿ ನೀಚಗ್ರಹವಿದ್ದರೂ ಅಥವಾ 4ನೇ ಸ್ಥಾನ ಪಾಪಕರ್ತರಿಗೆ ಒಳಪಟ್ಟಿದ್ದರೂ ಭೂ ವ್ಯವಹಾರದಲ್ಲಿ ಅಡಚಣೆ, ತೊಂದರೆ ತಪ್ಪಿದಲ್ಲ. ನವಗ್ರಹಗಳಲ್ಲಿ ಕುಜನು ಭೂಮಿಕಾರಕ. ಒಂದು ವೇಳೆ ಜಾತಕದಲ್ಲಿ ಕುಜ ತೊಂದರೆ ಮಾಡುವ ಸ್ಥಾನದಲ್ಲಿ ಸ್ಥಿತನಾಗಿದ್ದರೂ, ಭೂ ವ್ಯವಹಾರದಲ್ಲಿ ಅಡಚಣೆ ತಪ್ಪಿದ್ದಲ್ಲ. ಜಾತಕದಲ್ಲಿ 4ನೇ ಅಧಿಪತಿ, 4ನೇ ಸ್ಥಾನದಲ್ಲಿರತಕ್ಕ ಗ್ರಹ ಮತ್ತು ಕುಜ ಗ್ರಹದ ಬಲಾಬಲವನ್ನು ಪರಿಶೀಲಿಸಬೇಕು. ಇದರಲ್ಲಿ ಯಾವುದು ತೊಂದರೆದಾಯಕವೋ ಆ ಗ್ರಹದ ಪೂಜಾದಿ ಶಾಂತಿ ಕ್ರಮಗಳಿಂದ ಅಡಚಣೆ ನಿವಾರಿಸಿಕೊಳ್ಳಬಹುದು. 4ನೇ ಅಧಿಪತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
ಭೂ ವಿಚಾರವಾಗಿ ಹಲವರು ಕೋರ್ಟ್ ಮೆಟ್ಟಿಲೇರುವುದು, ಅನಾಹುತವಾಗುಗುವುದು, ಸಂಬಂಧ ಕಡಿದು  ಹೋಗಿರುವುದು, ಶಾಶ್ವತ ಮನಃಸ್ತಾಪ, ಗೃಹ ನಿರ್ಮಾಣ ಅರ್ಧಕ್ಕೆ ನಿಂತಿರುವುದು, ವಾಸಿಸುವ ಸ್ಥಳದಲ್ಲಿ ಅಶಾಂತಿ ಉಂಟಾಗಿರುವ ಉದಾಹರಣೆಗಳಿವೆ.
ಎಲ್ಲ ಅನುಕೂಲವಿದ್ದು, ಸ್ವಂತ ಮನೆಯಲ್ಲಿ ವಾಸಿಸುವಾಗ ಮನಶ್ಶಾಂತಿ ಇಲ್ಲದ ಪಕ್ಷದಲ್ಲಿ ಪ್ರತಿದಿನ ಸುಬ್ರಮಣ್ಯ ಸ್ವಾಮಿ ಪೂಜೆ ಮಾಡಿರಿ. ಆಸಕ್ತಿಯಿಂದ ಪೂಜೆ ಮಾಡಿದಾಗ ಶುಭಫಲ ಪ್ರಾಪ್ತಿಯಾಗುವುದು.

ಡಾ. ಎಸ್. ರಾಮಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.