ಕಾಂತಿ ಕರಗುವ ಕ್ಷಣ
ನೀವು ಒಬ್ಬ ಮನುಷ್ಯನ ಬಾಲ್ಯದಿಂದ ವಯಸ್ಕ ಹಂತದ ತನಕದ ಬೆಳವಣಿಗೆಯನ್ನು ಗಮನಿಸಿದರೆ ಆತನ ...

ನೀವು ಒಬ್ಬ ಮನುಷ್ಯನ ಬಾಲ್ಯದಿಂದ ವಯಸ್ಕ ಹಂತದ ತನಕದ ಬೆಳವಣಿಗೆಯನ್ನು ಗಮನಿಸಿದರೆ ಆತನ ತ್ವಚೆಯ ವರ್ಣ ಹಾಗೂ ರಚನೆಯಲ್ಲಿ ಆಗಿರುವ ಇಳಿತಗಳು ಗೊತ್ತಾಗುತ್ತವೆ. ಗುಲಾಬಿ ವರ್ಣದ ಚರ್ಮದೊಂದಿಗೆ ಕಂಗೊಳಿಸುವ ಶಿಶುವೂಋ ಬೆಳೆದು ಯವ್ವನಾವಸ್ಥೆಗೆ ತಲುಪಿದಾಗ ತ್ವಚೆಯ ವರ್ಣದಲ್ಲಿ ಆ ಬಾಲ್ಯದ ಕಾಂತಿ ಉಳಿಸಿಕೊಂಡಿರುವುದಿಲ್ಲ. ಇದಕ್ಕೆ ಕಾರಣವಿದೆ. ತಾಯಿ ಗರ್ಭದಲ್ಲಿ ಸಂಪೂರ್ಣವಾಗಿ ಸಂರಕ್ಷಿತನಾಗಿದ್ದ ಮನುಷ್ಯ ಬೆಳೆಯುವ ಹಂತದಲ್ಲಿ ಹಲವು ಅಸಹಜ ಅಭ್ಯಾಸಗಳಿಗೆ ಮುಖಮಾಡುತ್ತಾನೆ ಹಾಗೂ ಪ್ರಚೋದಿತನಾಗಿರುತ್ತಾನೆ.
ಉಸಿರಾಟದ ಕ್ರಿಯೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಮಗುವೊಂದು ಉಸಿರಾಡುವಾಗ ಅದರ ಹೊಟ್ಟೆಯ ಭಾಗದ ಏರಿಳಿತವನ್ನು ಗಮನಿಸಿ. ಉಚ್ವಾಸದಲ್ಲಿ ಹೊಟ್ಟೆ ಉಬ್ಬುತ್ತದೆ ಹಾಗೂ ನಿಶ್ವಾಸದಲ್ಲಿ ಇಳಿಯುತ್ತದೆ. ಅದೇ ನಿಮ್ಮ ಉಸಿರಾಟವನ್ನೊಮ್ಮೆ ಗಮನಿಸಿಕೊಳ್ಳಿ. ಅದು ಮಗುವಿನ ಉಸಿರಾಟ ಹಾಗೂ ಹೊಟ್ಟೆಯ ಏರಿಳಿತಕ್ಕೆ ವಿರುದ್ಧ ರೀತಿಯಲ್ಲಿರುತ್ತದೆ. ಮಗುವಿನಷ್ಟು ಉಬ್ಬರವಿಳಿತಗಳೂ ಇರುವುದಿಲ್ಲ. ಈ ಉಸಿರಾಟ ಕ್ರಿಯೆಯೂ ನಿಮ್ಮ ಆರೋಗ್ಯ ಸ್ಥಿತಿ ಹಾಗೂ ಬಾಹ್ಯರೂಪವನ್ನು ನಿರ್ಧರಿಸುತ್ತದೆ.
ಉಸಿರಾಟದಿಂದಾಗುವ ಕಿಬ್ಬೊಟ್ಟೆಯ ಏರಿಳಿತ ಹೆಚ್ಚಿದಷ್ಟೂ ವಪೆಯ ಏರಿಳಿತವೂ ಹೆಚ್ಚುತ್ತದೆ. ಇದು ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮನದಟ್ಟು ಮಾಡುತ್ತದೆ. ಅರ್ಥಾತ್, ಈ ಕ್ರಿಯೆಯಿಂದಾಗಿ ದೇಹದೊಳಗಿನ ಕಲುಷಿತ ಪ್ರಾಣವಾಯು ಪೂರ್ತಿಯಾಗಿ ಹೊರನಡೆದು, ಹೊರಗಿನ ವಾತಾವರಣದಿಂದ ಪರಿಶುದ್ಧ ಗಾಳಿ ತುಂಬಿಕೊಳ್ಳಲು ಸಹಾಯವಾಗುತ್ತದೆ. ಶ್ವಾಸಕೋಶ ಈ ರೀತಿಯಾಗಿ ಕೆಲಸ ಮಾಡದಿದ್ದಲ್ಲಿ, ಕಶ್ಮಲಯುತ ಗಾಳಿಯ ಅಂಶಗಳು ದೇಹದೊಳಗೆ ಉಳಿದುಕೊಂಡು ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ದೇಹದ ಸಹಜ ಕಾಂತಿ ಕುಂದುತ್ತದೆ.
ನಮ್ಮ ಭೌತಿಕ ದೇಹ 5 ಅಂಶಗಳಿಂದ ರಚಿಸಲ್ಪಟ್ಟಿದೆ. ಇದು ಪ್ರಭಾವಳಿ ಎಂದು ಕರೆಯಲ್ಪಡುವ ಹೊರಪದರದ ಒಟ್ಟು ಪ್ರತಿಫಲನವಾಗಿದ್ದು, ಇದರಲ್ಲಿ ಹಲವು ಶಕ್ತಿ ಕೇಂದ್ರಗಳು ಮತ್ತು ವಾಹಿನಿಗಳಿರುತ್ತವೆ. ಶಕ್ತಿಕೇಂದ್ರಗಳನ್ನು ಚಕ್ರಗಳು ಎನ್ನುತ್ತೇವೆ. ವಾಹಿನಿಗಳನ್ನು ನದಿಗಳು ಎನ್ನುತ್ತೇವೆ. ಉದಾಹರಣೆಗೆ, ದೇಹವನ್ನು ಹಗುರವಾಗಿಸುವ ಶ್ವಾಸಕೋಶ ಹಾಗೂ ಉಸಿರಾಟದ ವ್ಯವಸ್ಥೆಗಳು ಅನಾಹತ ಚಕ್ರದ ಪ್ರತಿಫಲನವಾಗಿವೆ. ಈ ಚಕ್ರಗಳು ಮೂರೂವರೆ ಬಾರಿ ಪ್ರದಕ್ಷಿಣ ಹಾಗೂ ಅಪ್ರದಕ್ಷಿಣವಾಗಿ ಸುರುಳಿಸುತ್ತಿ ಭೌತಿಕ ಹಾಗೂ ಹಗುರವಾದ ಪದರದೊಳಗೆ ತೂರಿಕೊಳ್ಳುತ್ತದೆ. ಚಕ್ರ ಪ್ರದಕ್ಷಿಣೆ ಹಾಕಿದಾಗ ಶುದ್ಧ ಪ್ರಾಣವಾಯುವನ್ನು ಒಳಗೆಳೆದುಕೊಳ್ಳುತ್ತದೆ. ಅಪ್ರದಕ್ಷಿಣೆ ಹಾಕಿದಾಗ ಭಾರದ ಪ್ರಾಣವಾಯುವನ್ನು ಹೊರತಳ್ಳುತ್ತದೆ.
ನಮ್ಮ ಅತಿಕ್ರಿಯಾಶೀಲ ಬದುಕಿನ ಶೈಲಿ ಹಾಗೂ ಅಸಹಜವಾದ ಪರಿಸರದ ಪ್ರಭಾವದಿಂದ, ಈ ಚಕ್ರಗಳ ಕ್ರಿಯೆ ಕುಂಠಿತವಾಗಿ ಪ್ರಾಣವಾಯುವಿನ ಒಳಹೊರ ಹರಿವಿನ ಮೇಲೆ ದುಷ್ಪರಿಣಾಮವಾಗುತ್ತದೆ. ಆಗ ಪ್ರಾಣಪದರ ಮತ್ತು ಭೌತಿಕ ದೇಹದಲ್ಲಿ ಇಕ್ಕಟ್ಟು ಸೃಷ್ಟಿಯಾಗುತ್ತದೆ. ಇದರಿಂದಾಗಿ ಕಾಯಿಲೆ ಮತ್ತು ಅಕಾಲ ವೃದ್ಧಾಪ್ಯ ಕಾಣಿಸಿಕೊಳ್ಳುತ್ತದೆ. 'ದ ಏಜ್‌ಲೆಸ್ ಡೈಮೆನ್ಷನ್' ಎಂಬ ಪುಸ್ತಕದಲ್ಲಿ ಇಂಥ ಹಲವು ಚಕ್ರಗಳ ಸಮರ್ಪಕ ಕ್ರಿಯೆಗಳಿಗಾಗಿ ಅನುಸರಿಸಬೇಕಾದ ಸನಾತನ ಕ್ರಿಯೆಗಳ ಬಗೆಗೆ ಸಾದ್ಯಂತವಾಗಿ ವಿವರಿಸಲಾಗಿದೆ. ಅದನ್ನು ಓದಿ ಅಭ್ಯಸಿಸುವುದರಿಂದ ಯವ್ವನವನ್ನು ಮತ್ತು ದೇಹದ ಕಾಂತಿಯನ್ನು ದೀರ್ಘಕಾಲ ಕಾಯ್ದಿತ್ತುಕೊಳ್ಳಬಹುದು. ಉಸಿರಾಟ ಕ್ರಿಯೆಯನ್ನು ಇನ್ನಷ್ಟು ಪರಿಪೂರ್ಣವಾಗಿಸಿಕೊಳ್ಳಲು 'ಉಜ್ಜೈ ಪ್ರಣವಂ' ಪ್ರಯೋಗವನ್ನು ಅಭ್ಯಾಸ ಮಾಡಬಹುದು.
--ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


